ಅಪ್ರಾಪ್ತನೋರ್ವ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಮಾಡಿದ ಪ್ಲಾನ್​ ಏನು ಗೊತ್ತಾ?

ನವದೆಹಲಿ, ಸೋಮವಾರ, 13 ಆಗಸ್ಟ್ 2018 (14:20 IST)

ನವದೆಹಲಿ : ಚಾಕಲೇಟ್ ಆಸೆ ತೋರಿಸಿ ಅಪ್ರಾಪ್ತನೋರ್ವ 6 ವರ್ಷದ ಬಾಲಕಿಯ ಮೇಲೆ ಎಸಗಿದ ಘಟನೆ ದೆಹಲಿಯ ರೋಹಿಣಿ ಜಿಲ್ಲೆಯಲ್ಲಿ ನಡೆದಿದೆ.


ರೋಹಿಣಿ ಜಿಲ್ಲೆಯ ಪ್ರಶಾಂತ ವಿಹಾರ ಎಂಬಲ್ಲಿ ಬಾಲಕಿಯ ವಾಸವಿತ್ತು. ಅಲ್ಲದೆ ಆರೋಪಿಯ ಮನೆಯವರೂ ಸಹ ಸಂತ್ರಸ್ತ ಬಾಲಕಿಯ ಮನೆಯ ಪಕ್ಕದಲ್ಲೇ ವಾಸವಿದ್ದರು. ಬಾಲಕಿಯ ಮೇಲೆ ಅತ್ಯಚಾರ ಎಸಗುವ  ಪ್ಲಾನ್​ ಮಾಡಿದ್ದ ಆರೋಪಿಯು ಮನೆಯೆದುರು ಆಟವಾಡುತ್ತಿದ್ದ ಬಾಲಕಿಗೆ  ಚಾಕಲೇಟ್​ ಆಸೆ ತೋರಿಸಿ  ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಈ ಅಮಾನವೀಯ ಕೃತ್ಯ ಎಸಗಿದ್ದಾನೆ. ಮನೆಗೆ ಬಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಕಾರಣ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಈ ವಿಚಾರವನ್ನು  ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.


ಈ ಬಗ್ಗೆ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದು ಅಕ್ಕಪಕ್ಕದ ಮನೆಯವರನ್ನೆಲ್ಲರನ್ನು ಪೊಲೀಸರು ಕೌನ್ಸಲಿಂಗ್​ಗೆ ಕರೆಸಿದಾಗ ಬಾಲಕಿಯು ಆರೋಪಿಯನ್ನು ಗುರುತಿಸಿದ್ದಾಳೆ. ಬಳಿಕ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಯನ್ನು ಬಾಲಾಪರಾಧಿ ಕೇಂದ್ರಕ್ಕೆ ಒಪ್ಪಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಏರ್ ಶೋ ಸ್ಥಳಾಂತರವಾಗಲು ಬಿಡಲ್ಲ ಎಂದ ಬಿಎಸ್ ವೈ

ಬೆಂಗಳೂರು: ಪ್ರತಿಷ್ಠಿತ ಏರ್ ಶೋ 2019 ರ ಕಾರ್ಯಕ್ರಮವನ್ನು ಬೆಂಗಳೂರಿನಿಂದ ಲಕ್ನೋಗೆ ...

news

ಹೊಸ ರಾಜಕೀಯ ಪಕ್ಷ ಕಟ್ಟಲು ಹೊರಟಿದ್ದಾರಾ ಅಮೀರ್ ಖಾನ್?

ಮುಂಬೈ: ಬಾಲಿವುಡ್ ಮಿ. ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ರಜನೀಕಾಂತ್, ಕಮಲ್ ಹಾಸನ್ ರೀತಿಯಲ್ಲಿ ಹೊಸ ಪಕ್ಷ ...

news

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರನ್ನು ಒಂದು ಮಾಡಿದ ನ್ಯಾಯಧೀಶರು

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಗರದ ನೂತನ ತಾಲೂಕು ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಬಂದಿದ್ದ ...

news

ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ ಚಾಟರ್ಜಿ ನಿಧನ

ನವದೆಹಲಿ: ಲೋಕಸಭೆ ಮಾಜಿ ಸ್ಪೀಕರ್, ಸಿಪಿಎಂ ನಾಯಕ ಸೋಮನಾಥ ಚ್ಯಾಟರ್ಜಿ ಇಂದು ನಿಧನರಾಗಿದ್ದಾರೆ. ಅವರಿಗೆ 89 ...

Widgets Magazine