ನೇಪಾಳಿ ಮಹಿಳೆಯ ಮೇಲೆ ಐವರು ಕಾಮುಕರಿಂದ ಗ್ಯಾಂಗ್‌ರೇಪ್

ನವದೆಹಲಿ, ಸೋಮವಾರ, 13 ಮಾರ್ಚ್ 2017 (18:16 IST)

Widgets Magazine
rape

ನೇಪಾಳಿ ಮೂಲದ ಮಹಿಳೆಯ ಮೇಲೆ ಐವರು ಕಾಮುಕರು ಗ್ಯಾಂಗ್‌ರೇಪ್ ಎಸಗಿದ ಘಟನೆ ಪೂರ್ವ ದೆಹಲಿಯ ಪಾಂಡವ್ ನಗರದಲ್ಲಿ ನಡೆದಿದೆ.
 
ಮಹಿಳೆಗೆ ಮತ್ತು ಬರಿಸುವ ಡ್ರಗ್ಸ್ ನೀಡಿ ಐವರು ಆರೋಪಿಗಳು ಅತ್ಯಾಚಾರವೆಸಗಿದ್ದು, ಒಬ್ಬ ಆರೋಪಿ ಮಹಿಳೆಗೆ ಚಿರಪರಿಚಿತನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿರುವ ಆರೋಪಿಗಳು ಬಿಪಿಓ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದು, ಪೊಲೀಸರು ಎಲ್ಲಾ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 
 
ಐವರು ಆರೋಪಿಗಳು ಆಕೆಯನ್ನು ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಬಂದು ಮದ್ಯ ಸೇವಿಸಲು ಒತ್ತಾಯಿಸಿದ್ದಾರೆ. ಮದ್ಯದಲ್ಲಿ ಡ್ರಗ್ಸ್ ಬೆರೆಸಿ ನೀಡಿದ್ದಾರೆ. ನಂತರ ಕೋಣೆಯಲ್ಲಿ ಕೂಡಿಹಾಕಿ ಒಬ್ಬರ ನಂತರ ಮತ್ತೊಬ್ಬರಂತೆ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಮತ್ತಷ್ಟು ಕೆಟ್ಟದಾಗಿ ವರ್ತಿಸುವುದನ್ನು ಅರಿತ ಮಹಿಳೆ ನಗ್ನಳಾಗಿಯೇ ಮೊದಲ ಮಹಡಿಯ ಬಾಲ್ಕನಿಯಿಂದ ಹೊರಗೆ ಹಾರಿ ಪರಾರಿಯಾಗಿದ್ದಾಳೆ. ಆಕೆ ರಸ್ತೆಯ ಮೇಲೆ ನಗ್ನರಾಗಿ ಓಡುತ್ತಿದ್ದರೂ ಯಾರು ಆಕೆಯ ಸಹಾಯಕ್ಕೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 
 
ಏತನ್ಮಧ್ಯೆ, ಮಹಿಳೆ ವೇಶ್ಯೆಯಾಗಿದ್ದು ಹಣ ನೀಡಿ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಬಂದಿದ್ದೇವೆ ಎಂದು ಆರೋಪಿಗಳು ಉಲ್ಟಾ ಹೊಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆದರಿಕೆಗಳಿಗೆ ಹಾಡಿನ ಮೂಲಕವೇ ಉತ್ತರಿಸಿದ ಸುಹಾನಾ

ಖಾಸಗಿ ಚಾನಲ್`ನ ರಿಯಾಲಿಟಿ ಶೋನಲ್ಲಿ ಹಿಂದೂ ದೇವರ ಭಕ್ತಿಗೀತೆ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ...

news

ಕರ್ನಾಟಕ ಟಾರ್ಗೆಟ್: ರಾಜ್ಯದ ಬಿಜೆಪಿ ನಾಯಕರಿಗೆ ಅಮಿತ್ ಶಾ ಬುಲಾವ್

ಬೆಂಗಳೂರು: ರಾಜ್ಯದ ಬಿಜೆಪಿ ನಾಯಕರಿಗೆ ದೆಹಲಿಗೆ ಬರುವಂತೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬುಲಾವ್ ...

news

ಏರ್`ಪೋರ್ಟ್`ನ ಮಹಿಳಾ ಪೊಲೀಸ್ ಪೇದೆ ಮೇಲೆ ಅತ್ಯಾಚಾರ

ಬೆಂಗಳೂರಿನ ಸಿಐಎಸ್ಎಫ್ ಮಹಿಳಾ ಪೇದೆ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಏರ್`ಪೋರ್ಟ್`ನ ...

news

ನನಗೆ ಬಹುಮತವಿದೆ ಯಾಕೆ ರಾಜೀನಾಮೆ ನೀಡಬೇಕು? : ಮಣಿಪುರ್ ಸಿಎಂ

ಇಂಫಾಲ್: ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದೆ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಇಬೋಬಿ ...

Widgets Magazine Widgets Magazine