ಬಿಜೆಪಿ ಪರ ನಿಂತ್ರಾ ವಿಂಗ್ ಕಮಾಂಡರ್ ಅಭಿನಂದನ್?

ನವದೆಹಲಿ, ಮಂಗಳವಾರ, 16 ಏಪ್ರಿಲ್ 2019 (14:13 IST)

ನವದೆಹಲಿ : ಶತ್ರು ಯುದ್ಧ ವಿಮಾನವನ್ನು ಹೊಡೆದುರುಳಿಸುವ ಭರದಲ್ಲಿ ಶತ್ರುಗಳ ಸೆರೆಯಾಗಿ ಹಿಂಸೆ ಅನುಭವಿಸಿ ಮತ್ತೆ ತಾಯ್ನಾಡಿಗೆ ಹಿಂದುರಿಗಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೀಡಿದ್ದಾರೆ ಎಂದ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಹೌದು. ಕತ್ತಿಗೆ ಬಿಜೆಪಿ ಚಿನ್ಹೆಯುಳ್ಳ ವಸ್ತ್ರವನ್ನು ಹಾಕಿರುವ ಅಭಿನಂದನ್ ರನ್ನೇ ಹೋಲುವ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಇದು ವೈರಲ್ ಆಗಿದ್ದು, ವಿಂಗ್ ಕಮಾಂಡರ್ ಅಭಿನಂದನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರಾ ಎಂಬ ಅನುಮಾನ ಜನರಲ್ಲಿ ಮೂಡಿತ್ತು.


ಆದರೆ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿರುವ ಸುದ್ದಿ ಸಂಸ್ಥೆಯೊಂದು ಇದು ಫೇಕ್ ಎಂದು ತಿಳಿಸಿದ್ದು, ಅಭಿನಂದನ್ ಅವರನ್ನೇ ಹೋಲುವ ಈತನಿಗೆ ಮುಖದಲ್ಲಿನ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರಿಸಬಾರದೆಂಬ ಕಾರಣಕ್ಕೆ ಆತನಿಗೆ ದೊಡ್ಡದಾದ ಕನ್ನಡಕವನ್ನು ಹಾಕಿದ್ದಾರೆ ಎಂದು ಹೇಳಿದೆ.


ಅಷ್ಟೇ ಅಲ್ಲದೇ ಸೇವಾ ನಿಯಮಾವಳಿಗಳ ಪ್ರಕಾರ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡುವ ಸಾಧ್ಯತೆಗಳಿಲ್ಲ. ಹೀಗಾಗಿ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯ ಫೋಟೋ ಹಾಕಿ ಅವರೆಂದು ಬಿಂಬಿಸಲಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೋಕಸಭಾ ಚುನಾವಣೆಯ ಹಿನ್ನಲೆ; ರಾಜ್ಯದಲ್ಲಿ ಈ ಮೂರು ದಿನಗಳ ಕಾಲ ಮದ್ಯಕ್ಕೆ ಬ್ರೇಕ್ ಹಾಕಿದ ಆಯೋಗ

ಬೆಂಗಳೂರು : ಚುನಾವಣೆಯ ಬಹಿರಂಗ ಪ್ರಚಾರ ಇಂದು ಮುಕ್ತಾಯವಾಗಲಿದ್ದು , ರಾಜ್ಯದಲ್ಲಿ ಏ. 18 ರಂದು ಮೊದಲ ಹಂತದ ...

news

ನಿನ್ನ ಶಿಶ್ನ ಚಿಕ್ಕದಾಗಿದೆ ಎಂದು ಗೆಳತಿ ಹೇಳಿದ್ದಕ್ಕೆ ಆತ ಮಾಡಿದ್ದೇನು ಗೊತ್ತಾ?

ಚೀನಾ : ಲೈಂಗಿಕ ಕ್ರಿಯೆಯ ವಿಚಾರದ ಬಗ್ಗೆ ಪುರುಷರಿಗೆ ಹೀಯಾಳಿಸಿದರೆ ಅವರು ಖಿನ್ನತೆಗೆ ಒಳಗಾಗುತ್ತಾರೆ ...

news

ಮುಟ್ಟು ಆಗುವ ಮೊದಲು ಮತ್ತು ನಂತರದ ಕೆಲವು ಅವಧಿಯಲ್ಲಿ ಲೈಂಗಿಕ ಕ್ರಿಯೆ ಮಾಡಿದರೆ ಗರ್ಭಿಣಿಯಾಗುವುದಿಲ್ಲವಂತೆ. ಇದು ನಿಜವೇ ?

ಬೆಂಗಳೂರು : ಪ್ರಶ್ನೆ : ನಾನು ಮತ್ತು ನನ್ನ ಸಂಗಾತಿ ಮುಂದಿನ ತಿಂಗಳು ಮದುವೆಯಾಗಲು ನಿರ್ಧರಿಸಿದ್ದೇವೆ. ...

news

ಮುಖದಲ್ಲಿ ಹೆಚ್ಚು ಕೂದಲಿಲ್ಲವಾದರೆ ಅಂತವರು ಲೈಂಗಿಕ ಅಸಮರ್ಥರೇ?

ಬೆಂಗಳೂರು : ಪ್ರಶ್ನೆ : ನನಗೆ 23 ವರ್ಷ. ನನಗೆ ಮುಖದಲ್ಲಿ ಹೆಚ್ಚು ಕೂದಲಿಲ್ಲ. ನನಗಿಂತ ಕಿರಿಯರಿಗೆ ಹೆಚ್ಚು ...

Widgets Magazine