ನಿರ್ಗಮನದ ಸಮಯದಲ್ಲಿ ವಿವಾದ ಮೈಮೇಲೆಳೆದುಕೊಂಡ ಉಪರಾಷ್ಟ್ರಪತಿ

ನವದೆಹಲಿ, ಶುಕ್ರವಾರ, 11 ಆಗಸ್ಟ್ 2017 (09:19 IST)

ನವದೆಹಲಿ: ಭಾರತದ ಉಪರಾಷ್ಟ್ರಪತಿಯಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿ ಇದೀಗ ನಿರ್ಗಮಿತವಾಗುತ್ತಿರುವ ಹಮೀದ್ ಅನ್ಸಾರಿ ಕೊನೆ ಗಳಿಗೆಯಲ್ಲಿ ಹೇಳಿಕೆಯೊಂದನ್ನು ನೀಡಿ ವೃಥಾ ವಿವಾದ ಮೈಮೇಲೆಳೆದುಕೊಂಡಿದ್ದಾರೆ.


 
ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶದಲ್ಲಿ ಸದ್ಯಕ್ಕೆ ಗೋ ರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ ಎಂಬ ಭಾವನೆ ಮೂಡುತ್ತಿದೆ ಎಂದಿದ್ದರು.
 
ಈ ಹೇಳಿಕೆಗೆ ಇದೀಗ ಬಿಜೆಪಿ ಸೇರಿದಂತೆ ಹಲವೆಡೆಯಿಂದ ವಿರೋಧ ವ್ಯಕ್ತವಾಗಿದೆ. ‘ಭಾರತದಷ್ಟು ಸುರಕ್ಷಿತ ಸ್ಥಳ ಮುಸ್ಲಿಮರಿಗೆ ಬೇರೊಂದಿಲ್ಲ. ಹಾಗೆಯೇ ಹಿಂದೂಗಳಷ್ಟು ಒಳ್ಳೆಯ ಸ್ನೇಹಿತರೂ ಮುಸ್ಲಿಮರಿಗಿಲ್ಲ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. 10 ವರ್ಷಗಳ ಕಾಲ ಹಿಂದೂ ಬಹುಸಂಖ್ಯಾತರಿರುವ ದೇಶವೊಂದು ಮುಸ್ಲಿಮರಾದ ನಿಮ್ಮನ್ನು ರಾಷ್ಟ್ರಪತಿಯಾಗಿ ಇರಿಸಿಕೊಂಡಿದೆ ಎಂದರೆ ಅದಕ್ಕಿಂತ ದೊಡ್ಡ ಗೌರವ ನಿಮಗೆ ಬೇಕೇ ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಪ್ರಶ್ನಿಸಿದ್ದಾರೆ.
 
ಇದನ್ನೂ ಓದಿ… ನೀವು ಧೂಮಪಾನಿಗಳೇ? ಹಾಗಿದ್ದರೆ ನಿಮಗೆ ಈ ಅಪಾಯ ತಪ್ಪಿದ್ದಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮುಸ್ಲಿಂ ಹಿಂದೂ ರಾಷ್ಟ್ರೀಯ ಸುದ್ದಿಗಳು Muslim Hindu Hamid Ansari Vice President National News

ಸುದ್ದಿಗಳು

news

‘ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಶಾಕ್ ಕೊಡ್ತಾರೆ ರಾಹುಲ್ ಗಾಂಧಿ’

ನವದೆಹಲಿ: ಗುಜರಾತ್ ನಲ್ಲಿ ರಾಜ್ಯಸಭೆ ಚುನಾವಣೆ ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್ ನ ಅಹಮ್ಮದ್ ಪಟೇಲ್ ...

news

‘ಸ್ಮೃತಿ ಇರಾನಿ ಕೇಂದ್ರ ಸಚಿವರೋ ಬಿಜೆಪಿ ವಕ್ತಾರರೋ?’

ಬೆಂಗಳೂರು: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರನ್ನು ಲೇವಡಿ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ...

news

ಪೊಲೀಸರಿಂದ ಕಿಡ್ನಾಪರ್ಸ್ ಮೇಲೆ ಶೂಟೌಟ್: ಆರೋಪಿಗಳು ಅರೆಸ್ಟ್

ಬೆಂಗಳೂರು: ಮೂವರು ಉದ್ಯಮಿಗಳನ್ನು ಅಪಹರಿಸಿ, ಬೆದರಿಸಿ 8 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ಕಿತ್ತುಕೊಂಡಿದ್ದ ...

news

ಪುತ್ರಿಯ ಮೇಲೆ 600 ಬಾರಿ ರೇಪ್ ಎಸಗಿದ ತಂದೆಗೆ 12 ಸಾವಿರ ವರ್ಷ ಶಿಕ್ಷೆ

ಕೌಲಾಲುಂಪುರ್: 15 ವರ್ಷದ ಪುತ್ರಿಯ ಮೇಲೆ 600 ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿರುವುದು ಸಾಬೀತಾದಲ್ಲಿ ...

Widgets Magazine