ಮಹಿಳಾ ಪೊಲೀಸ್ ಪೇದೆಯಿಂದ ಮಸಾಜ್ ಮಾಡಿಕೊಂಡ ಪೊಲೀಸ್ ಅಧಿಕಾರಿ ವಿಡಿಯೋ ವೈರಲ್

ವಿಶಾಖಪಟ್ಟಣಂ, ಸೋಮವಾರ, 13 ನವೆಂಬರ್ 2017 (19:55 IST)

ಪೊಲೀಸ್ ಅಧಿಕಾರಿಯೊಬ್ಬ ಮಹಿಳೆ ಪೊಲೀಸ್ ಪೇದೆಯಿಂದ ಮಸಾಜ್ ಮಾಡಿಕೊಂಡ ವಿಡಿಯೋ ಇದೀಗ ವೈರಲ್ ಆದ ಘಟನೆ ಜೋಗುಲಾಂಬ್ ಗದ್ವಾಲ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಮಹಿಳಾ ಪೊಲೀಸ್ ಪೇದೆಯನ್ನು ಹಿರಿಯ ಪೊಲೀಸ್ ಅಧಿಕಾರಿ ಹಾಸನ್ ಎಂಬಾತ ಮಸಾಜ್‌ ಮಾಡಿಸಿಕೊಳ್ಳಲು ಬಳಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
 
ಕಳೆದ ಹಲವು ದಿನಗಳಿಂದ ಮಹಿಳಾ ಪೊಲೀಸ್ ಪೇದೆಯ ಕೈಯಿಂದ ಮಸಾಜ್ ಮಾಡಿಕೊಳ್ಳುತ್ತಿದ್ದ ಎಎಸ್‌ಐ ಹಾಸನ್‌ನನ್ನು ರೆಡ್‌ಹ್ಯಾಂಡಾಗಿ ಹಿಡಿಯಬೇಕು ಎನ್ನುವ ಉದ್ದೇಶದಿಂದ ಕೋಣೆಯಲ್ಲಿ ಸಿಕ್ರೇಟ್ ಕ್ಯಾಮರಾ ಅಳವಡಿಸಲಾಗಿತ್ತು. ಇದೀಗ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಘಟನೆಯ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಆರೋಪಿ ಪೊಲೀಸ್ ಅಧಿಕಾರಿ ಹಾಸನ್ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೆಕ್ಸ್ ಸಿಡಿ ಬಗ್ಗೆ ಹಾರ್ದಿಕ್ ಪಟೇಲ್ ಸ್ಪಷ್ಟನೆ

ವಡೋದರಾ: ಗುಜರಾತ್‌ನಲ್ಲಿ ಕೊಳಕು ರಾಜಕಾರಣ ಆರಂಭವಾಗಿದೆ. ನನ್ನ ವಿರುದ್ಧ ಕಳಂಕ ತರಲು ಬಿಜೆಪಿ ಷಡ್ಯಂತ್ರ್ಯ ...

news

ನಾನು ಹುಲಿಯೂ ಅಲ್ಲ, ಇಲಿಯೂ ಅಲ್ಲ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ನಾನು ಹುಲಿಯೂ ಅಲ್ಲ, ಇಲಿಯೂ ಅಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಗೆ ...

news

ನಾನೇ ಬಾಹುಬಲಿ ಎಂದು ಸ್ಟಂಟ್‌ ಮಾಡಲು ಹೋಗಿ ಆನೆಯಿಂದ ಒದೆ ತಿಂದ ಭೂಪ

ಕೇರಳ: ನಾನೇ ಬಾಹುಬಲಿ ಎಂದು ಆನೆಯ ಮುಂದೆ ಸ್ಟಂಟ್ ಮಾಡಲು ಹೋದ ಭೂಪನೊಬ್ಬ ಸಕತ್ತಾಗಿ ಒದೆ ತಿಂದ ಘಟನೆ ...

news

ಜಾರ್ಜ್ ಕೊಲೆಗಡುಕ ಅಂದ್ರೂ ಸುಮ್ಮನಿರಬೇಕಾ?: ಸಿಎಂ ಗುಡುಗು

ಬೆಳಗಾವಿ: ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್‌ರನ್ನು ಬಿಜೆಪಿ ನಾಯಕರು ಕೊಲೆಗಡುಕ ಎಂದರೂ ...

Widgets Magazine
Widgets Magazine