ಮುಂಬೈನಲ್ಲಿ ನಿರುದ್ಯೋಗಿ ನವದಂಪತಿ ನೇಣಿಗೆ ಶರಣು

ಮಹಾರಾಷ್ಟ್ರ, ಶನಿವಾರ, 23 ಸೆಪ್ಟಂಬರ್ 2017 (09:42 IST)

ಮಹಾರಾಷ್ಟ್ರ:  ನಿರುದ್ಯೋಗಿ ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಮುಂಬೈನ ಮಾಲಾಡ್ ಪ್ರದೇಶದಲ್ಲಿ ನಡೆದಿದೆ.


ಧನರಾಜ್(24), ಕಾಜಲ್(19) ಆತ್ಮಹತ್ಯೆಗೆ ಶರಣಾದ ದಂಪತಿ. ಕೆಲತಿಂಗಳ ಹಿಂದಷ್ಟೇ ಕಾಜಲ್, ಧನರಾಜ್ ಮದುವೆಯಾಗಿತ್ತು. ಮದುವೆಯಾದ ಸ್ವಲ್ಪ ದಿನದಲ್ಲೇ ಧನರಾಜ್ ಉದ್ಯೋಗ ಕಳೆದುಕೊಂಡಿದ್ದ. ಇದರಿಂದ ಬೇಸತ್ತು ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ದಂಪತಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಪೊಲೀಸರು ಇಬ್ಬರ ಶವವನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಈ ಕುರಿತು ತನಿಖೆ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ದಂಪತಿ ಆತ್ಮಹತ್ಯೆ ಧನರಾಜ್ ಕಾಜಲ್ Unemployment Suicide Mumbai Dhanraj Kajal

ಸುದ್ದಿಗಳು

news

18 ವಸಂತಗಳನ್ನ ಪೂರೈಸಿದ ವೆಬ್ ದುನಿಯಾ ಜಾಲತಾಣ

ಸಂಪೂರ್ಣ 18 ವರ್ಷಗಳ ಹಿಂದೆ ಯಾರೂ ಯೋಚಿಸದಂತಹ ಪ್ರಯತ್ನವನ್ನ ವೆಬ್ ದುನಿಯಾ ಮಾಡಿತ್ತು. ಸೆಪ್ಟೆಂಬರ್ 23, ...

news

ಚಿದಂಬರಂ ಕುಟುಂಬ ತಿಹಾರ್ ಜೈಲು ಸೇರಲಿದೆ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಚಿದಂಬರಂ ಅವರದ್ದು ವಂಚಕ ಕುಟುಂಬ. ಶೀಘ್ರದಲ್ಲೇ ಇಡೀ ಕುಟುಂಬ ತಿಹಾರ್ ಜೈಲು ಪಾಲಾಗಲಿದೆ ಎಂದು ...

news

ಅಭಿಮಾನಿಗಳಿಗೆ ಸುದೀಪ್, ಪುನೀತ್ ಕೊಟ್ಟ ಸ್ವೀಟ್ ನ್ಯೂಸ್ ಏನ್ ಗೊತ್ತಾ…?

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಒಟ್ಟಿಗೆ ತೆರೆ ಮೇಲೆ ...

news

ನೀವು ಏನಾದ್ರೂ ಮಾಡ್ಕೊಳ್ಳಿ, ಕಾಶ್ಮೀರ ವಿಷ್ಯದಲ್ಲಿ ನಾವು ಬರಲ್ಲ ಎಂದ ಚೀನಾ

ನವದೆಹಲಿ: ಕಾಶ್ಮೀರ ಗಡಿ ವಿವಾದ ವಿಚಾರದಲ್ಲಿ ಚೀನಾವನ್ನು ಎಳೆದು ತರಲು ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ...

Widgets Magazine
Widgets Magazine