Widgets Magazine

ಗುಜರಾತ್ ಗೆ ಇಂದು ‘ವಾಯು’ ದಾಳಿ: ಶಾಲಾ ಕಾಲೇಜುಗಳಿಗೆ ರಜೆ

ನವದೆಹಲಿ| Krishnaveni K| Last Modified ಬುಧವಾರ, 12 ಜೂನ್ 2019 (10:17 IST)
ನವದೆಹಲಿ: ಗುಜರಾತ್ ಕರಾವಳಿಗೆ ಇಂದು ವಾಯು ಅಪ್ಪಳಿಸಲಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 
ಒರಿಸ್ಸಾ, ಪ.ಬಂಗಾಲ ಕರಾವಳಿಗೆ ಪೂನಿ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಗುಜರಾತ್ ಮೇಲೆ ವಾಯು ಚಂಡಮಾರುತ ಬೀಸಲಿದೆ. ಕರಾವಳಿ ಭಾಗದಲ್ಲಿ ಗಂಟೆಗೆ ಸುಮಾರು 110 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
 
ಇನ್ನು, ಒರಿಸ್ಸಾದಲ್ಲಿ ಮಾಡಿದ್ದ ಮಾದರಿಯಲ್ಲೇ ಇಲ್ಲೂ ಪರಿಹಾರ ಕಾರ್ಯಾಚರಣೆ ನಡೆಸಲು ತಯಾರಿ ನಡೆಸಲಾಗಿದೆ. ಚಂಡಮಾರುತ ಪರಿಣಾಮ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ.
ಇದರಲ್ಲಿ ಇನ್ನಷ್ಟು ಓದಿ :