ಗಣಿತ ವಿಷಯಕ್ಕೆ ಆದ್ಯತೆ ಕೊಡು ಎಂದ ತಂದೆಯನ್ನೇ ಹತ್ಯೆಗೈದ 16ರ ವಿದ್ಯಾರ್ಥಿ

ಲಕ್ನೋ, ಮಂಗಳವಾರ, 8 ಆಗಸ್ಟ್ 2017 (13:06 IST)

ಪುತ್ರ ಇಂಜಿನಿಯರ್ ಆಗಬೇಕೆಂದು ಬಯಸಿ ವಿಷಯಕ್ಕೆ ಹೆಚ್ಚು ಒತ್ತು ಕೊಡು ಎಂದು ಪುತ್ರನ ಮೇಲೆ ಒತ್ತಡ ಹೇರಿರುವುದೇ ತಂದೆಯ ಹತ್ಯೆಗೆ ಕಾರಣವಾಯಿತು ಎಂದರೆ ನಂಬಲು ಸಾಧ್ಯವೇ? ನಂಬಲೇಬೇಕು ಇದು ಸತ್ಯ ಘಟನೆ.
 
ಉತ್ತರಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿರುವ 45 ವರ್ಷ ವಯಸ್ಸಿನ ಮೋತಿಲಾಲ್ ಪಾಲ್, ಪುತ್ರ ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುತ್ತಿದ್ದನು. ಅದಕ್ಕಾಗಿ 16 ವರ್ಷ ವಯಸ್ಸಿನ ಪುತ್ರನಿಗೆ ಗಣಿತ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ತೋರು ಎಂದು ಬುದ್ದಿವಾದ ಹೇಳುತ್ತಿದ್ದನು. ಆದರೆ, ಪುತ್ರ ರಾಜಾ ಪಾಲ್ ಅಲಿಯಾಸ್ ಪ್ರಿನ್ಸ್‌ಗೆ ಗಣಿತ ಎಂದರೆ ಅಲರ್ಜಿ. ಆದ್ದರಿಂದ ಹಲವಾರು ಬಾರಿ ತಂದೆಯಿಂದಲೇ ಎಟು ತಿಂದಿದ್ದನು ಎನ್ನಲಾಗಿದೆ.  
 
ತಂದೆ ಮೋತಿಲಾಲ್‌ಗೆ ಬುದ್ದಿವಾದ ಹೇಳಿದ್ದಕ್ಕಾಗಿ ಪುತ್ರನೇ ಹತ್ಯೆ ಮಾಡುತ್ತಾನೆ ಎಂದು ಕನಸಿನಲ್ಲಿಯೂ ಉಹಿಸಿರಲಿಲ್ಲ.
 
16 ವರ್ಷ ವಯಸ್ಸಿನ ಪ್ರಿನ್ಸ್, ಮನೆಯಲ್ಲಿದ್ದ ತಂದೆಯ ಗನ್ ತೆಗೆದುಕೊಂಡು ನಿದ್ರೆಯಲ್ಲಿದ್ದ ತಂದೆಯೇ ಮೇಲೆ ಗುಂಡುಹಾರಿಸಿ ಹತ್ಯೆಗೈದಿದ್ದಾನೆ. ತಂದೆಯನ್ನು ಹತ್ಯೆ ಮಾಡಿದ್ದಲ್ಲದೇ ತಾಯಿ ಮತ್ತು ಸಹೋದರಿಯನ್ನು ಗನ್‌ನಿಂದ ಬೆದರಿಸಿ ಸುಮಾರು 30 ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.  
 
ಕಳೆದ ರವಿವಾರದಂದು ರಾತ್ರಿ ಸಂಬಂಧಿಯೊಬ್ಬರು ಹತ್ಯೆಯಾದ ಪೊಲೀಸ್ ಪೇದೆಯ ಮನೆಗೆ ಭೇಟಿ ನೀಡಿದಾಗ, ಆರೋಪಿ ಬಾಲಕ ತಾಯಿ ಸಹೋದರಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಜಯಪುರ ಕೋರ್ಟ್ ಆವರಣದಲ್ಲೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. 2013ರ ಕೊಲೆ ಪ್ರಕರಣವೊಂದರ ಆರೋಪಿ ಬಾಗಪ್ಪ ಹರಿಜನ ...

ವಿಜಯಪುರ ಕೋರ್ಟ್ ಆವರಣದಲ್ಲೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. 2013ರ ಕೊಲೆ ಪ್ರಕರಣವೊಂದರ ಆರೋಪಿ ಬಾಗಪ್ಪ ಹರಿಜನ ...

news

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೇ ಕೈ ಕೊಟ್ಟರಾ ಶಾಸಕರು?

ನವದೆಹಲಿ: ಗುಜರಾತ್ ನಲ್ಲಿ ಇಂದು ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹಮ್ಮದ್ ...

news

ಪಾಕಿಸ್ತಾನದ ಹಿಂದೂ ಸಂಸದನಿಗೆ ತಪರಾಕಿ

ಇಸ್ಲಾಮಾಬಾದ್: ಪಾಕಿಸ್ತಾನ ಸಂಸದರ ಪೈಕಿ ಕೆಲವೇ ಮಂದಿ ಹಿಂದೂ ಧರ್ಮಕ್ಕೆ ಸೇರಿದ ಸಂಸದರಿದ್ದಾರೆ. ...

Widgets Magazine