ಸೆ.21ರಿಂದ ವಿಶ್ವವಿಖ್ಯಾತ ಮೈಸೂರು ದಸರಾ: 30ರಂದು ಜಂಬೂ ಸವಾರಿ

ಬೆಂಗಳೂರು, ಮಂಗಳವಾರ, 25 ಜುಲೈ 2017 (07:40 IST)

ಬೆಂಗಳೂರು:ಸೆಪ್ಟೆಂಬರ್ 21 ರಿಂದ 30ರವರೆಗೆ ಮೈಸೂರು ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಒಟ್ಟು 15 ಕೋಟಿ ಅನುದಾನ ನೀಡಲು ನಿರ್ಧರಿಸಿದ್ದು, ಸೆಪ್ಟೆಂಬರ್ 21ರಂದು ಬೆಳಗ್ಗೆ 9.15ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.
 
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಸರಳ ಹಾಗೂ ವಿಜೃಂಭಣೆಯಿಂದ ದಸರಾ ಆಚರಣೆಗೆ ತೀರ್ಮಾನಿಸಲಾಗಿದೆ. 
 
ಸೆ.21ರಂದು ಬೆಳಗ್ಗೆ ದಸರಾ ಉದ್ಘಾಟನೆಯಾಗಲಿದ್ದು,  ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೂ ಅಂದೇ ಚಾಲನೆ ನೀಡಲಾಗುವುದು. ಅಂತೆಯೇ ನವರಾತ್ರಿಯು ಸೆ.29ರಂದು ಅಂತ್ಯಗೊಳ್ಳುತ್ತದೆ. ವಿಜಯ ದಶಮಿ ಅಂಗವಾಗಿ  ಸೆ.30ರಂದು ಮಧ್ಯಾಹ್ನ 1.15 ಕ್ಕೆ ನಂದಿ ಪೂಜೆ, 3.15ಕ್ಕೆ  ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
 
ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಹಾಗೂ ಉಪಾಧ್ಯಕ್ಷರನ್ನಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು   ನೇಮಕ ಮಾಡಲಾಗಿದೆ. ಇವರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು  ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಸಿಎಂ ಇದೇ ವೇಳೆ ತಿಳಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

14 ರ ಬಾಲಕನ ಜತೆ ಮಂಚ ಏರಿದ ಯುವತಿಯ ಕತೆ ಏನಾಯ್ತು ಗೊತ್ತಾ?

ನ್ಯೂಯಾರ್ಕ್: ಕಾಮಾತುರರಿಗೆ ಭಯ, ನಾಚಿಕೆ ಯಾವುದೂ ಇಲ್ಲವಂತೆ. ಅಮೆರಿಕಾದ ನಾರ್ತ್ ಕೆರೋಲಿನಾದಲ್ಲಿ 20 ರ ...

news

ಗುಜರಾತ್ : ವರುಣನ ಅಬ್ಬರಕ್ಕೆ 67 ಮಂದಿ ಸಾವು, 7 ಸಾವಿರ ನಿರಾಶ್ರಿತರು

ಬನಸ್ಕಂದಾ: ಗುಜರಾತ್ ರಾಜ್ಯದ ವಲ್ಸದ್ ಜಿಲ್ಲೆಯ ಬನಸ್ಕಂದ, ಸಬರಕಂದ್ ಪ್ರದೇಶಗಳಲ್ಲಿ ಭಾರಿ ...

news

ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಿಜೆಪಿ ಮುಖಂಡ

ಬೆಂಗಳೂರು: ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನದ ಘನತೆ ಗೌರವ ಮರೆತು ಮನೆಹಾಳ ಎಂದು ...

news

ಅವನ್ ಮನೆ ಹಾಳಾಗ, ಲೆಕ್ಕ ಬರೋಲ್ವಾ: ಸಿಎಂ ಕಿಡಿ

ಬೆಂಗಳೂರು: ಅವನ್ಯಾವನೋ ಒಬ್ಬ ಆರೋಪ ಮಾಡ್ತಿದ್ದಾನೆ. ಅವನ್ ಮನೆ ಹಾಳಾಗ ಅವನಿಗೆ ಲೆಕ್ಕ ಬರೋಲ್ವಾ ಎಂದು ಸಿಎಂ ...

Widgets Magazine