ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಶೇ. 12ರಷ್ಟು ಜಿಎಸ್`ಟಿ: ಮೋದಿ ವಿರುದ್ಧ ಸಿಡಿದೆದ್ದ ನಾರಿಯರು

ನವದೆಹಲಿ, ಸೋಮವಾರ, 3 ಜುಲೈ 2017 (11:27 IST)

ಹೆಣ್ಣುಮಕ್ಕಳು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಶೇ. 12ರಷ್ಟು ಜಿಎಸ್`ಟಿ ವಿಧಿಸಿರುವ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕುಂಕುಮ, ಬಳೆ ಸೇರಿದಂತೆ ಹಲವು ವಸ್ತುಗಳನ್ನ ಜಿಎಸ್`ಟಿಯಿಂದ ಹೊರಗಿಟ್ಟ ಮೋದಿ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಜಿಎಸ್`ಟಿ ಹೇರಿಕೆ ವಿರುದ್ಧ ಕ್ಯಾಂಪೇನ್ ಶುರುವಾಗಿದೆ.


ಟ್ವಿಟ್ಟರ್, ಫೇಸ್ಬುಕ್`ಗಳಲ್ಲಿ ಈ ಕುನರಿತಂತೆ ಕ್ಯಾಂಪೇನ್ ಶುರುವಾಗಿದ್ದು, ಪ್ರಧಾನಮಂತ್ರಿ  ನರೇಂದ್ರಮೊದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಮಹಿಳೆಯರು ಮೇರಾ ನೇರ ಪ್ರಶ್ನಿಸಿದ್ದಾರೆ. ಮುಟ್ಟಿನ ಸಂದರ್ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಬಗ್ಗೆ ಈಗಲೂ ಹಲವೆಡೆ ಅರಿವು ಮೂಡಬೇಕಿದೆ. ಕುಗ್ರಾಮಗಳ ಕೆಲವೆಡೆ ಬಟ್ಟೆಗಳನ್ನ ಬಳಸಿ ಸೋಂಕಿನಂತಹ ಸಮಸ್ಯೆಗಳಿಗೆ ಮಹಿಳೆಯರು ತುತ್ತಾದ ಉದಾಹರಣೆಗಳಿವೆ.ಇಂಥಾ ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಕೈಗೆಟುವ ರೀತಿ ಮಾಡಬೇಕಾದ್ದನ್ನ ಬಿಟ್ಟು, ಮೇಲೆ ತೆರಿಗೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಜಿಎಸ್`ಟಿ ಸಮಿತಿಯಲ್ಲಿ ಮಹಿಳೆಯರಿದ್ದಿದ್ದರೆ ಇದಕ್ಕೆ ಆಸ್ಪದವಿರುತ್ತಿರಲಿಲ್ಲ. ಮಹಿಳೆಯರಿಲ್ಲದೆ ಈ ನಿರ್ಧಾರ ಕೈಗೊಂಡ ಹಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆಗಸ್ಟ್ 5ರಂದು ಜಿಎಸ್`ಟಿ ಮಾರ್ಪಾಡು ಸಮಿತಿ ಸಭೆ ನಡೆಯಲಿದ್ದು, ಅಲ್ಲಿಯಾದರೂ ನ್ಯಾಪ್ ಕಿನ್ ಮೇಲೆ ಹೇರಿರುವ ತೆರಿಗೆ ಹಿಂಪಡೆಯಲಿ ಎಂಬ ಮಾತು ಕೇಳಿಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾರತದಲ್ಲಿ ಎಲ್ಲಿ ಬೇಕಾದರೂ ದಾಳಿ ಮಾಡಬಲ್ಲೆ ಎಂದ ನಿಷೇಧಿತ ಪಾಕ್ ಉಗ್ರ

ನವದೆಹಲಿ: ಭಾರತದಲ್ಲಿ ಹಿಂದೆಯೂ ದಾಳಿ ನಡೆಸಿದ್ದೇನೆ. ಮುಂದೆಯೂ ಎಲ್ಲಿ ಬೇಕಾದರೂ ದಾಳಿ ನಡೆಸುತ್ತೇನೆ ಎಂದು ...

news

ಪುಲ್ವಾಮದಲ್ಲಿ ಓರ್ವ ಉಗ್ರನ ಸದೆಬಡಿದ ಸೇನೆ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಾರತೀಯ ಸೇನಾ ಪಡೆ ಓರ್ವ ಉಗ್ರನನ್ನು ಹೊಡೆದುರುಳಿಸಿದೆ.

news

ಜುಲೈ 1 ರಂದು ಹುಟ್ಟಿದ ಮಗುವಿಗೆ ‘ಜಿಎಸ್ ಟಿ’ ಹೆಸರಿಟ್ಟ ತಾಯಿ!

ಜೈಪುರ: ಜುಲೈ 1 ರಿಂದ ದೇಶದಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಯಾಗಿದೆ. ಈ ಐತಿಹಾಸಿಕ ಕ್ಷಣವನ್ನು ...

news

ಪ್ರಧಾನಿ ಮೋದಿ ಮಾಡಲಿದ್ದಾರೆ ವಿಶಿಷ್ಟ ದಾಖಲೆ

ನವದೆಹಲಿ: ಪ್ರಧಾನಿ ಮೋದಿ ಮಂಗಳವಾರ ಇಸ್ರೇಲ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಮೂಲಕ ಅವರು ಹೊಸದೊಂದು ...

Widgets Magazine
Widgets Magazine