ಅನೈತಿಕ ಸಂಬಂಧ: ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದ ಮಹಿಳಾ ಪೊಲೀಸ್ ಅಧಿಕಾರಿಣಿ

ಹೈದ್ರಾಬಾದ್, ಮಂಗಳವಾರ, 23 ಜನವರಿ 2018 (12:14 IST)

ಪ್ರಕರಣವೊಂದರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಹಿರಿಯ ಮಹಿಳಾ ಅಧಿಕಾರಿಯೊಬ್ಬರು, ಪೊಲೀಸ್ ಸರ್ಕಲ್ ಇನ್ಸೆಪೆಕ್ಟರ್‌ನೊಂದಿಗೆ ಸೆಕ್ಸ್‌ನಲ್ಲಿ ತೊಡಗಿದ್ದಾಗ ಮಹಿಳಾ ಅಧಿಕಾರಿಯ ಪತಿ, ಮತ್ತು ಸಂಬಂಧಿಕರು ರೆಡ್‌ಹ್ಯಾಂಡಾಗಿ ಹಿಡಿದು ಮನಬಂದಂತೆ ಥಳಿಸಿದ ಘಟನೆ ಕೆಪಿಎಚ್‌ಬಿ ಕಾಲೋನಿಯಲ್ಲಿ ವರದಿಯಾಗಿದೆ.
  
ಭ್ರಷ್ಟಾಚಾರ ನಿಗ್ರಹ ದಳದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಸುನೀತಾ ರೆಡ್ಡಿ, ಅಪಾರ್ಟ್‌ಮೆಂಟ್‌ನಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ರೆಡ್ಡಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಸುನೀತಾ ರೆಡ್ಡಿ ಪತಿ ಸುರೇಂದ್ರ ರೆಡ್ಡಿ ಮತ್ತು ಸುನೀತಾ ಪೋಷಕರು ಅಪಾರ್ಟ್‌ಮೆಂಟ್‌ಗೆ ನುಗ್ಗಿ ಸುನೀತಾ ಮತ್ತು ಆಕೆಯ ಪ್ರಿಯಕರ ಮಲ್ಲಿಕಾರ್ಜುನ್ ರೆಡ್ಡಿಯನ್ನು ಹೊರಗೆಳೆದು ತಂದು ಮನಬಂದಂತೆ ಚಪ್ಪಲಿಯಿಂದ ಥಳಿಸಿದ್ದಾರೆ. 
 
ಸುನೀತಾ ರೆಡ್ಡಿಯ ಪತಿ ಸುರೇಂದ್ರ ರೆಡ್ಡಿ ಮಾತನಾಡಿ, ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಮೊದಲೆ ಮಾಹಿತಿಯಿತ್ತು. ಆದರೆ, ರೆಡ್‌ಹ್ಯಾಂಡಾಗಿ ಹಿಡಿಯಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೆ. ಇಂದು ಬೆಳಿಗ್ಗೆ ಪತ್ನಿಯನ್ನು ಹಿಂಬಾಲಿಸಿದಾಗ ಸತ್ಯ ಸಂಗತಿ ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.
 
ಪತ್ನಿಯ ಪ್ರಿಯಕರನಾದ ಮಲ್ಲಿಕಾರ್ಜುನ್ ರೆಡ್ಡಿ ತಮ್ಮ ಹತ್ಯೆಗೆ ಸ್ಕೇಚ್ ಹಾಕಿದ್ದಾನೆ. ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿದ್ದರಿಂದ ಆಕೆಯನ್ನು ತ್ಯಜಿಸಲು ಸಿದ್ದವಾಗಿದ್ದೇನೆ. ಆದರೆ. ಇಂತಹ ಗೌರವಾನ್ವಿತ ಅಧಿಕಾರಿಗಳು ಎಂತಹ ಅಗೌರವದ ಕೆಲಸಕ್ಕೆ ಕೈ ಹಾಕುತ್ತಾರೆ ಎನ್ನುವುದನ್ನು ಜಗತ್ತಿಗೆ ತೋರಿಸುವುದು ನನ್ನ ಉದ್ದೇಶವಾಗಿತ್ತು ಎಂದು ಮಹಿಳಾ ಅಧಿಕಾರಿಯ ಪತಿ ಸುರೇಂದ್ರ ರೆಡ್ಡಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೊನೆಗೂ ಸಿಕ್ತು 'ಪದ್ಮಾವತ್' ಗೆ ಬಿಡುಗಡೆ ಭಾಗ್ಯ; ರಾಜಸ್ತಾನ, ಮಧ್ಯಪ್ರದೇಶ ಸರ್ಕಾರ ಹಾಗೂ ಕರಣಿ ಸೇನೆಗೆ ಮುಖಭಂಗ

ನವದೆಹಲಿ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರದ ...

news

ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ; ವೈರಲ್ ಆಯ್ತು ಬೆದರಿಕೆ ಆಡಿಯೋ

ಲಕ್ನೋ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ, ಆಗ್ರಾದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ ಅವರು ...

news

ಸಚಿವ ರಮೇಶ್ ಕುಮಾರ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದು ಯಾಕೆ…?

ಗದಗ : ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಸಂಸದ ಪ್ರತಾಪ್ ಸಿಂಹ ಅವರು ವಿರುದ್ದ ತೀವ್ರ ಆಕ್ರೋಶ ...

news

ಯಡಿಯೂರಪ್ಪನವರಿಗೆ ಕೈ ಕೊಟ್ಟ ಬಲಗೈ ಬಂಟ

ಬೆಂಗಳೂರು: ಚುನಾವಣೆಗೆ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಆಪ್ತ ಬಂಟನಿಂದಲೇ ಶಾಕ್ ...

Widgets Magazine