ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಗೆ ಮತ: ಜೆಡಿಯು

ನವದೆಹಲಿ, ಸೋಮವಾರ, 31 ಜುಲೈ 2017 (20:35 IST)

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಯು ಶಾಸಕರು ಗೋಪಾಲಕೃಷ್ಣ ಗಾಂಧಿ ಪರವಾಗಿ ಮತಚಲಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಹಾರ್‌ನಲ್ಲಿ ಸಿಎಂ ನಿತೀಶ್ ಕುಮಾರ್ ಮಹಾಮೈತ್ರಿಕೂಟವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಎನ್‌ಡಿಎ ಮೈತ್ರಿಕೂಟದೊಂದಿಗೆ ಸರಕಾರ ರಚಿಸಿದ್ದಾರೆ.
 
ಮಹಾಮೈತ್ರಿಕೂಟವನ್ನು ಮುರಿಯುವ ಮುನ್ನವೇ ಜೆಡಿಯು ಪಕ್ಷ ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಯವರಿಗೆ ಮತಹಾಕುವುದಾಗಿ ಆಶ್ವಾಸನೆ ನೀಡಿದೆ. ಅದರಂತೆ ಉಪರಾಷ್ಟ್ರಪತಿಯವರಿಗೆ ಮತ ಹಾಕುತ್ತೇವೆ. ಇದರ ಬಗ್ಗೆ ಬಿಜೆಪಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
 
ಮಹತ್ವದ ವಿಷಯವೆಂದರೆ ರಾಷ್ಟ್ರಪತಿ ಹುದ್ದೆಗೆ ಗಾಂಧಿಯವರೇ, ಬಿಹಾರ್ ಸಿಎಂ ನಿತೀಶ್ ಕುಮಾರ್ ಆಯ್ಕೆಯಾಗಿದ್ದರು. ಆದರೆ, 18 ವಿಪಕ್ಷಗಳು ಮೀರಾಕುಮಾರ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದವು. ತದನಂತರ ಜೆಡಿಯು ಪಕ್ಷ ಪ್ರಸ್ತುತ ರಾಷ್ಟ್ರಪತಿಯಾಗಿರುವ ರಾಮಾನಾಥ್ ಕೋವಿಂದ್ ಅವರನ್ನು ಬೆಂಬಲಿಸಿತ್ತು.
 
ನಿತೀಶ್ ಕುಮಾರ್ ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದರಿಂದ ಜೆಡಿಯು ಮಾಜಿ ಅಧ್ಯಕ್ಷ ಶರದ್ ಯಾದವ್, ಸಂಸದರಾದ ಅಲಿ ಅನ್ವರ್ ಮತ್ತು ವಿರೇಂದ್ರ ಕುಮಾರ್ ತಮ್ಮ ಅತೃಪ್ತಿಯನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳೆಯರಿಗೆ ಈತ ಕೊಡುತ್ತಿರುವ ಕಾಟ ಕೇಳಿದರೆ ಬೆಚ್ಚಿಬೀಳುತ್ತೀರಿ..!

ದೆಹಲಿ ಪೊಲೀಸರಿಗೆ ಬಂದಿರುವ ಮೂರು ದೂರುಗಳು ಅಕ್ಷರಶಃ ಅಚ್ಚರಿ ಹುಟ್ಟಿಸಿವೆ. ಅಪರಿಚಿತ ವ್ಯಕ್ತಿಯೊಬ್ಬ ...

news

ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಧಾರವಾಡ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ...

news

ಮಾತೆ ಮಹಾದೇವಿಗೆ ಅವಮಾನ: ರಂಭಾಪುರಿ ಶ್ರೀಗಳ ವಿರುದ್ಧ ದೂರು

ಬೆಂಗಳೂರು: ರಂಭಾಪುರಿ ಶ್ರೀಗಳು ಮಾತೆ ಮಹಾದೇವಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ...

news

ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಣೆ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನ ಕೇಂದ್ರ ತೆರಿಗೆ ಇಲಾಖೆ ಆಗಸ್ಟ್ 5ರವರೆಗೆ ವಿಸ್ತರಿಸಿದೆ. ...

Widgets Magazine