ಡಾನ್ಸ್ ಮಾಡಲು ನಿರಾಕರಿಸಿದ ಪತ್ನಿಯನ್ನು ಮೇಲ್ಚಾವಣಿಯಿಂದ ಕೆಳಗೆ ತಳ್ಳಿದ ಪತಿ

ಕಾನ್ಪುರ್:, ಮಂಗಳವಾರ, 16 ಮೇ 2017 (14:13 IST)

Widgets Magazine

ಮದುವೆ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಲು ನಿರಾಕರಿಸಿದ ಪತ್ನಿಯನ್ನು ನಾಲ್ಕನೇ ಅಂತಸ್ತಿನ ಮನೆಯ ಮಾಳಿಗೆಯಿಂದ ಕೆಳಗೆ ತಳ್ಳಿದ ಘಟನೆ ಬಂದಾ ಜಿಲ್ಲೆಯ ಚಿಲ್ಲಾಘಾಟ್ ಪಟ್ಟಣದ ದಿಗಾವತ್ ಗ್ರಾಮದಲ್ಲಿ ವರದಿಯಾಗಿದೆ.  
 
ನಾಲ್ಕಂತಸ್ತಿನಿಂದ ಕೆಳೆಗೆ ಬಿದ್ದ 28 ವರ್ಷ ವಯಸ್ಸಿನ ಪತ್ನಿಯ(ವಿಶಾಖಾ ತಿವಾರಿ) ಎರಡು ಕಾಲುಗಳು ಮುರಿದಿದ್ದು, ಕೈ ಮತ್ತು ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ಮೂಲಗಳು ತಿಳಿಸಿವೆ,
 
ಕಳೆದ ಶನಿವಾರದಂದು ವಿಶಾಖಾ, ದಿಗಾವಟ್ ಗ್ರಾಮದಲ್ಲಿ ನಡೆಯಲಿದ್ದ ಸಹೋದರನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದಳು. ಡಾನ್ಸ್ ಕಾರ್ಯಕ್ರಮದಲ್ಲಿ ಆಕೆಯ ಪತಿ ಅಜಯ್ ತನ್ನೊಂದಿಗೆ ಮತ್ತು ಇತರ ಅತಿಥಿಗಳೊಂದಿಗೆ ಡಾನ್ಸ್ ಮಾಡಲು ಒತ್ತಾಯಿಸಿದ್ದಾನೆ. ಆದರೆ, ವಿಶಾಖಾ ನಿರಾಕರಿಸಿದ್ದಾಳೆ.     
 
ಪತ್ನಿಯ ನಿರಾಕರಣೆಯಿಂದ ಕೋಪಗೊಂಡ ಮದ್ಯಸೇವನೆಯ ಮತ್ತಿನಲ್ಲಿದ್ದ ಪತಿ ಅಜಯ್, ಆಕೆಯನ್ನು ನಾಲ್ಕು ಅಂತಸ್ತಿನ ಮನೆಯ ಮಾಳಿಗೆಯಿಂದ ಕೆಳಗೆ ತಳ್ಳಿದ್ದಾನೆ. ಗಂಭೀರವಾಗಿ ಗಾಯಗೊಂಡ ವಿಶಾಖಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
 
ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ಪತಿ ಅಜಯ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೈ ಕುಲುಕಲು ಬಂದ ಪಾಕ್ ಅಧಿಕಾರಿಗೆ ಭಾರತೀಯ ಅಧಿಕಾರಿ ಕೊಟ್ಟ ಉತ್ತರವಿದು!

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ವೈರತ್ವ ಎಷ್ಟು ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ. ...

news

ಸರಕಾರದ ಹಗರಣಗಳನ್ನು ಬಯಲು ಮಾಡ್ತೇನೆ: ಬಿಎಸ್‌ವೈ ಗುಡುಗು

ಬೆಂಗಳೂರು: ಸರಕಾರದ ಹಗರಣಗಳನ್ನು ಬಯಲು ಮಾಡ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ...

news

ವಾಹನ ಸವಾರರಿಗೆ ಬಂಪರ್: ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಪ್ರಮಾಣದ ಇಳಿಕೆ

ವಾರದ ಆರಂಭದಲ್ಲೇ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಬೆಲೆಯಲ್ಲಿ 2.16 ರೂ. ಮತ್ತು ...

news

ಲಾಲೂ ಪ್ರಸಾದ್ ಯಾದವ್ ಗೆ ಐಟಿ ಶಾಕ್

ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ತೆರಿಗೆ ಇಲಾಖೆ ಶಾಕ್ ನೀಡಿದೆ. ಲಾಲೂಗೆ ಸೇರಿದ ...

Widgets Magazine