ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ವಿಜಯ್ ಅಭಿಮಾನಿ ಅರೆಸ್ಟ್

ಮದುರೈ, ಗುರುವಾರ, 2 ನವೆಂಬರ್ 2017 (09:51 IST)

ಮದುರೈ: ಪ್ರಧಾನಿ ಮೋದಿ ವಿರುದ್ಧ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ ತಮಿಳು ನಟ ವಿಜಯ್ ಅಭಿಮಾನಿಯೊಬ್ಬನನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ.


 
ತಾನು ತಮಿಳು ನಟ ವಿಜಯ್ ಅಭಿಮಾನಿ ಎಂದಿರುವ ಯುವಕ ಸಚಿನ್ ತಿರು ಎನ್ನುವ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿದ್ದಾನೆ. ವಿಜಯ್ ಮರ್ಸೆಲ್ ಚಿತ್ರದಲ್ಲಿ ಜಿಎಸ್ ಟಿ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗಿದೆ ಎಂದು ಸಿನಿಮಾ ಬಗ್ಗೆ ಇತ್ತೀಚೆಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
 
ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹವಾಗಿ ಬರೆದುಕೊಂಡಿದ್ದ ಈತ ಪ್ರಧಾನಿ ತಕ್ಕ ಪಾಠ ಕಲಿಸುವುದಾಗಿ ಬೆದರಿಕೆಯೂ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಮಧುರೈ ಬಿಜೆಪಿ ಘಟಕ ಪೊಲೀಸರಿಗೆ ದೂರು ನೀಡಿತ್ತು. ಅದರಂತೆ ಯುವಕನನ್ನು ಬಂಧಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿಯನ್ನು ಟೀಕಿಸುವಾಗ ಎಡವಟ್ಟು ಮಾಡಿದ ನಟಿ, ಮಾಜಿ ಸಂಸದೆ ರಮ್ಯಾ

ಬೆಂಗಳೂರು: ಪ್ರಧಾನಿ ಮೋದಿ ಮೇಲೆ ಕಿಡಿ ಕಾರುವಾಗ ಎಡವಟ್ಟು ಮಾಡಿಕೊಂಡ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ...

news

ನಾಳೆ ಖಾಸಗಿ ವೈದ್ಯ ಕಾಲೇಜು, ಆಸ್ಪತ್ರೆ ಇಲ್ಲ!

ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವ ಸರ್ಕಾರ ...

news

ರಾಹುಲ್ ಜತೆ ಸೆಲ್ಫೀ ತೆಗೆದುಕೊಳ್ಳಲು ಯುವತಿ ಮಾಡಿದ್ದೇನು ನೋಡಿ..

ಗುಜರಾತ್: ಯುವಕರ ಕೈಗೆ ಮೊಬೈಲ್ ಸಿಗುತ್ತಿದ್ದಂತೆ, ಸೆಲ್ಫೀ ಗೀಳು ಸಹ ಹೆಚ್ಚುತ್ತಿದೆ. ಹೀಗಾಗಿ ರಾಜಕೀಯ, ...

news

ರಾಜ್ಯೋತ್ಸವ ಸಂಭ್ರಮದಲ್ಲಿ ಯುವಕನಿಗೆ ಚಾಕುವಿನಿಂದ ಇರಿದ ಕಿಡಿಗೇಡಿಗಳು

ಬೆಳಗಾವಿ: ರಾಜ್ಯದೆಲ್ಲೆಡೆ 62ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಗೆ ಆಚರಿಸಲಾಯಿತು. ಆದರೆ ಕುಂದಾನಗರಿ ...

Widgets Magazine
Widgets Magazine