ಒಪ್ಪಿಗೆ ಇಲ್ಲದೇ ದೈಹಿಕ ಸಂಪರ್ಕಕ್ಕೆ ಯತ್ನಿಸಿದ ಪತಿಯ ವಿರುದ್ಧ ಪತ್ನಿಯಿಂದಲ್ಲೇ ದೂರು ದಾಖಲು

ಕೋಲ್ಕತ್ತಾ, ಶುಕ್ರವಾರ, 7 ಡಿಸೆಂಬರ್ 2018 (07:01 IST)

ಕೋಲ್ಕತ್ತಾ : ಒಪ್ಪಿಗೆ ಪಡೆಯದೇ ಪತ್ನಿಯ ಜೊತೆ ಲೈಂಗಿಕಕ್ರಿಯೆ ನಡೆಸಲು ಯತ್ನಿಸಿದ ಪತಿಯ ವಿರುದ್ಧ ಪತ್ನಿಯೇ ಅತ್ಯಾಚಾರದ ದೂರು ದಾಖಲಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.


ಈ ಜೋಡಿಗೆ  ಇತ್ತೀಚೆಗಷ್ಟೇ  ಮದುವೆಯಾಗಿತ್ತು. ಆದರೆ ಪತಿ ತಾನು ಖಾಸಗಿ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು  ಹೇಳಿ ಆಕೆಯನ್ನು ಮದುವೆಯಾಗಿದ್ದ. ಆದರೆ ವಿವಾಹವಾದ ನಂತರ ಆಕೆಗೆ ಆತ ಚಿಕ್ಕ ಸಂಸ್ಥೆಯೊಂದರಲ್ಲಿ ಕ್ಲರ್ಕ್​ ಆಗಿದ್ದ ಎಂಬುದು ತಿಳಿದುಬಂದಿತ್ತು.


ಆದರೆ  ಮದುವೆ ಆದಮೇಲೆ ಆತ ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದ. ಇದರಿಂದ ಪತಿಯ ಮೇಲೆ ಮತ್ತಷ್ಟು ಕೋಪಗೊಂಡ ಮಹಿಳೆ ಗಂಡನಿಂದ ದೂರ ಇರಲು ಪ್ರಯತ್ನಿಸಿದ್ದಳು. ಅಷ್ಟರಲ್ಲೇ ಆಕೆ ಗರ್ಭವತಿಯಾಗಿದ್ದಳು. ಆ ವೇಳೆಯೂ ಆತ ಆಕೆಗೆ ಸೆಕ್ಸ್ ಗೆ ಬಲವಂತ ಪಡಿಸಿದ್ದನು.


ಪತಿಯ ಈ ವರ್ತನೆಯಿಂದ ಬೇಸತ್ತ ಆಕೆ ಆತನ ಮೇಲೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ಪತಿಯ ವಿರುದ್ಧ ವೈವಾಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಪತಿ, ಪತ್ನಿಯ ಒಪ್ಪಿಗೆ ಇಲ್ಲದೇ ದೈಹಿಕ ಸಂಪರ್ಕ ಹೊಂದಿದ್ದರೆ ಅದು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಆದಕಾರಣ ಪತಿಯ ವಿರುದ್ಧ ಎಫ್‍.ಐ.ಆರ್. ಕೂಡ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರೋಪಿಯನ್ನು ಬಂಧಿಸುವ ಬದಲು ಕಿಡ್ನ್ಯಾಪ್ ಮಾಡಿ ಹಣದ ಬೇಡಿಕೆಯಿಟ್ಟ ಪೊಲೀಸರು ಅರೆಸ್ಟ್

ನವದೆಹಲಿ : ವಂಚನೆ ಆರೋಪದ ಮೇಲೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರೇ ಅಪಹರಿಸಿ ಹಣಕ್ಕಾಗಿ ಆತನ ...

news

ಮೇಕೆದಾಟು : ತಮಿಳುನಾಡಿನ ತಕರಾರು ಸಲ್ಲದು ಎಂದ ಡಿಕೆಶಿ

ಮೇಕೆದಾಟು ನೀರಾವರಿ ಯೋಜನೆಯನ್ನು ನಮ್ಮ ಜಾಗದಲ್ಲಿ ಮಾತ್ರ ಮಾಡುತ್ತಿದ್ದು, ತಮಿಳುನಾಡು ಇದಕ್ಕೆ ತಕಾರರು ...

news

ಹುಲಿ ಹಿಡಿಯಲು ಬಂದ ಆನೆ ನಾಪತ್ತೆ!

ಹುಲಿ ಹಿಡಿಯಲು ಕಾಯಾಚರಣೆಗೆ ಬಂದಿದ್ದ ಆನೆಯೇ ಕಾಡಿನೊಳಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

news

ಸಿಎಂ ಸ್ಥಾನ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?

ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರವಿದೆ. ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ...

Widgets Magazine