ಮನೆಯ ಬಳಿ ಇರುವ ಸಂದಿಯಲ್ಲಿ ನಡೆಯಬೇಡಿ ಎಂದ ವ್ಯಕ್ತಿಗೆ ಹೀಗಾ ಮಾಡೋದು?

ರಾಜ್ ಕೋಟ್| pavithra| Last Modified ಬುಧವಾರ, 25 ನವೆಂಬರ್ 2020 (06:47 IST)
ರಾಜ್ ಕೋಟ್ : ಮನೆಯ ಮುಂದೆ ನಡೆದಾಡುವ ವಿಚಾರಕ್ಕೆ ನಾಲ್ವರು ಸೇರಿ ವ್ಯಕ್ತಿಯೊಬ್ಬನ ಮೇಲೆ ಎಸಿಡ್ ಎರಚಿ ಚಾಕುವಿನಿಂದ ಚುಚ್ಚಿ ಕೊಂದ ಘಟನೆ ಗುಜರಾತ್ ನ ಅಮ್ರೆಲಿಯಲ್ಲಿ ನಡೆದಿದೆ.

ಮೃತವ್ಯಕ್ತಿ ಮನೆಯ ಬಳಿಯಿರುವ ಸಂದಿಯಲ್ಲಿ ನಡೆಯಬಾರದೆಂದು ಕೇಳಿಕೊಂಡರು ಆರೋಪಿಗಳು ಅಲ್ಲಿಯೇ ನಡೆದಾಡುತ್ತಿದ್ದರು. ಇದರಿಂದ ಅವರ ನಡುವೆ ಜಗಳ ನಡೆದಿದೆ. ಬಳಿಕ ರಾಜಿ ಮಾಡಿಕೊಳ್ಳುವ ನೆಪದಲ್ಲಿ ನಾಲ್ವರು ಸೇರಿ ಮನೆಯ ಸಮೀಪದಲ್ಲಿರುವ ಸ್ಥಳವೊಂದಕ್ಕೆ ಕರೆದು  ಅಲ್ಲಿಗೆ ಬಂದ ವ್ಯಕ್ತಿಗೆ ಮುಖಕ್ಕೆ ಎಸಿಡ್ ಎರಚಿ ಕತ್ತಿ, ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರು ಆತ ಆಗಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸರು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :