ಬಸ್ ನ ಹಿಂದಿನ ಸೀಟಿನಲ್ಲಿ ಕರೆಸಿ ಹುಡುಗನ ಪ್ಯಾಂಟ್ ಜಿಪ್ ಬಿಚ್ಚಿ ಈ ಹುಡುಗರು ಮಾಡಿದ್ದೇನು?

ನವದೆಹಲಿ, ಶುಕ್ರವಾರ, 10 ಆಗಸ್ಟ್ 2018 (15:24 IST)

ನವದೆಹಲಿ : ಹೆಣ್ಣು ಮಕ್ಕಳ ಮೇಲೆ ನೀಡುತ್ತಿರುವ ಘಟನೆಗಳನ್ನು ನಾವು ಹಲವು ಬಾರಿ ಕೇಳಿರುತ್ತೇವೆ. ಆದರೆ ನಮ್ಮ ದೇಶದ ರಾಜಧಾನಿಯಾದ ದೆಹಲಿಯ ಖಾಸಗಿ ಶಾಲೆಯೊಂದರ ಬಾಲಕನ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದಾಗಿ ತಿಳಿದುಬಂದಿದೆ.


ಹೌದು. ಪೂರ್ವ ದೆಹಲಿಯ ವಿವೇಕ ವಿಹಾರ ಕಾಲೋನಿಯ ಖಾಸಗಿ ಶಾಲೆಯೊಂದರ 9 ವರ್ಷದ ಬಾಲಕನೊಬ್ಬನಿಗೆ ಹಿರಿಯ ವಿದ್ಯಾರ್ಥಿಗಳು ಖಾಸಗಿ ಶಾಲೆ ಬಸ್ ನಲ್ಲಿ ಕಿರುಕುಳ ನೀಡ್ತಿದ್ದರಂತೆ.  ಈ ವಿಷಯವನ್ನು ಬಾಲಕ  ಬಸ್ ನಲ್ಲಿ ಬರ್ತಿದ್ದ ಶಿಕ್ಷಕಿಗೆ ತಿಳಿಸಿದ್ದರೂ ಕೂಡ,  ಸುಂದರವಾಗಿರುವ ಕಾರಣ, ನಿನ್ನ ಜೊತೆ ತಮಾಷೆ ಮಾಡ್ತಾರೆಂದು ಶಿಕ್ಷಕಿ ವಿಷ್ಯ ಬದಲಾವಣೆ ಮಾಡಿದ್ದಳಂತೆ.


ಮನೆಯಲ್ಲಿ ಸದಾ ಮೌನಿಯಾಗಿರುತ್ತಿದ್ದ ಬಾಲಕನನ್ನು ತಾಯಿ ವಿಚಾರಿಸಿದಾಗ ಈ ವಿಚಾರ ಬಹಿರಂಗವಾಗಿದೆ. 7ನೇ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಬಸ್ ನಲ್ಲಿ ಹಿಂದಿನ ಸೀಟಿಗೆ ಕರೆಯಿಸಿ ಪ್ಯಾಂಟ್ ಜಿಪ್ ಬಿಚ್ಚಿ ಕೆಟ್ಟದಾಗಿ ನಡೆದುಕೊಳ್ತಿದ್ದರಂತೆ. ಈ ಬಗ್ಗೆ  ಪಾಲಕರು, ಶಾಲೆ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.


ಆದರೆ ಅವರು ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಂತ್ರ ಶಿಕ್ಷಕಿ ಹಾಗೂ ಮಕ್ಕಳನ್ನು ಶಾಲೆಯಿಂದ ವಜಾ ಮಾಡಿರುವುದಾಗಿ ಪ್ರಿನ್ಸಿಪಾಲರು ಹೇಳಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬರಗಾಲವಿದ್ದರೂ ಸಿಎಂ ಪ್ರವಾಸ ಮಾಡ್ತಿಲ್ಲ: ಬಿಎಸ್ವೈ ಟೀಕೆ

2018 -19 ಸಾಲಿನಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಕೆಲವರಿಗೆ ಇನ್ನು ಪರಿಹಾರ ಹಣ ...

news

ಮಿಲಿಟರಿ ಸೇನೆಗೆ ಭೂಮಿ ನೀಡಲು ಮುಂದಾದ ಬಿಬಿಎಂಪಿ

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿರುವ ಸರ್ಕಾರಿ ಗೋಮಾಳ ಭೂಮಿಯನ್ನು ಮಿಲಿಟರಿ ...

news

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣ: ಆರೋಪ

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣವಾಗ್ತಿದೆ. ಹೀಗಂತ ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ...

news

ಪತಿಯ ಗುಂಡೇಟಿಗೆ ಬಲಿಯಾದ ಪಾಕಿಸ್ತಾನದ ಖ್ಯಾತ ಗಾಯಕಿ ರೇಷ್ಮಾ

ಇಸ್ಲಾಮಾಬಾದ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಅವರನ್ನು ...

Widgets Magazine