ದೀಪಾವಳಿ ಶಾಪಿಂಗ್ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ಕೊಲೆ

ನವದೆಹಲಿ, ಶುಕ್ರವಾರ, 9 ನವೆಂಬರ್ 2018 (09:49 IST)


ನವದೆಹಲಿ: ದೀಪಾವಳಿ ಹಬ್ಬಕ್ಕೆ ತನ್ನ ಸ್ಕೂಟರ್ ನಲ್ಲಿ ಶಾಪಿಂಗ್ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ನೆರೆ ಮನೆಯವನನ್ನೇ ಯುವಕನೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
 
ಯೋಗೇಶ್ ಎಂಬಾತ ಕೊಲೆ ಆರೋಪಿ. ಆತ ತನ್ನ ನೆರೆ ಮನೆಯ ಸ್ನೇಹಿತ 19 ವರ್ಷದ ದೀಪಕ್ ಎಂಬಾತನನ್ನು ಕೊಲೆ ಮಾಡಿದ್ದಾನೆ.
 
ದೀಪಕ್ ಬಳಿ ಯೋಗೇಶ್  ಸ್ಕೂಟರ್ ನಲ್ಲಿ ಬಟ್ಟೆ ಶಾಪಿಂಗ್ ಕರೆದೊಯ್ಯಲು ಹೇಳಿದಾಗ ಆತ ನಿರಾಕರಿಸಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಈ ಸಂದರ್ಭದಲ್ಲಿ ಇಬ್ಬರೂ ಯುವಕರ ಪೋಷಕರು ನಡುವೆ ಬಂದು ಜಗಳ ಬಿಡಿಸಿದ್ದಾರೆ. ಅಲ್ಲದೆ ಯೋಗೇಶ್ ಪೋಷಕರು ಆತನಿಗೆ ಸಾರ್ವಜನಿಕವಾಗಿ ಹೊಡೆದಿದ್ದಾರೆ.
 
ಇದರಿಂದ ಅವಮಾನಿತನಾಗಿದ್ದ ಯೋಗೇಶ್ ದೀಪಕ್ ನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಯೋಗೇಶ್ ನನ್ನು ಬಂಧಿಸಿದ್ದು, ಕೊಲೆಗೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜನಾರ್ಧನ ರೆಡ್ಡಿಯ 57 ಕೆಜಿ ಚಿನ್ನದ ರಹಸ್ಯ ಪತ್ತೆ ಮಾಡಲು ಪೊಲೀಸರ ಹರಸಾಹಸ

ಬಳ್ಳಾರಿ: ಆಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಮಾಡಲು 57 ಕೆಜಿ ಚಿನ್ನ ಪಡೆದಿದ್ದಾರೆಂಬ ಆರೋಪ ...

news

ಮೂರು ದಿನ ಸಿಎಂ ಕುಮಾರಸ್ವಾಮಿಗೆ ರೆಸ್ಟ್: ಟಿಪ್ಪು ಜಯಂತಿಗೆ ಗೈರು

ಬೆಂಗಳೂರು: ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿ ಬಳಲಿದ ಸಿಎಂ ಕುಮಾರಸ್ವಾಮಿ ವೈದ್ಯರ ಸಲಹೆ ಮೇರೆಗೆ ...

news

ಮಾಟ ಮಂತ್ರ ಮಾಡಿದ್ದೀಯಾ ಎಂದು ಅಜ್ಜಿಗೆ ಮೊಮ್ಮಗ ಮಾಡಿದ್ದೇನು ಗೊತ್ತಾ?

ಮುಂಬೈ: ಅಜ್ಜಿ ತನಗೆ ಮಾಟ ಮಂತ್ರ ಮಾಡಿದ್ದಾಳೆಂದು ಅನುಮಾನಿಸಿ ಮೊಮ್ಮಗನೊಬ್ಬ ಚಾಕುವಿನಿಂದ ಇರಿದು ಹಲ್ಲೆ ...

news

ಬಿಜೆಪಿ ಮುತ್ಸುದ್ದಿ ಎಲ್ ಕೆ ಅಡ್ವಾಣಿಗೆ ಶುಭ ಕೋರಿದ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯ ಬಗ್ಗೆ ಸದಾ ಕೆಂಡ ಕಾರುವ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ ಕೆ ...

Widgets Magazine