ಅಯೋಧ್ಯೆಯಲ್ಲಿ ಶ‍್ರೀರಾಮ ಮೂರ್ತಿ ಸ್ಥಾಪನೆ…!

ಉತ್ತರ ಪ್ರದೇಶ, ಮಂಗಳವಾರ, 10 ಅಕ್ಟೋಬರ್ 2017 (12:30 IST)

ಉತ್ತರ ಪ್ರದೇಶ: ಅಯೋಧ್ಯೆಯ ಸರಯೂ ನದಿ ತೀರದಲ್ಲಿ ನೂರು ಮೀಟರ್‌ ಎತ್ತರದ ದೇವರಮೂರ್ತಿ ಸ್ಥಾಪಿಸಲು  ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.


ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧಾರ ಮಾಡಿರುವ ಬಗ್ಗೆ ರಾಜಭವನವು ಹೊರಡಿಸಿರುವ ಪ್ರಕಟಣೆಯನ್ನು ವರದಿಗಳು ಉಲ್ಲೇಖಿಸಿವೆ. ಯುಪಿ ರಾಜ್ಯಪಾಲ ರಾಮ ನಾಯಕ್‌ ಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಸ್ತಾವನೆ ಇಟ್ಟಿದೆ. ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.

ಯುಪಿ ಪ್ರವಾಸೋದ್ಯಮ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಟೂರಿಸಂ ಬುಕ್‌ಲೆಟ್‌ನಲ್ಲಿ ಆಗ್ರಾದ ತಾಜ್‌ ಮಹಲ್ ನ್ನು ಕೈಬಿಟ್ಟು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈಗ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸುವ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು, ಹೊಸ ವಿವಾದ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಮಾಧ್ಯಮ ವರದಿ ಮಾಡಿವೆ.ಇದರಲ್ಲಿ ಇನ್ನಷ್ಟು ಓದಿ :  
ತಾಜ್ ಮಹಲ್ ಅಯೋಧ್ಯೆ ಶ್ರೀರಾಮ ಯೋಗಿ ಆದಿತ್ಯನಾಥ Ayodhya Yogi Adithyanath Taj Mahal Lord Rama

ಸುದ್ದಿಗಳು

news

ಹೈಕಮಾಂಡ್ ಪ್ರಿಪರೇಟರಿ ಎಕ್ಸಾಂ… `ಕೈ’ ಮುಖಂಡರ ಫೈನಲ್ ಪರೀಕ್ಷೆ ಕಿತ್ತಾಟ

ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ...

news

ಮತ್ತೆ ಪ್ರಧಾನಿ ಮೋದಿ ವಿರುದ್ಧ ಗುಜರಾತ್ ನಲ್ಲಿ ಗುಡುಗಿದ ರಾಹುಲ್ ಗಾಂಧಿ

ನವದೆಹಲಿ: ಗುಜರಾತ್ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಮೋದಿ ...

news

ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಇಂದು ಅಮಿತ್ ಶಾ ಸವಾಲು

ಅಮೇಠಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ರಾಹುಲ್ ಗಾಂಧಿ ಸಂಸದೀಯ ಕ್ಷೇತ್ರ ಅಮೇಠಿಯಲ್ಲಿ ಬಲ ...

news

ಯಾರೇ ಏನೇ ಹೇಳಿದರೂ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದ ನಟ ಪ್ರಕಾಶ್ ರೈ

ಬೆಂಗಳೂರು: ಯಾರು ಏನೇ ಹೇಳಲಿ, ಏನೇ ಆಗಲಿ ನಾನು ಪ್ರಶಸ್ತಿ ಸ್ವೀಕರಿಸೋಕೆ ಹೋಗೇ ಹೋಗ್ತೀನಿ ಎಂದು ನಟ ...

Widgets Magazine