Widgets Magazine
Widgets Magazine

ಗುರು ಮಹೋತ್ಸವ ಸಮಾರಂಭ: ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಸಿಎಂ

ರಾಂಚಿ, ಭಾನುವಾರ, 9 ಜುಲೈ 2017 (16:10 IST)

Widgets Magazine

ಜೆಮ್‌ಶ್ಷೆಡ್‌ಪುರ: ಜಾರ್ಖಂಡ್‌ ಮುಖ್ಯಮಂತ್ರಿ ರಘುವರ್‌ ದಾಸ್‌ ಅವರ ಪಾದಗಳನ್ನು ಮಹಿಳೆಯರು ತೊಳೆದಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
 
ಜೆಮ್‌ಶ್ಷೆಡ್‌ಪುರದ ಬ್ರಹ್ಮ ಲೋಕ ಧಾಮದಲ್ಲಿ ನಡೆಯುತ್ತಿರುವ ‘ಗುರು ಮಹೋತ್ಸವ’ ಸಮಾರಂಭದಲ್ಲಿ ಇಬ್ಬರು ಮಹಿಳೆಯರು ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ತೊಳೆದಿದ್ದಾರೆ. ಈ ವೀಡಿಯೊ ಎಲ್ಲೆಡೆ ಹರಿದಾಡುತ್ತಿದ್ದು ಭಾರೀ ಸುದ್ದಿ ಮಾಡುತ್ತಿದೆ.
 
ಭದ್ರತಾ ಸಿಬ್ಬಂದಿಯೊಟ್ಟಿಗೆ ಬಂದ ರಘುವರ್‌ ದಾಸ್‌ ಅವರನ್ನು ದೊಡ್ಡ ತಟ್ಟೆಯೊಂದರಲ್ಲಿ ನಿಲ್ಲಿಸಿ ಹೂವಿನ ಎಸಳುಗಳಿರುವ ನೀರನ್ನು ಇಬ್ಬರು ಮಹಿಳೆಯರು ಬಿಂದಿಗೆಯಿಂದ ಅವರ  ಪಾದಕ್ಕೆ ಹಾಕಿ ತೊಳೆಯುತ್ತಾರೆ. ಬಳಿಕ, ಮಹಿಳೆಯರು ಮೇಲೆದ್ದು ಹಿಂದಕ್ಕೆ ಸರಿಯುತ್ತಿದ್ದಂತೆ ಜನರಿಗೆ ಕೈ ಮುಗಿಯುತ್ತಲೇ ರಘುವರ್‌ ದಾಸ್‌ ಮುಂದೆ ಹೋಗುವ ದೃಶ್ಯಗಳು ವಿಡಿಯೊದಲ್ಲಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೊಮ್ಮಗ ಪ್ರಜ್ವಲ್`ಗೆ ದೇವೇಗೌಡರು ಹೇಳಿದ ಬುದ್ಧಿಮಾತು

ಪ್ರಜ್ವಲ್ ರೇವಣ್ಣರನ್ನ ಕರೆಯಿಸಿ ಬುದ್ಧಿ ಹೇಳಿದ್ದೇನೆ. ಪ್ರಜ್ವಲ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ...

news

ವಿಶ್ವದ ಅತಿ ಕಿರಿಯ ವಯಸ್ಸಿನ ಬೋಯಿಂಗ್ 777 ಕಮಾಂಡರ್ ಆದ ಆ್ಯನಿ

ದೈತ್ಯ ಬೋಯಿಂಗ್ 777 ವಿಮಾನದ ಕಮಾಂಡರ್ ಆಗುವ ಮೂಲಕ ಭಾರತೀಯ ಮೂಲದ ಆ್ಯನಿ ದಿವ್ಯಾ ಅಂತಾರಾಷ್ಟ್ರೀಯ ...

news

ಕೋಮು ಗಲಭೆಗೆ ಪ್ರಚೋದನೆ ನೀಡುವ ಫೇಕ್ ಇಮೇಜ್ ಶೇರ್: ಬಿಜೆಪಿ ಬೆಂಬಲಿಗ ಅರೆಸ್ಟ್

ಪಶ್ಚಿಮ ಬಂಗಾಳದ ಬದುರಿಯಾ ಮತ್ತು ಬಸಿರ್ಹಾಟ್‌ನಲ್ಲಿ ಉಂಟಾಗಿರುವ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ...

news

ಚೀನಾಗೆ ಮತ್ತಷ್ಟು ಶಾಕ್ ಕೊಡಲು ಮುಂದಾದ ಭಾರತ

ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ದೊಕ್ಲಾಮ್ ವಿಚಾರವಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವ ...

Widgets Magazine Widgets Magazine Widgets Magazine