ನಿಮ್ಮ ಕೈಯಲ್ಲಿ ಕಾನೂನು ತೆಗೆದುಕೊಳ್ಳಬೇಡಿ:ಗೋವು ರಕ್ಷಕರಿಗೆ ಯೋಗಿ ಆದಿತ್ಯ.ನಾಥ್

ಮೀರತ್, ಮಂಗಳವಾರ, 9 ಮೇ 2017 (20:28 IST)

Widgets Magazine

ಗೋವು ರಕ್ಷಕರು ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ. ಇಂತಹ ಅಪರಾಧಗಳನ್ನು ತಡೆಯಲು ಕಾನೂನಿನ ಸಹಾಯ ಪಡೆಯಿರಿ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋವು ರಕ್ಷಕರಿಗೆ ಕರೆ ನೀಡಿದ್ದಾರೆ. 
 
ಗೋವು ರಕ್ಷಣೆ ಕುರಿತಂತೆ ಸಮಸ್ಯೆಗಳು ಎದುರಾದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
 
ನಿಮ್ಮ ಸುತ್ತಮುತ್ತಲು ಕಾನೂನುಬಾಹಿರ ಕೃತ್ಯಗಳು ನಡೆದಲ್ಲಿ ಪೊಲೀಸರಿಗೆ ತಿಳಿಸಿ. ಅವರು ಕಾರ್ಯಾಚರಣೆ ನಡೆಸಲಿ. ನೀವು ಕಾನೂನು ಕೈಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ರಾಜ್ಯದಲ್ಲಿ ಕಸಾಯಿಖಾನೆಗಳಿದ್ದಲ್ಲಿ ಅವುಗಳನ್ನು ಮುಚ್ಚುವುದು ಪೊಲೀಸರ ಕರ್ತವ್ಯವಾಗಿದೆ ಎಂದರು. 
 
ಯುವತಿಯರ ಸುರಕ್ಷತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಒಂದು ವೇಳೆ ಸಮಸ್ಯೆಗಳು ಎದುರಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
 
ಅಳ್ವಾರ್ ಜಿಲ್ಲೆಯಲ್ಲಿ ಗೋವುಗಳನ್ನು ಕಸಾಯಿ ಖಾನೆಗೆ ರವಾನಿಸಲಾಗುತ್ತಿದೆ ಎಂದು ಭಾವಿಸಿ ಗೋವು ರಕ್ಷಕರು ಮುಸ್ಲಿಂ ಸಮುದಾಯದ ಪೆಹಲು ಖಾನ್ ಎಂಬಾತನ ಮೇಲೆ ಹಲ್ಲೆ ಮಾಡಿ ಹತ್ಯೆಗೈಯಲಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪುತ್ರ ಡಾ. ಯತೀಂದ್ರ ವಿರುದ್ಧ ಆಧಾರ ರಹಿತವಾದ ಸುಳ್ಳು ದೂರು: ಸಿಎಂ

ಮೈಸೂರು: ಪುತ್ರ ಡಾ.ಯತೀಂದ್ರ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ಸಲ್ಲಿಸಲಾದ ದೂರು ಆಧಾರರಹಿತವಾಗಿದೆ ...

news

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ: ಸತೀಶ್ ಜಾರಕಿಹೊಳಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ ಎನ್ನುವ ವರದಿಗಳು ಸತ್ಯಕ್ಕೆ ದೂರ ಕಪೋಲಕಲ್ಪಿತವಾಗಿವೆ ...

news

ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌‍ನಿಂದ ರಿಲೀಫ್

ಬೆಂಗಳೂರು: ಅಕ್ರಮ ಗಣಿಗಾರಿಕೆ ಕೇಸ್ ಎದುರಿಸುತ್ತಿರುವ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ರಿಲೀಫ್ ...

news

ಮಾಜಿ ಸಂಸದೆ, ನಟಿ ರಮ್ಯಾಗೆ ಎಐಸಿಸಿಯಲ್ಲಿ ಹೊಸ ಹುದ್ದೆ

ಬೆಂಗಳೂರು: ಮಾಜಿ ಸಂಸದೆ ನಟಿ ರಮ್ಯಾಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ ಎಐಸಿಸಿಯಲ್ಲಿ ಹೊಸ ಹುದ್ದೆ ನೀಡಿ ...

Widgets Magazine Widgets Magazine