ಉಷಾ ಪತಿಯಾಗಿರುತ್ತೇನೆಂದಿದ್ದ ವೆಂಕಯ್ಯ ನಾಯ್ಡು ಇಂದು ಉಪರಾಷ್ಟ್ರಪತಿ ಹುದ್ದೆಗಾಗಿ ನಾಮಪತ್ರ ಸಲ್ಲಿಕೆ!

NewDelhi, ಮಂಗಳವಾರ, 18 ಜುಲೈ 2017 (10:46 IST)

ನವದೆಹಲಿ: ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಲಿದ್ದಾರೆ ಎಂಬ ಸುದ್ದಿ ಬಂದಾಗಲೆಲ್ಲಾ ನಾನು ಉಪರಾಷ್ಟ್ರಪತಿಯಾಗಲ್ಲ, ಕೇವಲ ಉಷಾ ಪತಿಯಾಗಿರುತ್ತೇನೆ ಎಂದು ಮಾತು ಹಾರಿಸುತ್ತಿದ್ದರು. ಅಂತಹ ವೆಂಕಯ್ಯ ನಾಯ್ಡು ಇಂದು ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.


 
ಉಷಾ ಎಂದರೆ ವೆಂಕಯ್ಯ ನಾಯ್ಡು ಪತ್ನಿಯ ಹೆಸರು. ತಮ್ಮ ಹೆಸರು ಉಪರಾಷ್ಟ್ರಪತಿ ಹುದ್ದೆಗೆ ಥಳುಕು ಹಾಕಿಕೊಂಡಾಗಲೆಲ್ಲಾ ವೆಂಕಯ್ಯ ನಾಯ್ಡು ಹೀಗೇ ಹಾಸ್ಯ ಮಾಡಿ ಮಾತು ಹಾರಿಸುತ್ತಿದ್ದರು. ಆದರೆ ಇಂದೀಗ ಉಷಾ ಪತಿ ಉಪರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸವುದು ಪಕ್ಕಾ ಆಗಿದೆ.
 
ಮೂಲತಃ ಆಂಧ್ರದವಾರದೂ ಅವರಿಗೆ ಕರ್ನಾಟಕ ನಂಟು ಜಾಸ್ತಿ.ಇಲ್ಲಿಂದಲೇ ರಾಜ್ಯ ಸಭೆಗೆ ಆಯ್ಕೆಯಾದವರು. ಇದುವರೆಗಿನ ತಮ್ಮ ರಾಜಕೀಯ ಜೀವನದಲ್ಲಿ ಕಳಂಕ ಹೊಂದದವರು. ಹಾಗಾಗಿ ಕ್ಲೀನ್ ಇಮೇಜ್ ನ ಬಿಜೆಪಿಯ ಹಿರಿಯ ನಾಯಕ ಉಪರಾಷ್ಟ್ರಪತಿ ಹುದ್ದೆಗೇರಲು ರೆಡಿಯಾಗಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಉತ್ತರ ಭಾರತದವರನ್ನು ಆರಿಸಿದ್ದಕ್ಕೆ, ಉಪರಾಷ್ಟ್ರಪತಿ ಹುದ್ದೆಗೆ ದಕ್ಷಿಣ ಭಾರತದವರಿಗೆ ಪ್ರಾತಿನಿಧ್ಯ ತೋರಲು ಬಿಜೆಪಿ ನಿರ್ಧರಿಸಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಅವರಿಗೆ ಹೆಚ್ಚಿನ ಪಕ್ಷಗಳು ಬೆಂಬಲ ನೀಡುವ ನಿರೀಕ್ಷೆಯಿದೆ.
 
ಇದನ್ನೂ ಓದಿ.. ಸಿನಿಮಾ ನೋಡಲು ಬಂದ ನಟಿಗೆ ಚಿತ್ರಮಂದಿರದಲ್ಲಿ ಕಿರುಕುಳ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಚುನಾವಣೆ ಬಿಜೆಪಿ ರಾಷ್ಟ್ರೀಯ ಸುದ್ದಿಗಳು Bjp Venkaih Naidu National News Vice President Election

ಸುದ್ದಿಗಳು

news

ಡಿಐಜಿ ರೂಪಾ ವರ್ಗಾವಣೆ: ಸರ್ಕಾರದ ನಿರ್ಧಾರ ಖಂಡಿಸಿ ಜೈಲಿನಲ್ಲಿ ಖೈದಿಗಳ ಪ್ರತಿಭಟನೆ

ಡಿಐಜಿ ರೂಪಾ ಅವರ ವರ್ಗಾವಣೆಯನ್ನು ಖಂಡಿಸಿ ಹಾಗೂ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದುಕೊಳ್ಳಬೇಕೆಂದು ...

news

ಪತ್ನಿಗೆ ಧೈರ್ಯ ಹೇಳಲು ಓಡೋಡಿ ಬಂದ ಡಿಐಜಿ ರೂಪಾ ಪತಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳನ್ನು ಹೊರಗೆಳೆದು ವಿವಾದಕ್ಕೆ ಗುರಿಯಾದ ಡಿಐಜಿ ರೂಪಾಗೆ ...

news

ಟೀಂ ಇಂಡಿಯಾ ಕ್ರಿಕೆಟಿಗನ ತಂದೆಗೆ ಇರಿತ

ಲಕ್ನೋ: 2007 ರ ಟಿ20 ವಿಶ್ವಕಪ್ ಫೈನಲ್ ನ ಕೊನೆಯ ಓವರ್ ನ ಹೀರೋ ಟೀಂ ಇಂಡಿಯಾ ಕ್ರಿಕೆಟಿಗ ಜೋಗಿಂದರ್ ಶರ್ಮಾ ...

news

ಸದ್ದಿಲ್ಲದೇ ಚೀನಾ ಮೀರಿಸಿದ ಭಾರತ

ನವದೆಹಲಿ: ಚೀನಾ ಗಡಿಯಲ್ಲಿ ತಗಾದೆ ತೆಗೆಯುವುದರಲ್ಲೇ ಬ್ಯುಸಿಯಾಗಿದ್ದರೆ, ಭಾರತ ಸದ್ದಿಲ್ಲದೆಯೇ ಆ ದೇಶವನ್ನು ...

Widgets Magazine