ಸಹೋದರಿಯ ಜೊತೆ ಸಂಬಂಧ ಬೆಳೆಸಿದವನಿಗೆ ಆಕೆಯ ಸಹೋದರರು ಮಾಡಿದ್ದೇನು ಗೊತ್ತಾ?

ಅಹಮದಾಬಾದ್| pavithra| Last Updated: ಬುಧವಾರ, 6 ಜನವರಿ 2021 (10:25 IST)
ಅಹಮದಾಬಾದ್ : ತನ್ನ ಸಹೋದರಿಯ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿಯ ಮೇಲೆ  ಇಬ್ಬರು ಸಹೋದರರು ಸೇರಿ ಹಲ್ಲೆ ಮಾಡಿದ ಘಟನೆ ಗುಜರಾತ್ ನ ಖೇಡಾದಲ್ಲಿ ನಡೆದಿದೆ.

ಆರೋಪಿಯ ವಿವಾಹಿತ ತಂಗಿಯ ಜೊತೆ ಸಂತ್ರಸ್ತ ಪ್ರೇಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಆಕೆಯ ಸಹೋದರಿಬ್ಬರು ತನ್ನ ತಂಗಿಯಿಂದ ದೂರವಿರುವಂತೆ ಸಂತ್ರಸ್ತನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಆತ ಅದನ್ನು ಕೇಳದಿದ್ದಾಗ ಆತನಿಗೆ ಚೆನ್ನಾಗಿ ಥಳಿಸಿ ಗೋಣಿ ಚೀಲದಲ್ಲಿ ತುಂಬಿಸಿ ಕಸ ಎಸೆಯುವ ಸ್ಥಳದಲ್ಲಿ ಎಸೆದಿದ್ದಾರೆ.

ಸಂತ್ರಸ್ತನನ್ನು ದಾರಿಹೋಕರು ಕಾಪಾಡಿದ್ದು, ತಕ್ಷಣ ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :