ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ರೆ ನಂಗೇನೂ ಆಗಲ್ಲ ಎಂದ ಕೇಂದ್ರ ಸಚಿವ

ನವದೆಹಲಿ, ಭಾನುವಾರ, 16 ಸೆಪ್ಟಂಬರ್ 2018 (10:57 IST)

ನವದೆಹಲಿ: ದೇಶದಲ್ಲಿ ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ರಾಮ್ ದಾಸ್ ಅಥವಾಲೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
 
‘ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ್ರೂ ನಾನು ಸಚಿವನಾಗಿರುವುದರಿಂದ ನನ್ನ ಮೇಲೆ ಏನೂ ಪರಿಣಾಮವಾಗಲ್ಲ. ನನಗೆ ಇದರಿಂದ ಯಾವುದೇ ನಷ್ಟವಿಲ್ಲ. ಒಂದು ವೇಳೆ ನನ್ನ ಸಚಿವ ಸ್ಥಾನ ಹೋದರೆ ನನಗೆ ನಷ್ಟವಾಗಬಹುದು’ ಎಂದು ರಾಮದಾಸ್ ಹಗುರವಾಗಿ ಹೇಳಿ ವಿವಾದ ಸೃಷ್ಟಿಸಿದ್ದಾರೆ.
 
ಹಾಗಿದ್ದರೆ ಜನ ಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಹೌದು ಜನಸಾಮಾನ್ಯರ ಹೊರೆಯನ್ನು ತಗ್ಗಿಸುವುದು ಸರ್ಕಾರದ ಕೆಲಸ. ರಾಜ್ಯ ಸರ್ಕಾರಗಳು ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಬಹುದು’ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ದಾಖಲೆ ಏರಿಕೆ

ನವದೆಹಲಿ: ದೇಶದಲ್ಲಿ ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ...

news

ಭಾರತ್ ಬಂದ್ ದಿನ ಕಚೇರಿಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾದ ತ್ರಿಪುರಾ ಸರ್ಕಾರ

ನವದೆಹಲಿ: ಕಾಂಗ್ರೆಸ್ ನೇತೃತ್ವದಲ್ಲಿ ಸೆಪ್ಟೆಂಬರ್ 10 ರಂದು ದೇಶದಾದ್ಯಂತ ತೈಲ ಬೆಲೆ ಏರಿಕೆ ವಿರೋಧಿಸಿ ...

news

ಪತ್ನಿಯ ಲವ್ವರ್ ನಿಂದಲೇ ಹತ್ಯೆಗೀಡಾದ ಸಮಾಜವಾದಿ ಪಕ್ಷದ ನಾಯಕ

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಜಗದೀಶ್ ಮಾಲಿ (35) ಪತ್ನಿಯ ಪ್ರಿಯಕರನ ಗುಂಡಿನ ದಾಳಿಗೆ ಮೃತಪಟ್ಟಿರುವ ...

news

ತಪ್ಪು ನಿಮ್ಮಲ್ಲೇ ಇಟ್ಕೊಂಡು ನಮ್ಮನ್ನು ಯಾಕೆ ದೂಷಿಸ್ತೀರಿ? ಬಿಜೆಪಿ ಪ್ರಶ್ನೆ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ತನ್ನ ಮೇಲೆ ...

Widgets Magazine
Widgets Magazine