Widgets Magazine
Widgets Magazine

ಸಹೋದರನ ಮುಂದೆ ಯುವತಿಯ ಅತ್ಯಾಚಾರ

ಗುರುಮೂರ್ತಿ 

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (16:14 IST)

Widgets Magazine

23 ವರ್ಷದ ಯುವತಿಯ ಮೇಲೆ ಯುವಕನೋರ್ವನು ಅತ್ಯಾಚಾರ ನಡೆಸಿದ್ದು ಉತ್ತರ ಪ್ರದೇಶದ ಮುಜಾಫರ್‌ನಗರ್‌ದ ಕೊತ್ವಾಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ನಡೆಸಿದ್ದು, ಈ ವೇಳೆಯಲ್ಲಿ ಆಕೆಯ ಬುದ್ದಿಮಾಂಧ್ಯ ಸಹೋದರನ ಮುಂದೆಯೇ ಆರೋಪಿಯು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಸಂತ್ರಸ್ತೆಯ ದೂರಿನ ಪ್ರಕಾರ ಕೊತ್ವಾಲಿ ಪೊಲೀಸ್ ಠಾಣಾ ವಲಯದಲ್ಲಿ ಕೆಲವು ಔಷಧಗಳನ್ನು ಖರೀದಿಸಿಕೊಂಡು ಬರಲು ಸಹೋದರನ ಜೊತೆಗೆ ಹೊರಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವಳು ಹೇಳಿದ್ದು, ಆರೋಪಿಯಾದ ಮೋನು ತನ್ನ ಮೋಟಾರು ಸೈಕಲ್‌ನಲ್ಲಿ ಅಂಗಡಿಯವರೆಗೂ ಬಿಡುವುದಾಗಿ ಅವರಿಗೆ ಹೇಳಿರುವುದಾಗಿ ತಿಳಿಸಿದ್ದಾಳೆ.
 
ನಂತರ ಅವರನ್ನು ತನ್ನ ಮೋಟಾರು ಸೈಕಲ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಬುದ್ದಿಮಾಂಧ್ಯ ಸಹೋದರನ ಮುಂದೆಯೇ ಅತ್ಯಾಚಾರವೆಸಗಿರುವುದಷ್ಟೇ ಅಲ್ಲ ಈ ವಿಷಯವನ್ನು ಯಾರಿಗಾದೂ ತಿಳಿಸಿದಲ್ಲಿ ತೊಂದರೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿದೆ. ಈ ದೂರಿಗೆ ಸ್ಪಂದಿಸಿರುವ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರೇಪ್ ಮಹಿಳೆ ಸಹೋದರ ಕ್ರೈಮ್ ಪೊಲೀಸ್ Rape Woman Brother Crime Police

Widgets Magazine

ಸುದ್ದಿಗಳು

news

ಭಾರತದಲ್ಲಿ ಮುಸ್ಲಿಮರ ಅಗತ್ಯವಿಲ್ಲ: ಬಿಜೆಪಿ ಸಂಸದ ವಿನಯ್ ಕಟಿಯಾರ್

ನವದೆಹಲಿ; ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸತ್ ಸದಸ್ಯ ವಿನಯ್ ಕಟಿಯಾರ್ ಮುಸ್ಲಿಮರನ್ನು ಭಾರತದಲ್ಲಿ ...

news

ಬಿಜೆಪಿ ಸೋಲಿಸಲು ಸಮಾನ ಮನಸ್ಕರೊಂದಿಗೆ ಮೈತ್ರಿ– ಸೋನಿಯಾ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಕೈಜೋಡಿಸುತ್ತೇವೆ ...

news

ಅತ್ಯಾಚಾರದ ದೂರು ನೀಡಲು ಬಂದಿದ್ದ ಸಂತ್ರಸ್ತೆ ಮೇಲೆ ಪೇದೆಯಿಂದ ಮತ್ತೆ ಅತ್ಯಾಚಾರ

ಸಾಮಾಹಿಕ ಅತ್ಯಾಚಾರದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಸಂತ್ರಸ್ತೆ ಮೇಲೆ ಪೊಲೀಸ್ ಪೇದೆಯೇ ...

news

ಮಠಗಳ ನಿಯಂತ್ರಣ ವಿಷಯ ಮೇಲ್ಮನೆಯಲ್ಲಿ ಪ್ರಸ್ತಾಪ, ಬಿಜೆಪಿ– ಜೆಡಿಎಸ್ ಸಭಾತ್ಯಾಗ

ಮಠ-ಮಂದಿರ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಣಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ...

Widgets Magazine Widgets Magazine Widgets Magazine