ಮುಸ್ಲಿಮರಿಗೆ ಟಿಕೆಟ್ ನೀಡದಿದ್ದಕ್ಕೆ ವಿನಯ್ ಕಟಿಯಾರ್ ಪ್ರತಿಕ್ರಿಯೆ ಇದು

ಫೈಜಾಬಾದ್, ಮಂಗಳವಾರ, 28 ಫೆಬ್ರವರಿ 2017 (13:06 IST)

Widgets Magazine

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲದಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ವಿನಯ್ ಕಟಿಯಾರ್ ಬಿಜೆಪಿಗೆ ಮತ ನೀಡದ ಮುಸ್ಲಿಮರಿಗೇಕೆ ನಾವು ಟಿಕೆಟ್ ನೀಡಬೇಕು ಎಂದು ಹೇಳುವುದರ ಮೂಲಕ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 

ಯುಪಿಯಲ್ಲಿ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದೀಗ ಭಾರಿ ಚರ್ಚೆಗೆ ಕಾರಣವಾಗಿದೆ, ಕೇಂದ್ರ ಸಚಿವರಾದ ಉಮಾಭಾರತಿ, ರಾಜನಾಥಸಿಂಗ್ 'ಕೆಲ ಕ್ಷೇತ್ರಗಳಲ್ಲಾದ್ರೂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿತ್ತು' ಎಂದಿದ್ದರು. ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀದಿರುವುದು ತಪ್ಪು ಎಂದು ಉಮಾಭಾರತಿ ಸಹ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಟಿಯಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
 
ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಕಟಿಯಾರ್, ಬಿಜೆಪಿಗೆ ಮತ ನೀಡದವರಿಗೇಕೆ ಟಿಕೆಟ್ ನೀಡುವುದು ಎಂದು ಪ್ರಶ್ನಿಸಿರುವುದಲ್ಲದೇ, ಉತ್ತರ ಪ್ರದೇಶದ 5ನೇ ಹಂತದ ಚುನಾವಣೆಯಲ್ಲಿ ಯಾವೊಬ್ಬ ಮುಸ್ಲಿಂ ಅಭ್ಯರ್ಥಿ ಕೂಡ ಗೆಲ್ಲಲಾರ ಎಂದು ಸಹ ಭವಿಷ್ಯ ನುಡಿದಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ನಿನ್ನೆ 5ನೇ ಹಂತದ ಚುನಾವಣೆ ನಡೆದಿದ್ದು 59% ರಷ್ಟು ಮತದಾನವಾಗಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮುಸ್ಲಿಮರಿಗೆ ಟಿಕೆಟ್ ವಿನಯ್ ಕಟಿಯಾರ್ Bjp Ticket Muslims Vinay Katiyar

Widgets Magazine

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ನನ್ನ ಪ್ರಕರಣಗಳನ್ನು ಸಿಬಿಐಗೆ ವಹಿಸಲಿ: ಯಡಿಯೂರಪ್ಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ತಾಕತ್ತಿದ್ರೆ ನನ್ನ ಪ್ರಕರಣಗಳನ್ನು ಸಿಬಿಐಗೆ ವಹಿಸಲಿ ಎಂದು ಬಿಜೆಪಿ ...

news

ಬಿಎಸ್‌ವೈ ಪ್ರಕರಣಗಳ ಮೇಲ್ಮನವಿಗೆ ಸರಕಾರ ತೀರ್ಮಾನ: ಟಿ.ಬಿ.ಜಯಚಂದ್ರ

ಬೆಂಗಳೂರು: ಬಿಎಸ್‌ವೈ ಪ್ರಕರಣಗಳ ಮೇಲ್ಮನವಿ ವಿಚಾರಕ್ಕೂ ಡೈರಿ ಪ್ರಕರಣಕ್ಕೂ ಮೇಲ್ಮನವಿಗೂ ಯಾವುದೇ ...

news

ಹೇಯ: ಹಾಲುಗಲ್ಲದ ಕಂದಮ್ಮನ ಮೇಲೆ ಶಾಲಾ ನಿರ್ದೇಶಕನಿಂದ ಅತ್ಯಾಚಾರ

ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರಗೈದ ಖಾಸಗಿ ನರ್ಸರಿ ಶಾಲೆಯ ನಿರ್ದೇಶಕ ಮೇಲೆ ಪೊಲೀಸರು ಎಫ್ಐಆರ್ ...

news

ನಿಮಗೇನು ಬೇರೆ ಕೆಲಸ ಇಲ್ವಾ, ಯಾವಾಗ್ಲೂ ಬಿಎಸ್‌ವೈ ಮಂತ್ರ ಜಪಿಸ್ತೀರಾ: ಸಿಎಂ

ಬೆಂಗಳೂರು: ನಿಮಗೇನು ಬೇರೆ ಕೆಲಸ ಇಲ್ವಾ, ಯಾವಾಗ ನೋಡಿದರೂ ಯಡಿಯೂರಪ್ಪ ಮಂತ್ರ ಜಪಿಸ್ತೀರಾ ಎಂದು ಮಾಧ್ಯಮಗಳ ...

Widgets Magazine