ಯೋಗಿ ಆದಿತ್ಯನಾಥ್ ಉತ್ತರಪ್ರದೇಶ ಸಿಎಂ

ಲಖನೌ, ಶನಿವಾರ, 18 ಮಾರ್ಚ್ 2017 (22:29 IST)

Widgets Magazine

ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆಗಳ ಸುದ್ದಿಯಲ್ಲಿರುತ್ತಿದ್ದ ಗೋರಖ್ ಪುರದ ಸಂಸದ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶದ ಸಿಎಂ ಆಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ನಡೆದ ಉತ್ತರಪ್ರದೇಶದ ಬಿಜೆಪಿ ಶಾಸಕಾಂಗ ಸಭೆ ಆದಿತ್ಯಾನಾಥ್ ಅವರನ್ನ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ.


ಸಿಎಂಗಾದಿ ರೇಸ್`ನಲ್ಲಿದ್ದ ಮನೋಜ್ ಸಿನ್ಹಾ, ಕೇಶವ್ ಪ್ರಸಾದ್ ಮೌರ್ಯ, ರಾಜನಾಥ್ ಸಿಂಗ್ ಅವರನ್ನ ಬದಿಗೊತ್ತಿ ಬಿಜೆಪಿ ಹೈಕಮಾಂಡ್ ಆದಿತ್ಯನಾಥ್`ಗೆ ಮಣೆ ಹಾಕಿದೆ.

1972ರಲ್ಲಿ ಉತ್ತರಾಖಂಡ್`ನ ಗರ್ಹ್ವಾಲ್`ನಲ್ಲಿ ಕ್ಷತ್ರೀಯ ಕುಟುಂಬದಲ್ಲಿ ಜನಿಸಿದ 44 ವರ್ಷದ ಆದಿತ್ಯಾನಾಥ್, 1994ರವರೆಗೆ ಗೋರಖ್ ನಾಥ್ ದೇಗುಲದ ಅರ್ಚಕರಾಗಿದ್ದರು. 26ನೇ ವಯಸ್ಸಿಗೆ ಕ್ಷೇತ್ರದಿಂದ ಸ್ಪರ್ಧಿಸಿ ಅಂದಿನಿಂದ 6 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

2004ರಲ್ಲಿ ಲೋಕಸಭೆಯಲ್ಲಿ ಗೋಹತ್ಯೆ ನಿಷೇಧಕ್ಕೆ ಒತ್ತಾಯಿಸಿದ್ದರು. ಕಟ್ಟಾ ಹಿಂದೂವಾದಿಯಾಗಿರುವ ಆದಿತ್ಯಾನಾಥ್ ಹಲವು ವಿವಾದಿತ ಹೇಳಿಕೆಗಲ ಮೂಲಕ ಸುದ್ದಿಯಾಗಿದ್ದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉತ್ತರಾಖಂಡ್`ನ ಸಿಎಂ ಆಗಿ ತ್ರಿವೇಂದ್ರ ಸಿಂಗ್ ರಾವತ್ ಪದಗ್ರಹಣ

ಉತ್ತರಾಖಂಡ್`ನ ಮುಖ್ಯಮಂತ್ರಿಯಾಗಿ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ...

news

100 ರೂ. ಲಂಚ ಕೊಟ್ಟರೆ ಮಾತ್ರ ಸಿಗುತ್ತೆ ವ್ಹೀಲ್ ಚೇರ್

ಆಸ್ಪತ್ರೆಯ ಸಿಬ್ಬಂದಿಯ ಲಂಚ ದಾಹಕ್ಕೆ ಮಿತಿಯೇ ಇಲ್ಲದಂತಾಗಿದೆ. 100 ರೂ. ಲಂಚ ಕೊಡಲಿಲ್ಲವೆಂಬ ಕಾರಣಕ್ಕೆ ...

news

ಮರ್ಮಾಂಗ, ನಾಲಿಗೆಗೆ ಕತ್ತರಿ ಹಾಕಿದ ದುಷ್ಕರ್ಮಿಗಳು..!

ವ್ಯಕ್ತಿಯ ಮರ್ಮಾಂಗಕ್ಕೆ ದುಷ್ಕರ್ಮಿಗಳು ಕತ್ತರಿ ಹಾಕಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್`ನ ...

news

ಸರಣಿ ಅಪಘಾತ: 11 ಜನರ ದುರ್ಮರಣ

ಮೊಳಕಾಲ್ಮೂರು ತಾಲೂಕಿನ ರಾಮಾಪುರ ಸಂಭವಿಸಿದ ಸರಣಿ ಅಪಘಾತದಲ್ಲಿ 13 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ...

Widgets Magazine