ತ್ರಿವಳಿ ತಲಾಖ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶದ ಸಚಿವ

ಲಖನೌ, ಶನಿವಾರ, 29 ಏಪ್ರಿಲ್ 2017 (18:50 IST)

Widgets Magazine

ತ್ರಿವಳಿ ತಲಾಖ್ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಸಚಿವ ತ್ರಿವಳಿ ತಲಾಖ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮ ಕಾಮದ ಹಸಿವು ತೀರಿಸಿಕೊಳ್ಳುವುದಕ್ಕಾಗಿ ಪತ್ನಿಯರನ್ನ ಬದಲಿಸಲು ಮುಸ್ಲಿಮರು ತ್ರಿವಳಿ ತಲಾಖ್ ಬಳಸುತ್ತಿದ್ದಾರೆ ಎಂದು ಸಚಿವ ಸ್ವಾಮಿ ಹೇಳಿದ್ದಾರೆ.
 


ಇದೇವೇಳೆ, ತ್ರಿವಳಿ ತಲಾಖ್`ಗೆ ಯಾವುದೇ ಆಧಾರವಿಲ್ಲ ಎಂದಿರುವ ಸಚಿವ ಮೌರ್ಯ,   ವಿನಾಕಾರಣ ತಲಾಖ್ ನೀಡಲ್ಪಟ್ಟಿರುವ ಮಹಿಳೆಯರ ಪರವಾಗಿ ಬಿಜೆಪಿ ಇದೆ ಎಂದಿದ್ಧಾರೆ.
 
`ತಲಾಖ್`ಗೆ ಯಾವುದೇ ಆಧಾರವಿಲ್ಲ. ಕೇವಲ ತಮ್ಮ ಕಾಮಕ್ಕಾಗಿ ಬಳಸಿಕೊಂಡು ಪತ್ನಿ ಮತ್ತು ಮಕ್ಕಳನ್ನ ಬೀದಿಗೆ ಬಿಡುತ್ತಿದ್ದಾರೆ. ಅಂತಹ ಸಂತ್ರಸ್ತ ಮಹಿಳೆಯರ ಪರ ಬಿಜೆಪಿ ಇದೆ. ಅವರು ಗೌರವದಿಂದ ಬಾಳಲು ನೆರವು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
 
ಸಚಿವ ಮೌರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಇಸ್ಲಾಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್, ಬೇಷರತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬೆಳಗಾವಿಯ ಹಂಗರಗಾದಲ್ಲಿ ವಿಚಿತ್ರ ಘಟನೆ: ಮನೆಯಲ್ಲಿ ಕುದಿಯುತ್ತಿದೆ ಭೂಮಿ

ಮನೆಯ ನಿರ್ದಿಷ್ಟ ಜಾಗದಲ್ಲಿ ಭೂಮಿ ಕುದಿಯುತ್ತಿರುವ ವಿಚಿತ್ರ ಪ್ರಕರಣ ಬೆಳಗಾವಿ ಜಿಲ್ಲೆಯ ಹಂಗರಗಾ ...

news

ಬಿಜೆಪಿ ಬಿಕ್ಕಟ್ಟು: ಮುರಳೀಧರ್ ರಾವ್ ಇಂದು ಬೆಂಗಳೂರಿಗೆ

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲವೆಂಬುದು ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದ ಅತೃಪ್ತರ ಸಭೆ ಬಳಿಕ ...

news

ವಿಷ ಸೇವಿಸಿ ಸಚಿವರೆದುರೇ ಆತ್ಮಹತ್ಯೆಗೆ ಯತ್ನಿಸಿದ ರೈತ

ಸರ್ಕಾರ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಕೊಟ್ಟಿಲ್ಲವೆಂದು ಸಚಿವರೆದುರೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ...

news

ರೇಪ್ ಆರೋಪಿ ಸಂಸದನಿಗೆ ಬೇಲ್ ಕೊಟ್ಟ ನ್ಯಾಯಾಧೀಶರೇ ಸಸ್ಪೆಂಡ್!

ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ ಬಿಎಸ್ ಪಿ ನಾಯಕ ಗಾಯತ್ರಿ ಪ್ರಜಾಪತಿಗೆ ಅತ್ಯಾಚಾರ ಪ್ರಕರಣದಲ್ಲಿ ...

Widgets Magazine