ಪ್ರಾಣ ಭಿಕ್ಷೆಗಾಗಿ ಆತ ಅಂಗಲಾಚುತ್ತಿದ್ದರೆ, ಸಾರ್ವಜನಿಕರು ಫೋಟೋ ತೆಗೆಯುತ್ತಿದ್ದರು!

Pune, ಶುಕ್ರವಾರ, 21 ಜುಲೈ 2017 (12:40 IST)

ಪುಣೆ: ಅಪಘಾತವಾದಾಗ ತಕ್ಷಣ ಆಸ್ಪತ್ರೆಗೆ ಸೇರಿಸಬೇಕೆಂದು ಪೊಲೀಸರು, ಸರ್ಕಾರ  ಅದೆಷ್ಟೇ ಯೋಜನೆಗಳು, ಸಲಹೆಗಳನ್ನು ನೀಡಿದರೂ, ಜನ ಸಾಮಾನ್ಯರು ಮಾತ್ರ ಬದಲಾಗಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


 
ಪುಣೆ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದ ಯುವಕನೊಬ್ಬ ವಿಪರೀತ ರಕ್ತಸ್ರಾವದಿಂದಾಗಿ ಪ್ರಾಣ ಹೋಗುವ ಹಂತದಲ್ಲಿದ್ದರೆ, ಅಕ್ಕಪಕ್ಕದವರು ಸಹಾಯ ಮಾಡುವುದು ಬಿಟ್ಟು, ಫೋಟೋ ತೆಗೆಯುತ್ತಿದ್ದ ಹೇಯ ಕೃತ್ಯ ವರದಿಯಾಗಿದೆ. ಸಾರ್ವಜನಿಕರ ಈ ಬೇಜವಬ್ದಾರಿಯುತ ವರ್ತನೆಯಿಂದಾಗಿ ಆತನ ಪ್ರಾಣವೇ ಹೋಗಿದೆ.
 
ಸತೀಶ್ ಪ್ರಭಾಕರ್ (25) ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು. ಭೋಸಾರಿ ಬಳಿ ರಸ್ತೆ ಬದಿ ಅಪಘಾತಕ್ಕೀಡಾಗಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಒದ್ದಾಡುತ್ತಿದ್ದ ಅವರನ್ನು ನೋಡಲು ಸುತ್ತಲೂ ಜನ ಸೇರಿದ್ದರೇ ಹೊರತು ಯಾರೂ ಆಸ್ಪತ್ರೆಗೆ ಸಾಗಿಸಲಿಲ್ಲ. ಕೊನೆಗೆ ಅಲ್ಲೇ ಪಕ್ಕದಲ್ಲಿದ್ದ ದಂತ ವೈದ್ಯರೊಬ್ಬರು ಆಸ್ಪತ್ರೆಗೆ ದಾಖಲಿಸಿದರೂ, ಜೀವ ಉಳಿಸಲಾಗಲಿಲ್ಲ. ಇದೊಂದು ಹಿಟ್ ಆಂಡ್ ರನ್ ಕೇಸ್ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 
ಇದನ್ನೂ ಓದಿ..  ಪ್ರತ್ಯೇಕ ನಾಡಧ್ವಜ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುನಿಸು?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರತ್ಯೇಕ ನಾಡಧ್ವಜ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುನಿಸು?

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎಂದು ಹೊರಟ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ...

news

ಹಿಟ್ಲರ್ ಹಾಗೂ ಕಾಲಿಮಾ ಅವತಾರದಲ್ಲಿ ಕಿರಣ್ ಬೇಡಿ..

ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್ ಬೇಡಿ ಹಾಗೂ ಆಡಳಿತಾರೂಢ ಕಾಂಗ್ರೆಸ್‌ ನಡುವಿನ ತಿಕ್ಕಾಟ ...

news

ಶಾಲಾ ಮಕ್ಕಳ ಮೇಲೆ ಫೈರಿಂಗ್: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ನೌಶೆರಾ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ...

news

ಭಾರತ-ಚೀನಾ ವಿವಾದಕ್ಕೆ ತುಪ್ಪ ಸುರಿಯಲು ಯತ್ನಿಸುತ್ತಿರುವ ಪಾಕ್

ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದ್ದರ, ಇತ್ತ ಭಾರತದ ಶತ್ರು ...

Widgets Magazine