ತಲೆ ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕ್ತೇವೆ: ಹುರಿಯತ್ ನಾಯಕರಿಗೆ ಹಿಜ್ಬುಲ್ ಉಗ್ರರ ಬೆದರಿಕೆ

ಶ್ರೀನಗರ್, ಶನಿವಾರ, 13 ಮೇ 2017 (14:44 IST)

Widgets Magazine

ಹುರಿಯತ್ ನಾಯಕರು ಇಸ್ಲಾಂ ವಿರುದ್ಧದ ಹೋರಾಟಕ್ಕೆ ಅಡ್ಡಿಪಡಿಸಿದಲ್ಲಿ ಅವರ ತಲೆಗಳನ್ನು ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕಲಾಗುವುದು ಎಂದು ಹಿಜ್ಬುಲ್ ಮುಜಾಹಿದಿನ್ ಉಗ್ರಗಾಮಿ ಸಂಘಟನೆ ಎಚ್ಚರಿಸಿದೆ.
 
ಹಿಜ್ಬುಲ್ ಮುಜಾಹಿದಿನ್ ಉಗ್ರಗಾಮಿ ಸಂಘಟನೆಯ ಮುಖಂಡ ಝಕೀರ್ ಮೂಸಾ ಪ್ರತ್ಯೇಕತಾವಾದಿಗಳಿಗೆ ಎಚ್ಚರಿಕೆ ನೀಡಿದ್ದಾನೆ.
 
ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆದ ಝಕೀರ್ ವಿಡಿಯೋದಲ್ಲಿ ಎಲ್ಲಾ ಹುರಿಯತ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇಸ್ಲಾಮಿಕ್ ಹೋರಾಟದಲ್ಲಿ ಮಧ್ಯಪ್ರವೇಶಿಸುವುದು ಬೇಡ. ಒಂದು ವೇಳೆ ಮಧ್ಯಪ್ರವೇಶಿಸಿದಲ್ಲಿ ಅವರ ತಲೆಗಳನ್ನು ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾವೆ.   
 
ಹಿಜ್ಬುಲ್ ಮುಜಾಹಿದಿನ್ ಸಂಘಟನೆ ಕಾಶ್ಮಿರದಲ್ಲಿ ಶರಿಯತ್ ಹೇರುವ ಗುರಿಯನ್ನು ಹೊಂದಿದೆಯೇ ಹೊರತು ಕಾಶ್ಮಿರ ಸಮಸ್ಯೆಯ ಪರಿಹಾರ ಮಾಡಲು ಬಯಸುವುದಿಲ್ಲ. ಅದೊಂದು ರಾಜಕೀಯ ಹೋರಾಟ ಎಂದು ಝಕೀರ್ ತಿಳಿಸಿದ್ದಾನೆ. 
 
ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಜ್ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್‌ಇಟಿ, ಹಿಜ್ಬುಲ್ ಮುಜಾಹಿದಿನ್ ಉಗ್ರರ ಫೋಟೋಗಳನ್ನು ಜಮ್ಮು ಕಾಶ್ಮಿರದ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.  
 
ನಮ್ಮ ಹೋರಾಟ ಇಸ್ಲಾಂ ಮತ್ತು ಶರಿಯತ್ ಪರವಾಗಿದೆ ಎನ್ನುವುದನ್ನು ಹುರಿಯತ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಐದು ನಿಮಿಷಗಳ ವಿಡಿಯೋದಲ್ಲಿ ಹಿಜ್ಬುಲ್ ಮುಜಾಹಿದಿನ್ ಉಗ್ರ ಝಕೀರ್ ಮೂಸಾ ಕರೆ ನಿಡಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿ ಆರೋಪಪಟ್ಟಿ ಡಿಸ್‌ಮಿಸ್ ಮಾಡಿದ್ದೇವೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಎದುರು ರಾಜ್ಯದ ಸಮಸ್ಯೆಗಳ ಬಗ್ಗೆ ಬಾಯಿಬಿಡದ ಬಿಜೆಪಿ ಮುಖಂಡರು ...

news

ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರೇ ಹೈಕಮಾಂಡ್:.ವಿಶ್ವನಾಥ್ ಮತ್ತೆ ವಾಗ್ದಾಳಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ಗೆ ಹೈಕಮಾಂಡ್‌ನಂತಾಗಿದ್ದಾರೆ ಎಂದು ಮಾಜಿ ಸಂಸದ ...

news

150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರ್ತೇವೆ: ಸಿಎಂಗೆ ಬಿಎಸ್‌ವೈ ಸವಾಲ್

ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ...

news

ಜಮ್ಮು: ಪಾಕ್ ಸೇನಾ ದಾಳಿಗೆ ತಂದೆ, ಮಗಳು ಸಾವು

ಜಮ್ಮು: ಜಮ್ಮು ಕಾಶ್ಮಿರದ ಗಡಿಭಾಗದಲ್ಲಿ ಪಾಕಿಸ್ತಾನ ಸೇನೆ ನಡೆಸಿದ ದಾಳಿಗೆ ತಂದೆ ಮತ್ತು ಮಗಳು ...

Widgets Magazine