ಪೋಲಿಸಪ್ಪನಿಗೆ ಬಿತ್ತು ಮಹಿಳೆಯಿಂದ ಚಪ್ಪಲಿ ಏಟು.....! ವೈರಲ್ ಆಗಿದೆ ವೀಡಿಯೊ

ಗುರುಮೂರ್ತಿ 

ಹರಿಯಾಣಾ, ಮಂಗಳವಾರ, 6 ಫೆಬ್ರವರಿ 2018 (16:27 IST)

ಇತ್ತೀಚಿಗೆ ದೇಶದೆಲ್ಲೆಡೆ ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಹಾಡಹಗಲೇ ಕರ್ತವ್ಯ ನಿರತ ಪೊಲೀಸ್ ಒಬ್ಬರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದು, ಇದರಿಂದ ಕೋಪಗೊಂಡ ಮಹಿಳೆ ಪೊಲೀಸಪ್ಪನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಹರಿಯಾಣಾದಲ್ಲಿ ಬೆಳಕಿಗೆ ಬಂದಿದೆ. ಅದರ ಕುರಿತಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಪೊಲೀಸ್ ಇಲಾಖೆಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಇತ್ತೀಚಿಗೆ ಹರಿಯಾಣದಲ್ಲಿ ನೆಡೆದಿರುವ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಪೊಲೀಸರೊಬ್ಬರು ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿರುವುದು ಬಾರಿ ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲ, ಹರಿಯಾಣ ಪೊಲೀಸರು ಜನವರಿ ತಿಂಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸುತ್ತಿದ್ದು ಈ ಘಟನೆಯಿಂದ ಸ್ವತಃ ಹರಿಯಾಣ ಪೊಲೀಸರೇ ತಲೆ ತಗ್ಗಿಸುವ ಸ್ಥಿತಿ ಇದೀಗ ನಿರ್ಮಾಣವಾಗಿದೆ.
 
ಈ ಘಟನೆ ನಡೆದ ಸಂದರ್ಭದಲ್ಲಿ ಈ ಪೊಲೀಸ್ ಮಹಾಶಯ ಮಧ್ಯಪಾನ ಮಾಡಿದ್ದು ನಿಲ್ಲಲೂ ಆಗದಿರುವಂತ ಸ್ಥಿತಿಯಲ್ಲಿರುವುದು ಮತ್ತು ಆ ಸಮಯದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ವಿಫಲರಾಗಿರುವುದನ್ನು ನಾವು ಈ ವೀಡಿಯೊದಲ್ಲಿ ಕಾಣಬಹುದಾಗಿದೆ.
 
ಈ ಘಟನೆ ನಡೆದ ಸಂದರ್ಭದಲ್ಲಿ ಸಾಕಷ್ಟು ಜನರು ಸೇರಿದ್ದು ಇನ್ನು ಮುಂದೆ ಈ ತರಹದ ಅನುಚಿತ ವರ್ತನೆ ತೋರದಂತೆ ಪೊಲೀಸಪ್ಪನಿಗೆ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಘಟನೆಯು ಹರಿಯಾಣಾ ರಾಜ್ಯದ ಹಿಸಾರ್ ಜಿಲ್ಲೆಯ 4 ನೇ ವಲಯದಲ್ಲಿ ನೆಡೆದಿದ್ದು, ಈ ಘಟನೆ ವೇಳೆ ಅಲ್ಲಿದ್ದ ಸ್ಥಳೀಯರು ಈ ಎಲ್ಲಾ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರಿಸಿದ್ದಾರೆ ಎನ್ನಲಾಗಿದೆ.
 
ಇದೀಗ ಅದೇ ವೀಡಿಯೊ ಜಾಲತಾಣಗಳಲ್ಲಿ ವೈರಲ್ ‌ಆಗಿದ್ದು, ಸ್ಥಳೀಯ ವರದಿಗಳ ಪ್ರಕಾರ ಈ ವೀಡಿಯೊದಲ್ಲಿರುವುದು ಹರಿಯಾಣಾ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್ ಕಾನ್ಟೇಬಲ್ ಎಂದು ಹೇಳಲಾಗಿದೆ.
 
ಒಟ್ಟಿನಲ್ಲಿ ಸಮಾಜದ ಒಳಿತನ್ನು ಕಾಪಾಡಬೇಕಾದ ಪೋಲಿಸರೇ ಇಂತಹ ಹೀನ ಕೃತ್ಯಕ್ಕೆ ಇಳಿದಿರುವುದು ಬೇಲಿಯೇ ಎದ್ದು ಹೊಲವನ್ನು ಮೇಯ್ದ ಹಾಗಿದೆ ಎಂಬುದು ಮಾತ್ರ ಗಮನಾರ್ಹ.
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

24 ಶಸ್ತ್ರಚಿಕಿತ್ಸೆ ನೆಡೆಸಿದರೂ ತೀರದ 'ಟ್ರೀ ಮ್ಯಾನ್' ಸಮಸ್ಯೆ

ಬಾಂಗ್ಲಾದೇಶದ ಟ್ರೀ ಮ್ಯಾನ್ ಎಂದೇ ಕರೆಯಲಾಗುವ ರಿಕ್ಷಾ ಚಾಲಕ ಅಬುಲ್ ಬಜಂದಾರ್, ಸುಮಾರು 10 ವರ್ಷಗಳಿಂದ ...

news

ಸತ್ತ ಹೆಂಡತಿಯನ್ನು ಮತ್ತೆ ಬದುಕಿಸಲು ನಾಯಿಮರಿಗಳು, ಹಾವುಗಳನ್ನು ಕೊಂದು ತಿಂದ ಪತಿ

ತಮ್ಮ ಪ್ರೀತಿಪಾತ್ರರ ಅಗಲಿಕೆಯಿಂದ ಬೇಸತ್ತ ಜನರು ಹುಚ್ಚಾಟ ಮಾಡುವುದನ್ನು ನೀವು ಕೇಳಿರಬಹುದು. ಜನರು ತಮ್ಮ ...

news

ಮಸ್ಕತ್ ಭೇಟಿ ವೇಳೆ ದಾಖಲೆ ಮಾಡಲಿದ್ದಾರೆ ಪ್ರಧಾನಿ ಮೋದಿ!

ನವದೆಹಲಿ: ಫೆಬ್ರವರಿ 11 ರಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳ ಪ್ರವಾಸ ಮಾಡಲಿರುವ ಪ್ರಧಾನಿ ಮೋದಿ ಹೊಸ ...

news

ಕೇಂದ್ರ ಸಚಿವರ ಸ್ಥಾನಮಾನ ಇಳಿಕೆ- ಶತೃಜ್ಞ ಸಿನ್ಹಾ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಸಚಿವರ ಸ್ಥಾನಮಾನ ಕಡಿಮೆಯಾಗಿದೆ ...

Widgets Magazine