ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದ ವೀರಪ್ಪ ಮೊಯಿಲಿ!

Bangalore, ಬುಧವಾರ, 12 ಏಪ್ರಿಲ್ 2017 (10:11 IST)

Widgets Magazine

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಪಕ್ಷದ ನಾಯಕರೇ ಕಿಡಿಕಾರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಆ ಸಾಲಿಗೆ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಸೇರ್ಪಡೆಗೊಂಡಿದ್ದಾರೆ.


 
 
ಇಲೆಕ್ಟ್ರಾನಿಕ್ ಮತಯಂತ್ರದ ಬಳಕೆ ನಿಲ್ಲಿಸಬೇಕೆಂದು, ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ. ಇದಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಮೊಯಿಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
 
‘ನಾನು ಕಾನೂನು ಸಚಿವನಾಗಿದ್ದಾಗಲೇ ಮತಯಂತ್ರಗಳನ್ನು ಜಾರಿಗೆ ತರಲಾಯಿತು. ಆರಂಭದಲ್ಲಿ ಹಲವು ನ್ಯೂನ್ಯತೆಗಳಿದ್ದವು. ಆದರೆ ಅದನ್ನೆಲ್ಲಾ ಸರಿಪಡಿಸಲಾಯಿತು. ಆಮೇಲೆ ನಿಮಗೇ ಗೊತ್ತು. ಇವಿಎಂ ಯಂತ್ರಗಳು ಜನಪ್ರಿಯವಾದವು. ಅದರ ಬಳಕೆ ವಿರೋಧಿಸುವುದು ಸರಿಯಲ್ಲ’ ಎಂದಿದ್ದಾರೆ.
 
 
ಕಾಂಗ್ರೆಸ್ ಸೇರಿದಂತೆ 13 ರಾಷ್ಟ್ರೀಯ ಪಕ್ಷಗಳು, ಚುನಾವಣಾ ಆಯೋಗಕ್ಕೆ ಬಳಕೆ ನಿಲ್ಲಿಸುವಂತೆ ಮನವಿ ಮಾಡಿವೆ. ಈ ವಿಚಾರದಲ್ಲಿ ನನ್ನನ್ನೂ ಸೇರಿದಂತೆ ಹಲವರ ಅಭಿಪ್ರಾಯ ಕೇಳಲಿಲ್ಲ ಎಂದು ಮೊಯಿಲಿ ಆರೋಪಿಸಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪುತ್ರ ರಾಹುಲ್ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು ಗೊತ್ತಾ?

ನವದೆಹಲಿ: ಕಾಂಗ್ರೆಸ್ ಪಕ್ಷ ಸೋಲಿನಿಂದ ಹೊರಬೇಕಾದರೆ, ಸಮಗ್ರ ಬದಲಾವಣೆಯಾಗಬೇಕು ಎಂಬ ಮಾತು ಕೇಳಿಬರುತ್ತಿದೆ. ...

news

ಡೊನಾಲ್ಡ್ ಟ್ರಂಪ್ ಸಿರಿಯಾ ಮೇಲೆ ದಾಳಿ ನಡೆಸಲು ಈ ಮಹಿಳೆ ಕಾರಣ..?

ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣಿರುತ್ತಾಳೆ ಎಂಬ ಮಾತನ್ನ ಕೇಳೇ ಇರುತ್ತೀರಿ. ಅಮೆರಿಕ ...

news

ಗೋವಾ ಬೀಚ್ ನಲ್ಲಿ ಇನ್ನು ಪಾರ್ಟಿ ಮಾಡುವಂತಿಲ್ಲ!

ಪಣಜಿ: ಗೋವಾ ಬೀಚ್ ಎಂದರೆ ಸಾಕು, ಪಾರ್ಟಿ, ಮಸ್ತ್ ಮಜಾ ನೆನಪಾಗುವುದು. ಆದರೆ ಇದೆಲ್ಲದಕ್ಕೂ ಇನ್ನು ಕತ್ತರಿ ...

news

ನೀವೆಷ್ಟು ತಿನ್ನಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸುತ್ತದೆ!

ನವದೆಹಲಿ: ಇನ್ನು ಮುಂದೆ ಹೋಟೆಲ್ ಗೆ ಹೋಗಿ ಬೇಕಾಬಿಟ್ಟಿ ಆಹಾರ ವೇಸ್ಟ್ ಮಾಡುವಂತಿಲ್ಲ. ನಿಮ್ಮ ಪ್ಲೇಟ್ ...

Widgets Magazine Widgets Magazine