Widgets Magazine
Widgets Magazine

ಸತ್ತ ಮಗನನ್ನು ಭೇಟಿಯಾಗಲು ದಂಪತಿ ಆತ್ಮಹತ್ಯೆ

ವಿಜಯವಾಡ, ಮಂಗಳವಾರ, 10 ಜನವರಿ 2017 (11:56 IST)

Widgets Magazine

ತಮಗಿದ್ದ ಏಕೈಕ ಪುತ್ರನನ್ನು ಕಳೆದುಕೊಂಡು ಮಾನಸಿಕವಾಗಿ ಜರ್ಜರಿತವಾಗಿದ್ದ ದಂಪತಿ ವೈಂಕುಠ ಏಕಾದಶಿ ದಿನ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ. 
 
ಮೃತ ಚಂದ್ರಶೇಖರ್ ರಾವ್ ಮತ್ತು ನವೀನಾ ದಂಪತಿಯ ಪುತ್ರ ವಂಶಿಕೃಷ್ಣ ನವೆಂಬರ್ 26ರದು ವೈರಲ್ ಫೀವರ್‌ನಿಂದ ಸಾವನ್ನಪ್ಪಿದ್ದ. ತಾವು ಸತ್ತರೆ ಸ್ವರ್ಗದಲ್ಲಿರುವ ಆತನನ್ನು ಭೇಟಿಯಾಗಬಹುದೆಂದು ಎಂಬ ನಂಬಿಕೆಯಿಂದ ದಂಪತಿ ಸಾವಿಗೆ ಶರಣಾಗಿದ್ದಾರೆ, ಎಂದು ಅವರ ಕುಟುಂಬದವರು ಹೇಳುತ್ತಿದ್ದಾರೆ. 
 
ಶ್ರೀ ಚೈತನ್ಯ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ, ಶಾಲೆಯ ವಸತಿ ನಿಲಯದಲ್ಲಿಯೇ ವಾಸವಾಗಿದ್ದ. ನವೆಂಬರ್ ತಿಂಗಳಲ್ಲಿ ಆತ ವೈರಲ್ ಫೀವರ್‌ಗೊಳಗಾಗಿದ್ದು ಈ ಕುರಿತು ನಿರ್ಲಕ್ಷ ತೋರಿದ ಆಡಳಿತ ಮಂಡಳಿ ಪರಿಸ್ಥಿತಿ ಬಿಗಡಾಯಿಸಿದಾಗ ಪೋಷಕರಿಗೆ ಮಾಹಿತಿ ನೀಡಿತು. ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 22 ರಂದು ಕೊನೆಯುಸಿರೆಳೆದಿದ್ದ.
 
ಶಾಲಾ ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಿಸಲಾಗಿತ್ತು. ಆದರೆ ಪ್ರಭಾವಿಗಳ ಒತ್ತಡದಿಂದ  ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗಿದ್ದರು. ನ್ಯಾಯಕ್ಕಾಗಿ ಹೋರಾಡಿ ಹೋರಾಡಿ ಬೇಸತ್ತಿದ್ದ ದಂಪತಿ ಮೇಲೇಳಲೇ ಅಲ್ಲ.
 
ಮಗನನ್ನು ಅಗಲಿರಲಾರದೆ ತೀವ್ರ ಖಿನ್ನತೆಗೆ ಜಾರಿದ್ದ ದಂಪತಿ ಕೆಲ ದಿನಗಳಿಂದ ಸಂಬಂಧಿಕರು, ಸ್ನೇಹಿತರಿಂದ ದೂರ ಕಾಯ್ದುಕೊಂಡಿದ್ದರು. ಭಾನುವಾರ ದೇವರಿಗೆ ಪೂಜೆ ಮಾಡಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಎಸ್‌ವೈರನ್ನು ಮುಖ್ಯಮಂತ್ರಿ ಮಾಡುವ ಗುರಿ ಇಲ್ಲ: ಈಶ್ವರಪ್ಪ ಹೊಸ ಬಾಂಬ್

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಗುರಿ ಇಲ್ಲ ಎಂದು ವಿಧಾನ ...

news

ಧೋನಿಗೆ ದ್ರೋಹ: ಬಯಲಾಯ್ತು ವಿದಾಯದ ರಹಸ್ಯ

ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಏಕದಿನ ಮತ್ತು ಟಿ20 ವಿಭಾಗದ ನಾಯಕತ್ವಕ್ಕೆ ...

news

ರಾಹುಲ್ ಜತೆ ಅಖಿಲೇಶ್ ಸೈಕಲ್ ಸವಾರಿ?

ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಸಿಗುವ ಮುನ್ನವೇ ಮುನ್ನವೇ ...

news

ವಾಣಿಜ್ಯ ತೆರಿಗೆ ಉಪವಿಭಾಗಾಧಿಕಾರಿ ಪತ್ನಿ ಜೊತೆ 15 ಜನರಿಂದ ಅಸಭ್ಯ ವರ್ತನೆ

ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದೊಂದಾಗಿ ಹೊರ ಬರುತ್ತಿವೆ. ...

Widgets Magazine Widgets Magazine Widgets Magazine