41 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ಸಿಎಂ ಆದಿತ್ಯನಾಥ್

ಲಕ್ನೋ, ಮಂಗಳವಾರ, 18 ಏಪ್ರಿಲ್ 2017 (20:51 IST)

Widgets Magazine

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳಂಕಿತ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಲಕ್ನೋ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸತ್ಯೇಂದ್ರ ಸಿಂಗ್ ಸೇರಿದಂತೆ 41 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದ್ದಾರೆ.
 
ಕಳೆದ ತಿಂಗಳು ಅಧಿಕಾರಕ್ಕೆ ಬಂದ ಆದಿತ್ಯನಾಥ್ ಸರಕಾರ, ಎರಡನೇ ಬಾರಿಗೆ ಭಾರಿ ವರ್ಗಾವಣೆಗೆ ಮುಂದಾಗಿದೆ. 20 ಐಎಎಸ್ ಅಧಿಕಾರಿಗಳು ಮತ್ತು ಇತರ ಎಂಟು ಮಂದಿ ಅಧಿಕಾರಿಗಳನ್ನು ವೇಟಿಂಗ್‌ಲಿಸ್ಟ್‌‌ನಲ್ಲಿಟ್ಟಿದ್ದಾರೆ.
 
ಮಾಜಿ ಸಿಎಂ ಅಖಿಲೇಶ್ ಯಾದವ್ ಸರಕಾರದಲ್ಲಿ ಬೃಹತ್ ನಾಲ್ಕು ಯೋಜನೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಆರಂಭಿಸಿರುವ ಸರಕಾರ, ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ.
 
ಯೋಜನೆಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಮೂರು ದಿನಗಳೊಳಗಾಗಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಲಕ್ನೋ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಿಗೆ, ನಗರಾಭಿವೃದ್ಧಿ ಕಾರ್ಯಾಲಯದ ವಿಶೇಷ ಕಾರ್ಯದರ್ಶಿ ಆರ್‌.ಜೆ.ಚೌಧರಿ ಆದೇಶ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇರಾಕಿ ಸೇನಾಪಡೆಗಳಿಂದ 60 ಐಸಿಸ್ ಉಗ್ರರ ನರಮೇಧ

ಬಾಗ್ದಾದ್: ಮೊಸುಲ್‌‌ನಲ್ಲಿ ಇರಾಕಿ ಸೇನಾಪಡೆಗಳು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ 60 ಮಂದಿ ಐಎಸ್‌ಐಎಸ್ ...

news

ರಾಷ್ಟ್ರಪತಿ, ಕೇಂದ್ರ ಸಚಿವರು ಹಿಂದಿ ಭಾಷೆಯಲ್ಲಿಯೇ ಭಾಷಣ ಮಾಡಬೇಕಂತೆ

ನವದೆಹಲಿ: ಸಂಸದೀಯ ಸಮಿತಿಯ ಶಿಫಾರಸ್ಸುಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ವೀಕರಿಸಿ ...

news

ವಿಜಯ್ ಮಲ್ಯ ಆಯ್ತು.. ಮುಂದಿನ ಸರದಿ ಲಲಿತ್ ಮೋದಿಯಂತೆ!

ನವದೆಹಲಿ: ವಿದೇಶದಲ್ಲಿ ವಾಸವಿರುವ ವಿಜಯ್ ಮಲ್ಯ ಬಂಧನವಾಗಿ ಬಿಡುಗಡೆಯೂ ಆದರು. ಮುಂದಿನ ಸರದಿ ಲಲಿತ್ ...

news

ಶಶಿಕಲಾ ಹೊರದಬ್ಬದೆ ಎಐಎಡಿಎಂಕೆಗೆ ಬರಲ್ಲ ಎಂದ ಪನೀರ್ ಸೆಲ್ವಂ

ಚೆನ್ನೈ: ಶಶಿಕಲಾ ನಟರಾಜನ್ ಮತ್ತು ಅವರ ಕುಟುಂಬದವರು ಪಕ್ಷ ಬಿಟ್ಟು ತೆರಳುವವರೆಗೆ ತಮ್ಮ ಬಣ ಎಐಎಡಿಎಂಕೆ ಜತೆ ...