ವಿವಾಹ ಪ್ರಸ್ತಾಪ ತಿರಸ್ಕರಿಸಿದ ಯುವತಿಯ ಸಜೀವ ದಹನ

ಜೈಪುರ್, ಸೋಮವಾರ, 25 ಸೆಪ್ಟಂಬರ್ 2017 (15:19 IST)

Widgets Magazine

ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ 18ರ ಯುವತಿಯನ್ನು ಸಜೀವವಾಗಿ ದಹಿಸಿದ ಭೀಕರ ಘಟನೆ ರಾಜಸ್ಥಾನದ ಬನ್ಸಾವರ್‌ ಜಿಲ್ಲೆಯ ಇಸರ್ವಿಯಾ ಪಟ್ಟಣದಲ್ಲಿ ನಡೆದಿದೆ.
ವಿವಾಹವಾಗಲು ಬಯಸಿದ್ದ ಆರೋಪಿ ಯುವಕ ರವಿ ಮತ್ತು ಆತನ ತಂದೆ ಮನೆಯಲ್ಲಿಯೇ ಯುವತಿ ಸೀಮಾಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಶೇ.75 ರಷ್ಟು ಸುಟ್ಟ ಗಾಯಗಳೊಂದಿಗೆ ಸೀಮಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
 
ಯುವತಿ ಸೀಮಾ ತಂದೆಯ ಪ್ರಕಾರ, ರವಿ ಎನ್ನುವ ವ್ಯಕ್ತಿ ಸೀಮಾಳನ್ನು ವಿವಾಹವಾಗುವ ಪ್ರಸ್ತಾಪವನ್ನು ಮುಂದಿಟ್ಟಿದ್ದ. ಆದರೆ, ಆತನ ವಿವಾಹ ಪ್ರಸ್ತಾಪವನ್ನು ಸೀಮಾ ತಿರಸ್ಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ರವಿ ಮತ್ತು ಆತನ ತಂದೆ ಸೀಮಾಳನ್ನು ಜೀವಂತವಾಗಿ ದಹಿಸಿದ್ದಾರೆ ಎಂದು ತಿಳಿಸಿದ್ದಾರೆ. 
 
ಆರೋಪಿ ರವಿಯ ಕಿರುಕುಳ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ. ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು ಯುವತಿಯ ತಂದೆ ಆರೋಪಿಸಿದ್ದಾನೆ. 
 
ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ವಂಶಪರಂಪರೆ ರಾಜಕೀಯದಲ್ಲಿ ಬಿಜೆಪಿಯಲ್ಲ: ಅಮಿತ್ ಶಾ

ನವದೆಹಲಿ: ಅಂತಾರಾಷ್ಟ್ರೀಯ ವೇದಿಕೆಯ ಮೇಲೆ ವಂಶಪಾರಂಪರೆ ರಾಜಕೀಯದ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ...

news

ನಮ್ಮದು ರೈತ ಪರ ಸರ್ಕಾರ, ಬಿಜೆಪಿಯವರಂತೆ ಗೋಲಿಬಾರ್ ಮಾಡಿಲ್ಲ: ಸಿಎಂ

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ರೈತರ ಮೇಲೆ ಗೋಲಿಬಾರ್‌ನಲ್ಲಿ ಹಲವರನ್ನು ಬಲಿ ತೆಗೆದುಕೊಂಡಿತ್ತು. ...

news

ವಿದ್ಯಾರ್ಥಿಯನ್ನ ಬಲಿ ಪಡೆದ ಸೆಲ್ಫಿ ಹುಚ್ಚು..?!

ಎನ್`ಸಿಸಿ ಕ್ಯಾಂಪ್`ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲಾದ ಘಟನೆ ಬೆಂಗಳೂರು ಹೊರವಲಯದ ಕನಕಪುರ ಬಳಿಯ ...

news

ಜಾರಿ ನಿರ್ದೇಶನಾಲಯದಿಂದ ಕಾರ್ತಿ ಚಿದಂಬರಂ ಅಕೌಂಟ್ಸ್,ಆಸ್ತಿ ಜಪ್ತಿ

ನವದೆಹಲಿ: ಆಸ್ತಿ ಮಾರಾಟಕ್ಕೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ...

Widgets Magazine