ಸೇಡು ತೀರಿಸಿಕೊಳ್ಳಲು ಹಾವಿನ ತಲೆಯನ್ನು ಕಚ್ಚಿ ತಿಂದ ಭೂಪ

ಅತಿಥಾ 

ಹಾರ್ದೋಯಿ(ಉ.ಫ್ರದೇಶ), ಮಂಗಳವಾರ, 20 ಫೆಬ್ರವರಿ 2018 (17:27 IST)

ವ್ಯಕ್ತಿಯೊಬ್ಬ ಸೇಡು ತೀರಿಸಿಕೊಳ್ಳಲು ಹಾವಿನ ತಲೆಯನ್ನು ಕಚ್ಚಿ ಅದನ್ನು ಉಗುಳುವ ಮೊದಲು ಅಗಿದು ತಿಂದಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದ ಹಾರ್ದೊಯಲ್ಲಿ ಶನಿವಾರ ನಡೆದಿದೆ. ಆ ಹಾವು ಅವನನ್ನು ಒಮ್ಮೆ ಕಚ್ಚಿರುವುದರಿಂದ ಈತ ಆ ಹಾವನ್ನೇ ಕಚ್ಚಿ ತಿಂದಿದ್ದಾನೆ. ಹಾವನ್ನು ಕಚ್ಚಿ ತಿಂದ ಈತ ಪ್ರಜ್ಞೆ ಕಳೆದುಕೊಂಡ ನಂತರ ಸ್ಥಳಿಯರು ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಸೋನೆಲಾಲ್ ಎಂಬ ಈ ವ್ಯಕ್ತಿಯು ತನ್ನ ಜಾನುವಾರುಗಳನ್ನು ಮೇಯಿಸುತ್ತಿರುವಾಗ ಈ ಹಾವು ತನಗೆ ಕಚ್ಚಿತ್ತು, ಅದೇ ಸೇಡು ತೀರಿಸಿಕೊಳ್ಳು ನಾನು ಅದನ್ನು ಕಚ್ಚಿ ತಿಂದಿದ್ದೇನೆ ಎಂದು ಹೇಳಿದ್ದಾನೆ.
 
"ಅವರ ನೆರೆಹೊರೆಯವರಾದ ರಾಮ್ ಸೇವಾಕ್ ಮತ್ತು ರಾಮ್ ಸ್ವರೂಪ್ ಅವರು ಸೋನೆಲಾಲ್‌ಗೆ ಹಾವು ಕಚ್ಚದೆ ಎಂದು ಹೇಳಿದ್ದಾರೆ. ಹಾಗಾಗಿ ನಾವು ಕಚ್ಚಿರುವ ಗುರುತುಗಳನ್ನು ಹುಡುಕಲಾರಂಭಿಸಿದ್ದೇವು ಆದರೆ ಯಾವುದೇ ಗುರುತುಗಳು ಸಿಗಲಿಲ್ಲ. ಘಟನೆ ಸಂಭವಿಸಿದ ಸ್ಥಳದಲ್ಲಿ ಸೋನೆಲಾಲ್ ಒಬ್ಬರು ಇದ್ದರು ಎಂದು ಸೋನೆಲಾಲ್ ಅವರ ಸೋದರಳಿಯ ನನ್ನ‌ಹೇ ಹೇಳಿದ್ದಾರೆ, ಆದರೆ ಯಾರೋ ಒಬ್ಬ ಬಂದು ಅವರಿಗೆ ಹಾವು ಕಚ್ಚಿದೆ ಎಂದು ಹೇಳಿರುವ ಕಾರಣ ನಾವು ಸೋನೆಲಾಲ್ ಅವರಿಗೆ ತುರ್ತು ಔಷಧಿಗಳನ್ನು ನೀಡಿ, ಅವಲೋಕನದಡಿಯಲ್ಲಿ ಇಟ್ಟುಕೊಂಡಿದ್ದೇವೆ ಎಂದು ಹಿತೇಶ್ ಹೇಳಿದ್ದಾರೆ. 
 
ವೈದ್ಯಕೀಯ ಅಧಿಕಾರಿ ಡಾ. ಮಹೇಂದ್ರ ವರ್ಮಾ ಅವರು, ವಿಷವನ್ನು ಒಳಗೊಂಡಿರುವ ಹಾವಿನ ದೇಹದ ಭಾಗವನ್ನು ಸೇವಿಸಿರುವ ಕಾರಣದಿಂದ ಸೋನೆಲಾಲ್ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
 
ಡಾ. ಎಸ್.ಸಿ. ತಿವಾರಿ ಅವರು "ಈ ವ್ಯಕ್ತಿಯ ನಡವಳಿಕೆಯು ಅಸಹಜವಾಗಿದೆ, ಇದು ಸಹಜ ಸ್ಥಿತಿಯಲ್ಲಿರುವ ಮಾನವನ ಪ್ರತಿಕ್ರಿಯೆಯಾಗಿಲ್ಲ. ಈ ರೀತಿಯಾಗಿ ವರ್ತಿಸುವವರು ಬಹಳ ಆಕ್ರಮಣಕಾರಿ ಅಥವಾ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿರುವವರಾಗಿರುತಾರೆ" ಎಂದು ಹೇಳಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅತ್ಯಾಚಾರ-ಕೊಲೆ ಆರೋಪಿಗಳನ್ನು ಪೊಲೀಸ್ ಠಾಣೆಯಿಂದ ಹೊರಗೆಳೆದು ಮರಣದಂಡನೆ ನೀಡಿದ ಜನರ ಗುಂಪು

ಲೋಹಿತ್‌ : ಅತ್ಯಾಚಾರ ಹಾಗು ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಗಳಾಗಿದ್ದ ಇಬ್ಬರನ್ನು ಠಾಣೆಯಿಂದ ಹೊರಗೆಳೆದ ...

news

ಸಮವಸ್ತ್ರದ ಅಳತೆಗೆಂದು ವಿದ್ಯಾರ್ಥಿನಿಯನ್ನು ಸಂಪೂರ್ಣ ವಿವಸ್ತ್ರಗೊಳಿಸಿದ ಶಿಕ್ಷಕ

ಲಖನೌ: ಉತ್ತರ ಪ್ರದೇಶದ ಸರ್ಕಾರಿ ಶಾಲಾ ಶಿಕ್ಷಕ ವಿದ್ಯಾರ್ಥಿನಿಯೊಬ್ಬಳ ಸಮವಸ್ತ್ರದ ಅಳತೆ ...

news

ಸಿನೆಮಾ ನಟನ ಪತ್ನಿಯ ಎದುರೇ ನಡೆಯಿತು ಕಾಮುಕನ ಹೀನ ಕೃತ್ಯ

ನವದೆಹಲಿ: ಉದ್ರೇಕಗೊಂಡು ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವ ಕಾಮುಕರ ಸಂಖ್ಯೆ ಮತ್ತು ಪ್ರಕರಣಗಳು ...

news

ವಿದ್ವತ್ ಪ್ರಕರಣ: ಬಾಯ್ತಪ್ಪಿ ಬಂದ ಮಾತು ಒಪ್ಪಿಕೊಂಡ ಅಮಿತ್ ಶಾ

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಮಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಬಿಜೆಪಿ ಕಾರ್ಯಕರ್ತ ...

Widgets Magazine
Widgets Magazine