Widgets Magazine
Widgets Magazine

ಪತಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಪತ್ನಿ!

Mohali, ಸೋಮವಾರ, 20 ಮಾರ್ಚ್ 2017 (13:46 IST)

Widgets Magazine

ಮೊಹಾಲಿ: ನಾರಿ ಮುನಿದರೆ ಮಾರಿ ಎನ್ನುವುದು ಈ ಪತಿಯ ಪಾಲಿಗೆ ಅಕ್ಷರಶಃ ನಿಜವಾಯಿತು. ಪತ್ನಿಯೇ ಪತಿಯನ್ನು ಕೊಂದು ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಮುಚ್ಚಿಟ್ಟ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ.


 
 
ಸಹೋದರ ಮತ್ತು ಗೆಳಯರ ಸಹಾಯದಿಂದ ಪತ್ನಿ ಈ ಕೆಲಸ ಮಾಡಿದ್ದಾಳೆ. ಏಕಂ ಸಿಂಗ್ ಧಿಲ್ಲೋನ್ (40)  ಕೊಲೆಗೀಡಾದ ವ್ಯಕ್ತಿ. ವೈಭವೋಪೇತ ಜೀವನಶೈಲಿಯನ್ನು ಬಯಸಿದ್ದ ಪತ್ನಿ ಸೀರತ್ ಪತಿ ಏಕಂ ಸಿಂಗ್ ಗೆ ಇನ್ನಿಲ್ಲದ ಚಿತ್ರ ಹಿಂಸೆ ಕೊಡುತ್ತಿದ್ದಳು ಎಂದು ಏಕಂ ಕುಟುಂಬದ ಮೂಲದವರು ದೂರಿದ್ದಾರೆ.
 
 
ಇದೇ ಕಾರಣಕ್ಕೆ  ಆಕೆ ಪತಿಯನ್ನು ಯಾವುದೇ ಉದ್ಯೋಗದಲ್ಲಿ ಹೆಚ್ಚು ದಿನ ಕೆಲಸ ಮಾಡಲು ಬಿಡುತ್ತಿರಲಿಲ್ಲವಂತೆ. ಇದನ್ನು ಏಕಂ ತನ್ನ ಕುಟುಂಬದ ಆಪ್ತರಲ್ಲಿ ಹೇಳಿಕೊಂಡಿದ್ದರಂತೆ. ಇದೀಗ ಎಲ್ಲಾ ಸರಿ ಮಾಡುವ ಮೊದಲೇ ಪತ್ನಿ ಸೀರತ್ ಪತಿಯನ್ನು ಕೊಲೆ ಮಾಡಿದ್ದಾಳೆ.
 
 
 
 ಸೂಟ್ ಕೇಸ್ ನಲ್ಲಿ ತುಂಬಿ ಮೃತದೇಹವನ್ನು ಅಜ್ಞಾತ ಸ್ಥಳದಲ್ಲಿ ಎಸೆಯುವ ಯೋಜನೆ ರೂಪಿಸಿದ್ದ ಸೀರತ್, ಇದಕ್ಕಾಗಿ ತನ್ನ ಸಹೋದರನ ಸಹಾಯ ಪಡೆದಿದ್ದಾಳೆ. ಅಲ್ಲದೆ, ರಿಕ್ಷಾ ಚಾಲಕನೊಬ್ಬನನ್ನು ಸಹಾಯಕ್ಕಾಗಿ ಕರೆದಿದ್ದಾಳೆ. ಆಗ ಅನುಮಾನಗೊಂಡ ಚಾಲಕ ಪೊಲೀಸರಿಗೆ ದೂರು ನೀಡಿದಾಗ ನಿಜ ಸಂಗತಿ ಬಯಲಿಗೆ ಬಂದಿದೆ. ಈ ಹಂತಕ ಪತ್ನಿ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರ ರಕ್ತ ಸಂಬಂಧಿ ಎನ್ನಲಾಗಿದೆ.
 
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಜ್ಯದಲ್ಲೂ ಬರ, ಸದನದಲ್ಲಿ ಸಚಿವರಿಗೂ ಬರ: ಜೆಡಿಎಸ್ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಬೀಕರ ಬರ ಕಾಡುತ್ತಿದ್ದರೆ ಸದನದಲ್ಲೂ ಸಚಿವರ ಬರ ಕಾಡುತ್ತಿದೆ ಎಂದು ಜೆಡಿಎಸ್ ಶಾಸಕ ...

news

ಗುಂಡ್ಲುಪೇಟೆ: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿಚಾರ್ಜ್

ಗುಂಡ್ಲುಪೇಟೆ: ಉಪಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಉಭಯ ಪಕ್ಷಗಳು ಕಾರ್ಯಕರ್ತರ ಮಧ್ಯೆ ವಾಗ್ವಾದ ...

news

45 ಜನರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ ಯುವತಿ

ಬೆಂಗಳೂರಿನ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ...

news

ಸಿಎಂ 12 ಬಾರಿ ಬಜೆಟ್ ಮಂಡಿಸಿದ್ರೂ, ಆರ್ಥಿಕ ನಿರ್ವಹಣೆಯಲ್ಲಿ ವಿಫಲ: ಶೆಟ್ಟರ್ ಆರೋಪ

ಬೆಂಗಳೂರು: 12 ಬಾರಿ ವಿತ್ತ ಸಚಿವರಾಗಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರೇ ಆರ್ಥಿಕ ನಿರ್ವಹಣೆಯಲ್ಲಿ ...

Widgets Magazine Widgets Magazine Widgets Magazine