ಹೆಣ್ಣು ಹೆತ್ತದ್ದಕ್ಕಾಗಿ ವರದಕ್ಷಿಣೆ ನೆಪವೊಡ್ಡಿ ಬಾಣಂತಿಗೆ ಥಳಿತ

ಪಟಿಯಾಲಾ, ಶನಿವಾರ, 15 ಜುಲೈ 2017 (13:03 IST)

ಪಟಿಯಾಲಾ:ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಹಸಿ ಬಾಣಂತಿಯೊಬ್ಬಳ ಮೇಲೆ ಆಕೆಯ ಮೈದುನ ಮತ್ತು ಸ್ನೇಹಿತ ಬಡಿಗೆಯಿಂದ ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್ ನ ಪಟಿಯಾಲಾದಲ್ಲಿ ನಡೆದಿದೆ.
 
ಪಾಟಿಯಾಲ ನಿವಾಸಿ ಮೀನಾ ಕಶ್ಯಪ್ ಎಂಬುವವರು ಹಲ್ಲೆಗೊಳಗಾದ ಮಹಿಳೆಯಾಗಿದ್ದು, ವರ್ಷಗಳ ಹಿಂದಷ್ಟೇ ಮೀನಾ ದಲ್ಜೀತ್ ಸಿಂಗ್ ಎಂಬುವವರನ್ನು ವಿವಾವವಾಗಿದ್ದರು. ಇತ್ತೀಚೆದೆ ಮೀನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಆದರೆ ಹೆಣ್ಣು ಮಗು ಜನಿಸುವುದು ಇಷ್ಟವಿರದ ಮನೆಯವರು ಹೆಣ್ಣುಮಗು ಹೆತ್ತಿದ್ದೀಯ ವರದಕ್ಷಿಣೆ ತರಬೇಕು ಎಂದು ಮಹಿಳೆಯನ್ನು ದೊಣ್ಣೆಯಿಂದ ಥಳಿಸಿದ್ದಾರೆ. ಗಂಡನ ಸಹೋದರರು ಹಾಗೂ ಆವರ ಸ್ನೇಹಿತರು ಮಹಿಳೆಗೆ ಥಳಿಸಿದ್ದು, ನೆರೆಮನೆಯೊಬ್ಬರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ದಾಖಲಿಸಿ ಸಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
 
ಹೆಣ್ಣು ಮಗು ಜನಿಸಿದ ಬಳಿಕ ಆಕೆಯನ್ನು ಕುಟುಂಬದೊಳಗೆ ಸೇರಿಸಿಕೊಳ್ಳಲು ಕುಟುಂಬ ನಿರಾಕರಿಸಿದ್ದರಿಂದ ಆಕೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಳು. ಅದಾಗ್ಯೂ ಆಕೆಯನ್ನು ಬಿಡದ ಗಂಡನ ಸಹೊದರರು ಥಳಿಸಿದ್ದಾರೆ. ವಿಡೊಯೋ ವೈರಲ್ ಆಗುತಿದ್ದಂತೆ ಎಚ್ಚೆತ್ತ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು,  ಮೂವರನ್ನು ವಶಕ್ಕೆ ಪಡೆದಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪರಪ್ಪನ ಅಗ್ರಹಾರ ಜೈಲಾಗಿ ಉಳಿದಿಲ್ಲ, ಅದೊಂದು ಬಾರ್: ಆರ್.ಅಶೋಕ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಜೈಲಾಗಿ ಉಳಿದಿಲ್ಲ ಅದೊಂದು ಬಾರ್ ಎನ್ನುವಂತಾಗಿದೆ ಎಂದು ಬಿಜೆಪಿ ಮುಖಂಡ ...

news

ಉಪರಾಷ್ಟ್ರಪತಿಯಾಗಲಿದ್ದಾರಾ ಎಸ್ ಎಂ ಕೃಷ್ಣ?

ಬೆಂಗಳೂರು: ಕಾಂಗ್ರೆಸ್ ತ್ಯಜಿಸಿ ಇತ್ತೀಚೆಗೆ ಬಿಜೆಪಿ ಸೇರಿದ್ದ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ...

news

ಅಮರನಾಥ ಯಾತ್ರಿಕರ ಮೇಲೆ ದಾಳಿ: ಪಿಡಿಪಿ ಶಾಸಕನ ಡ್ರೈವರ್ ಅರೆಸ್ಟ್

ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಶಾಸಕ ಏಜಾಜ್ ಅಹ್ಮದ್ ಅವರ ...

news

ಅನುಮಾನಕ್ಕೆ ಕಾರಣವಾಯ್ತು ಡಿಜಿ ಸತ್ಯನಾರಾಯಣ ಪರಪ್ಪನ ಅಗ್ರಹಾರ ಜೈಲಿನ ಭೇಟಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಡಿಐಜಿ ರೂಪಾ ವರದಿಯ ಬೆನ್ನಲ್ಲೇ ಸಿಎಂ ...

Widgets Magazine