ನಟ ಕಮಲ್ ಹಾಸನ್ ತಮ್ಮ ಪಕ್ಷದ ಚಿಹ್ನೆಯ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇನು…?

ಮಧುರೈ, ಗುರುವಾರ, 22 ಫೆಬ್ರವರಿ 2018 (07:12 IST)

ಮಧುರೈ : ಈಗಾಗಲೇ ಕಣಕ್ಕಿಳಿದಿರುವ ಖ್ಯಾತ ನಟ ಕಮಲ್‌ ಹಾಸನ್‌ ಅವರು ತಮ್ಮ ಪಕ್ಷದ ಹೆಸರು ಹಾಗು ಚಿಹ್ನೆಯನ್ನು ಘೋಷಿಸುವುದರ ಜೊತೆಗೆ ಕಾವೇರಿ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸುವುದಾಗಿ ಹೇಳಿದ್ದಾರೆ.


ಇವರು ಮಧುರೈನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಪಕ್ಷದ ಹೆಸರನ್ನು ಮಕ್ಕಳ್‌ ನೀಥಿ ಮಯ್ಯಂ ಎಂದು ಘೋಷಿಸಿ, ಚಿಹ್ನೆಯನ್ನು ಕೂಡ ಬಿಡುಗಡೆ ಮಾಡಿ ನಂತರ , ‘ನಮ್ಮ ಪಕ್ಷದ ಚಿಹ್ನೆ ನೋಡಿ. ಆರು ಕೈಗಳು ಒಂದಕ್ಕೊಂಡು ಜೋಡಿಸಿದೆ. ಅಂದರೆ ಇದು ದಕ್ಷಿಣ ಭಾರತದ ಆರು ರಾಜ್ಯಗಳು. ಮಧ್ಯದಲ್ಲಿ ಇರುವ ನಕ್ಷತ್ರ ಜನರು ಎಂದು ತಿಳಿಸಿದ್ದಾರೆ.


ಹಾಗೇ ಕಾವೇರಿ ನದಿ ನೀರು ಹಂಚಿಕೆ ಕುರಿತು ಮಾತನಾಡಿದ ಅವರು,’ ಕಾವೇರಿ ನೀರು ತಂದುಕೊಡುತ್ತೀರಾ ಎಂದು ಹಲವಾರು ಮಂದಿ ನನ್ನನ್ನು ಕೇಳುತ್ತಿದ್ದಾರೆ. ಆದರೆ ಇಷ್ಟು ವರ್ಷ ಯಾರೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ. ಈ ರೀತಿ ಆಗಿದಿದ್ದರೆ ನಮಗೆ ಈ ಹಿಂದೆಯೇ ಪಾಲು ಸಿಗುತ್ತಿತ್ತು. ನಾನು ರಕ್ತ ಕೊಡುತ್ತೇನೆ. ಅಂದರೆ ಬೆಂಗಳೂರು ಜನರಿಂದ ರಕ್ತದಾನ ಮಾಡಿಸುತ್ತೇನೆ. ನೀರಿಗಾಗಿ ಆಸ್ತಿಪಾಸ್ತಿ, ಪ್ರಾಣ ಹಾನಿ ಮಾಡುವುದು ಬೇಡ. ಹಿಂಸಾಚಾರ ನಮಗೆ ಬೇಡವೇ ಬೇಡ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಂಬರ್ ಬದಲಾವಣೆ ಇಲ್ಲ ಎಂದ ಟೆಲಿಕಾಂ ಕಂಪೆನಿ

ನವದೆಹಲಿ : ಜುಲೈ 1ರಿಂದ 10 ಸಂಖ್ಯೆಯ ಮೊಬೈಲ್ ನಂಬರ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ...

news

ವೇತನದಾರರಿಗೆ ಶಾಕಿಂಗ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ಹೊಸದಿಲ್ಲಿ : ಕೇಂದ್ರ ಸರ್ಕಾರ ಇಪಿಎಫ್ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವುದರ ಮೂಲಕ ವೇತನದಾರರಿಗೆ ...

news

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಗೆ ಜೈಲೇ ಗತಿ

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ...

news

ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಗೆ ಜೈಲೇ ಗತಿ

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ...

Widgets Magazine