17ರ ಬಾಲಕನ ಮೇಲೆ 29 ವರ್ಷದ ಅಂಟಿಯಿಂದ ನಿರಂತರ ರೇಪ್

ಮಾಪುಸಾ(ಗೋವಾ), ಬುಧವಾರ, 27 ಸೆಪ್ಟಂಬರ್ 2017 (16:47 IST)

ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯ ವಿರುದ್ಧ ದೂರು ದಾಖಲಿಸಲಾಗಿದೆ.
17 ವರ್ಷ ವಯಸ್ಸಿನ ಪುತ್ರನ ಮೇಲೆ 29 ವರ್ಷ ವಯಸ್ಸಿನ ಮಹಿಳೆ ಜೂನ್ 7 ಮತ್ತು ಸೆಪ್ಟೆಂಬರ್ 11 ರಂದು ಅತ್ಯಾಚಾರವೆಸಗಿದ್ದಾಳೆ ಎಂದು ಬಾಲಕನ ಪೋಷಕರು ಮಾಪುಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಬಾಲಕ ಮನೆಯಿಂದ ಓಡಿಹೋಗಿ ಮಾಪುಸಾ ನಗರದಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಅತ್ಯಾಚಾರವೆಸಗಿದ ವಿಚ್ಚೇದಿತ ಮೂರು ಮಕ್ಕಳ ತಾಯಿಯಾಗಿರುವ ಮಹಿಳೆಯ ಮನೆಯಲ್ಲಿ ವಾಸವಾಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕೆಲವು ದಿನಗಳ ಹಿಂದೆ,  ಮನೆಗೆ ಹಿಂದಿರುಗಿದ ಬಾಲಕ ಅಸಹಜವಾಗಿ ವರ್ತಿಸಲು ಪ್ರಾರಂಭಿಸಿದ್ದನು.ಇದರಿಂದ ಗಾಬರಿಗೊಂಡ ಪೋಷಕರು ಆತನನ್ನು ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಅಂಡ್ ಹ್ಯೂಮನ್ ಬಿಹೇವಿಯರ್ (ಐಪಿಹೆಚ್‌ಬಿ ) ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
ಮಾನಸಿಕ ತಜ್ಞರು ನಡೆಸಿದ ಸಮಾಲೋಚನೆಯಲ್ಲಿ ಬಾಲಕ, ಮಹಿಳೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿರುವುದನ್ನು ಬಹಿರಂಗಪಡಿಸಿದ್ದನು ಎನ್ನಲಾಗಿದೆ. 
 
ಮಂಗಳವಾರ ಪೊಲೀಸರು, ಲೈಂಗಿಕ ಅಪರಾಧವಾದ (ಪೋಸ್ಕೊ) ಕಾಯ್ದೆ ಮತ್ತು ಗೋವಾ ಮಕ್ಕಳ ಕಾಯ್ದೆಯಡಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 
 
ಆರೋಪಿ ಮಹಿಳೆಯನ್ನು ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ವಿಚಾರಣೆಯ ನಂತರ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತುಷಾರ್ ಲೋಟ್ಲಿಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈಸೂರಿನಲ್ಲಿ ವರುಣನ ಆರ್ಭಟ: ಕೆರೆ ಕಟ್ಟೆಗಳು ಒಡೆದು ಮನೆಗಳಿಗೆ ನುಗ್ಗಿದ ನೀರು

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಬೆನ್ನಲ್ಲೇ ನಗರದಲ್ಲಿ ಕಳೆದೆರಡು ದಿನಳಿಂಗ ಭಾರೀ ಮಳೆಯಾಗುತ್ತಿದೆ. ...

news

ಯಡಿಯೂರಪ್ಪ ಅಲ್ಲ, ಯಾರೇ ಸ್ಪರ್ಧಿಸಿದರು ಹೆದರುವುದಿಲ್ಲ: ಸಚಿವೆ ಉಮಾಶ್ರೀ

ಕಲಬುರ್ಗಿ: ಯಡಿಯೂರಪ್ಪ ಅಲ್ಲ ಬೇರೆ ಯಾರೇ ಬಲಿಷ್ಠ ನಾಯಕರು ಸ್ಪರ್ಧಿಸಿದರು ಹೆದರುವುದಿಲ್ಲ. ಓಡಿ ಹೋಗುವುದು ...

news

ಮೌಢ್ಯ ಪ್ರತಿಬಂಧಕ ವಿಧೇಯಕಕ್ಕೆ ಸಚಿವ ಸಂಪುಟದಿಂದ ಅನುಮೋದನೆ

ಬೆಂಗಳೂರು: ಮೌಢ್ಯ ಪ್ರತಿಬಂಧಕ ಅಮಾನವೀಯ ದುಷ್ಟ ಮತ್ತು ವಾಮಾಚಾರ ನಿರ್ಮೂಲನೆ ವಿಧೇಯಕ-2017ಕ್ಕೆ ಸಚಿವ ...

news

ಗೋವಾ ಸಿಎಂ ಮನೋಹರ್ ಪರಿಕ್ಕರ್‍‌ಗೆ ಕನ್ನಡ ಸಂಘಟನೆಗಳ ಧಿಕ್ಕಾರ

ಬೆಂಗಳೂರು: ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ಧ್ವಂಸಗೊಳಿಸಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ವಿರುದ್ಧ ...

Widgets Magazine
Widgets Magazine