ವೃತ್ತಿ ಬದುಕಿಗೆ ಇಂದು ವಿರಾಟ್ ನಿವೃತ್ತಿ!

NewDelhi, ಸೋಮವಾರ, 6 ಮಾರ್ಚ್ 2017 (09:53 IST)

Widgets Magazine

ನವದೆಹಲಿ: ಇದೇನಾಗಿ ಹೋಯ್ತು. ಇಷ್ಟು ಬೇಗ ಟೀಂ ಇಂಡಿಯಾ ಪ್ರದರ್ಶನ ವಿರಾಟ್ ಗೆ ಬೇಸರ ತಂದಿತಾ? ಇಷ್ಟು ಬೇಗ ನಿವೃತ್ತಿಯಾಗುತ್ತಾರಾ? ಹಾಗಂತ ಗಾಬರಿಯಾಗಬೇಡಿ. ನಿವೃತ್ತಿಯಾಗುತ್ತಿರುವರ ಹೆಸರು ವಿರಾಟ್ ನಿಜ. ಆದರೆ ಕೊಹ್ಲಿಯಲ್ಲ. ಐಎನ್ ಎಸ್ ವಿರಾಟ್ ಎಂಬ ನೌಕೆ.


 
ಭಾರತೀಯ ನೌಕಾ ಪಡೆಯ ಹೆಮ್ಮೆಯ ಯುದ್ಧ ನೌಕೆಯಾಗಿದ್ದ ಐಎನ್ ಎಸ್ ವಿರಾಟ್ ಆರು ದಶಕಗಳ ಸೇವೆ ಸಲ್ಲಿಸಿ ಇಂದಿಗೆ ತನ್ನ ವೃತ್ತಿ ಕೊನೆಗೊಳಿಸಲಿದೆ. ಅಂದರೆ ಇಂದಿನಿಂದ ವಿರಾಟ್ ಸೇವೆ ಸ್ಥಗಿತಗೊಳಿಸಲಿದೆ. ಇದನ್ನು ಇನ್ನು ಹರಾಜಿಗಿಡಲಾಗುವುದು. ನಾಲ್ಕು ತಿಂಗಳು ಕಾಲಾವಧಿಯಲ್ಲಿ ಯಾರೂ ಕೊಳ್ಳುವವರಿಲ್ಲದಿದ್ದರೆ, ನೌಕೆಯನ್ನು ಒಡೆದು ಅದರ ಭಾಗಗಳನ್ನು ಮಾರಲಾಗುವುದು ಎಂದು ನೌಕಾ ದಳದ ಮುಖ್ಯಸ್ಥ ಸುನಿಲ್ ಲಾಂಬ ತಿಳಿಸಿದ್ದಾರೆ.
 
ಆಂಧ್ರ ಪ್ರದೇಶ ಸರ್ಕಾರ ಈ ಐತಿಹಾಸಿಕ ನೌಕೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವ ಬಯಕೆ ವ್ಯಕ್ತಪಡಿಸಿತ್ತು. ಆದರೆ ಇದಕ್ಕಾಗಿ ಸುಮಾರು 1000 ಕೋಟಿ ವೆಚ್ಚ ತಗಲಬಹುದಾಗಿದೆ. ಸದ್ಯ ಗುಜರಾತ್ ನ ಸಮುದ್ರ ವಲಯದಲ್ಲಿರುವ ವಿರಾಟ್ ಇನ್ನು ಮುಂದೆ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕರೆಂಟ್ ಬಿಲ್ ಬಾಕಿಯಿದ್ರೆ ಚುನಾವಣೆ ಅವಕಾಶವಿಲ್ಲ!

ನವದೆಹಲಿ: ಕರೆಂಟ್ ಬಿಲ್ ಗೂ ರಾಜಕಾರಣಿಗಳಿಗೂ ಎತ್ತಣ ಸಂಬಂಧ? ಅದೇನೇ ಇದ್ದರೂ, ಚುನಾವಣಾ ಆಯೋಗ ...

news

ವಿಶಿಷ್ಟ ಜಾತ್ರೆ: ದೇವರಿಗೆ ಸಿಗರೇಟ್ ಆರತಿ, ಮದ್ಯದಭಿಷೇಕ

ದೇವರಿಗೆ ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸಿ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ದೇವರಿಗೆ ಮದ್ಯ, ...

news

ಜಲ್ಲಿಕಟ್ಟುಗೆ 2 ಬಲಿ: 60ಕ್ಕೂ ಹೆಚ್ಚು ಮಂದಿಗೆ ಗಾಯ

ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜನೆ ವೇಳೆ ಸ್ಪರ್ಧಾಳು ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ...

news

ಪುಲ್ವಾಮಾ ಎನ್`ಕೌಂಟರ್: ಇಬ್ಬರು ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ದಕ್ಷಿಣ ಕಾಶ್ಮೀರದ ಪುಲ್ವಾಮಾದ ಟ್ರಾಲ್`ನಲ್ಲಿ ನಡೆಯುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವಿನ ...

Widgets Magazine Widgets Magazine