Widgets Magazine
Widgets Magazine

ಮೋದಿಯ 'ಅಪ್ಪುಗೆ'ಗೆ ಕಾಂಗ್ರೆಸ್ ನವರ ಲೇವಡಿ; ಪ್ರಧಾನಿ ಕೊಟ್ಟ ತಿರುಗೇಟು ಏನು ಗೊತ್ತಾ...?

ನವದೆಹಲಿ, ಶನಿವಾರ, 20 ಜನವರಿ 2018 (11:21 IST)

Widgets Magazine

ನವದೆಹಲಿ: ನಾನೊಬ್ಬ ಸಾಮಾನ್ಯ ಮನುಷ್ಯ, ನನಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಹೀಗೆ ಹೇಳುವುದಕ್ಕೆ ಒಂದು ಬಲವಾದ ಕಾರಣವಿದೆ. ಅದೇನೆಂದರೆ ಪ್ರಧಾನಿ ಮೋದಿ ಅವರು ವಿಶ್ವದ ನಾಯಕರಿಗೆ ಅಪ್ಪುಗೆಯ ಮೂಲಕ ಸ್ವಾಗತ ಕೋರುತ್ತಾರೆ. ಈ ಮೂಲಕ ಪ್ರಧಾನಿ ಅಪ್ಪುಗೆ-ಮುತ್ಸದ್ದಿತನವನ್ನು ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ತಮಾಷೆ ಮಾಡಿತ್ತು. ಕಾಂಗ್ರೆಸ್ ನವರ ಈ ಲೇವಡಿಗೆ ತಿರುಗುತ್ತರವಾಗಿ ಪ್ರಧಾನಿ ಹೀಗೆ ಹೇಳಿದ್ದಾರೆ.


ಬೆಂಜಮಿನ್ ನೆತನ್ಯಾಹು, ಡೊನಾಲ್ಡ್ ಟ್ರಪ್ ಇವರಿಗೆಲ್ಲಾ ಪ್ರಧಾನಿ ಮೋದಿ ಅಪ್ಪುಗೆಯನ್ನು ನೀಡುವುದರ ಮೂಲಕ ಸ್ವಾಗತ ಕೋರಿದ್ದರು. ಇದೊಂದು ಅಪ್ಪುಗೆ-ಮುತ್ಸದ್ದಿತನದ ಪ್ರಚಾರ ತಂತ್ರ ಎಂದು ಕಾಂಗ್ರೆಸ್ ನವರು ಮೋದಿಯನ್ನು ಲೇವಡಿ ಮಾಡಿದ್ದಾರೆ.


‘ನನಗೂ ಇತರರಂತೆ ತರಬೇತಿ ಸಿಕ್ಕಿದ್ದರೆ, ನಾನೂ ಕೂಡ ಶಿಷ್ಟಾಚಾರವನ್ನು ಪಾಲಿಸುತ್ತಿದ್ದೆ, ಮಾಡಿಕೊಂಡು ವಿಶ್ವ ನಾಯಕರ ಜತೆ ನಿಂತು ನೋಡುತ್ತಿದ್ದೆ' ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ಸರಿಯಾಗಿ ಜಾಡಿಸಿದ್ದಾರೆ.
'ನಾನೊಬ್ಬ ಸಾಮಾನ್ಯ ಮನುಷ್ಯ ನನ್ನ ದೇಶಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ' ಎಂದು ಮೋದಿ ಮಾಧ್ಯಮದೊಂದಿಗೆ ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ನರೇಂದ್ರಮೋದಿ ಲೇವಡಿ ಪ್ರಧಾನಿ ವಿಶ್ವ ನಾಯಕರು ತರಬೇತಿ ಎಡ ಬಲ ಹಸ್ತಲಾಘವ Congress Humiliation Traning Prime Minister World Leaders Narendra Modi Left Right Shake Hand

Widgets Magazine

ಸುದ್ದಿಗಳು

news

ಪಾಕ್ ನ ಗುಂಡಿನ ದಾಳಿಗೆ ಯೋಧ ಹಾಗೂ ಇಬ್ಬರು ನಾಗರಿಕರ ಸಾವು

ಜಮ್ಮು: ಸಾಂಬಾ ವಲಯದಲ್ಲಿ ಶುಕ್ರವಾರ ಪಾಕಿಸ್ತಾನದ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ ...

news

ಕಮಲ್ ಹಾಸನ್ ಜತೆ ಮೈತ್ರಿ ಮಾಡ್ತಾರಾ ರಜನಿಕಾಂತ್? ಸೂಪರ್ ಸ್ಟಾರ್ ಹೇಳಿದ್ದೇನು?

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ರಜನೀಕಾಂತ್ ಮತ್ತು ಕಮಲ್ ಹಾಸನ್ ಪ್ರತ್ಯೇಕ ...

news

ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಕೊಟ್ಟ ಮೂರು ಐಡಿಯಾ ಏನು ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ತಾವು ಪ್ರತೀ ತಿಂಗಳ ಅಂತ್ಯಕ್ಕೆ ನಡೆಸುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಯಾವ ...

news

ಪಾಕ್ ಉದ್ಧಟತನಕ್ಕೆ ಭಾರತೀಯ ಯೋಧರ ತಕ್ಕ ಶಾಸ್ತಿ

ನವದೆಹಲಿ: ಗಡಿಯಲ್ಲಿ ಕಾಲು ಕೆರೆದುಕೊಂಡು ಬರುವ ಪಾಕಿಸ್ತಾನಕ್ಕೆ ಮತ್ತೆ ಭಾರತ ಮುಟ್ಟಿ ನೋಡಿಕೊಳ್ಳುವಂತೆ ...

Widgets Magazine Widgets Magazine Widgets Magazine