ದೇಶದ್ರೋಹಿ ನಮ್ಮ ಮಗನಲ್ಲ : ಶಂಕಿತ ಉಗ್ರ ಸೈಫುಲ್ಲಾ ಶವ ಸ್ವೀಕರಿಸಲೊಪ್ಪದ ತಂದೆ

ಲಖನೌ, ಬುಧವಾರ, 8 ಮಾರ್ಚ್ 2017 (17:10 IST)

ಲಖನೌನ ಠಾಕೂರ್‌ಗಂಜ್ ಪ್ರದೇಶದಲ್ಲಿ ಎಟಿಎಸ್ (ಭಯೋತ್ಪಾದಕ ನಿಗ್ರಹ ಪಡೆ) ಗುಂಡೇಟಿಗೆ ಹತನಾದ ಶಂಕಿತ ಐಸಿಸ್ ಉಗ್ರ ಸೈಫುಲ್ಲಾ ಮೃತದೇಹವನ್ನು ಸ್ವೀಕರಿಸಲು ಕಾನ್ಪುರದ ನಿವಾಸಿಯಾಗಿರುವ ಆತನ ತಂದೆ ಸರ್ತಾಜ್ ನಿರಾಕರಿಸಿದ್ದಾರೆ.
ದೇಶದ್ರೋಹಿ ನಮ್ಮ ಮಗನಾಗಿರಲು ಸಾಧ್ಯವಿಲ್ಲ. ನಾವು ಭಾರತೀಯರು. ಇಲ್ಲಿಯೇ ಹುಟ್ಟಿ ಬೆಳೆದವರು. ನಮ್ಮ ಪೂರ್ವಜರು ಕೂಡ ಭಾರತೀಯರು. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವ ನಮ್ಮ ಮಗನಾಗಿರಲು ಸಾಧ್ಯವಿಲ್ಲ.  ನಾವು ಈ ಮೃತದೇಹವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸರ್ತಾಜ್ ಹೇಳಿದ್ದಾರೆ. ಹೀಗಾಗಿ ಆತನ ಮೃತದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿರಸಲಾಗಿದೆ. 
 
ತಮ್ಮ ಐಸಿಸ್ ಸೇರಿರುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
 
20-25 ವಯಸ್ಸಿನ ಆಸುಪಾಸಿನಲ್ಲಿದ್ದ ಸೈಫುಲ್ಲಾನ ಇಬ್ಬರು ಸೋದರ ಸಂಬಂಧಿಗಳನ್ನು ಸಹ ನಿನ್ನೆ ಕಾನ್ಪುರದಲ್ಲಿ ಬಂಧಿಸಲಾಗಿದೆ.
 
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ 9 ಮಂದಿ ಭಯೋತ್ಪಾದಕರ ಪೈಕಿ ಸೈಫುಲ್ಲಾ ಸಹ ಒಬ್ಬನಾಗಿದ್ದ. ಲಖನೌ ಹೊರವಲಯದ ಠಾಕೂರ್ ಗಂಜ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಸೈಫುಲ್ಲಾನನ್ನು  ಹೊಡೆದುರುಳಿಸುವಲ್ಲಿ ಭಯೋತ್ಪಾದನಾ ನಿಗ್ರಹ ದಳ ಯಶಸ್ವಿಯಾಗಿತ್ತು. 
 
ಹತ್ಯೆ ಬಳಿಕ ಆತ ಅಡಗಿದ್ದ ಮನೆಯ ಕದವನ್ನು ತೆರೆಯಲಾಗಿ ಆತನ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿರುವುದು ಪತ್ತೆಯಾಗಿತ್ತು.
 
ಸ್ಥಳದಿಂದ ಎಂಟು ಪಿಸ್ತೂಲ್, ಅಪಾರ ಸುತ್ತು ಗುಂಡು, ಸ್ಫೋಟಕ ವಸ್ತುಗಳು, ಚಿನ್ನ, ನಗದು, ಪಾಸ್ಪೋರ್ಟ್, ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
 
ಆತ ಐಸಿಸ್ ಉಗ್ರ ಎಂಬುದನ್ನು ಎಟಿಎಸ್ ಐಜಿ ಅಸೀಮ್ ಅರುಣ್ ದೃಢಪಡಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಜ್ಮೇರ್ ಸ್ಫೋಟ: ಅಸೀಮಾನಂದ್, ಇಂದ್ರೇಶ್ ಕುಮಾರ್ ಖುಲಾಸೆ

ಜೈಪುರ್: 2007ರಲ್ಲಿ ಅಜ್ಮೆರ್ ಷರೀಫ್ ದರ್ಗಾ ಬಳಿ ನಡೆದ ಬಾಂಬ್ ಸ್ಫೋಟ ಘಟನೆ ಕುರಿತಂತೆ ಕೋರ್ಟ್ ಮೂವರನ್ನು ...

news

ತುಮಕೂರಿನ ಜೈಲಿಗೆ ವಿ.ಕೆ.ಶಶಿಕಲಾ ಸ್ಥಳಾಂತರ...?

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಯಾಗಿ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾದ ಎಐಎಡಿಎಂಕೆ ...

news

ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ

ಅನಾರೋಗ್ಯಕ್ಕೊಳಗಾಗಿ ನಿನ್ನೆ ತಡರಾತ್ರಿ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ವರನಟ ಡಾ.ರಾಜ್ ಕುಮಾರ್ ಪತ್ನಿ, ...

news

ಮಹಿಳಾಶಕ್ತಿಗೆ ಜೈ ಎನ್ನಿ (ವಿಡಿಯೋ)

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ. ಮಹಿಳೆಯರ ಉತ್ಥಾನ ಮತ್ತು ಸಬಲೀಕರಣ ಸಮಾಜದ ಬೆಳವಣಿಗೆಗೆ ...

Widgets Magazine
Widgets Magazine