ಗಾಳಿಪಟ ಹಾರಿಸುವುದನ್ನು ವಿರೋಧಿಸಿದ್ದಕ್ಕೆ ಪೋಷಕರನ್ನೇ ಕೊಂದ ಯುವಕ!

ನವದೆಹಲಿ, ಗುರುವಾರ, 11 ಅಕ್ಟೋಬರ್ 2018 (11:44 IST)

ನವದೆಹಲಿ: ಓದದೇ ಸದಾ ಹಾರಿಸುತ್ತಾ ಕಾಲ ಕಳೆಯುತ್ತೀಯಾ ಎಂದು ಬೈದಿದ್ದಕ್ಕೆ ಪೋಷಕರನ್ನೇ 19 ವರ್ಷದ ಯುವಕನೊಬ್ಬ ಕೊಲೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ.
 
ಆಗಸ್ಟ್ 15 ರಂದು ಓದು ಎಂದರೂ ಕೇಳದೇ ಗಾಳಿಪಟ ಹಾರಿಸುತ್ತಿದ್ದ ಮಗನನ್ನು ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಬೇಸತ್ತಿದ್ದ ಆತ ತನ್ನ ಅಪ್ಪ –ಅಮ್ಮ ಜತೆಗೆ ಸಹೋದರಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆಗೈದು ಅಮಾಯಕನಂತೆ ನಟಿಸಿದ್ದ.
 
ಆದರೆ ಕುಟುಂಬದ ಮೂವರೂ ಕೊಲೆಯಾಗಿ ಈತನಿಗೆ ಮಾತ್ರ ಕೈಗ ಬೆರಳಿಗೆ ಗಾಯವಾಗಿದ್ದು ನೋಡಿ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ. ಆ ದಿನ ತನಗೆ ಪೋಷಕರು ಹೊಡೆದರು ಎಂಬ ಕಾರಣಕ್ಕೆ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಈತ ಮೊದಲೇ ಚಾಕು ತಂದಿಟ್ಟುಕೊಂಡಿದ್ದನಂತೆ.
 
ಸಂಜೆ ಕುಟುಂಬದ ಜತೆ ಸಹಜವಾಗಿಯೇ ಕಾಲ ಕಳೆದ ಈತ ಮಧ್ಯರಾತ್ರಿ ಪೋಷಕರ ಕೊಠಡಿಗೆ ತೆರಳಿ ಮೊದಲು ತಂದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಎಚ್ಚರಗೊಂಡು ಕಿರುಚಿದ ತಾಯಿಗೂ ಚಾಕುವಿನಿಂದ ಇರಿದಿದ್ದ. ನಂತರ ಸಹೋದರಿಯ ಕೊಠಡಿಗೆ ತೆರಳಿ ಚಾಕುವಿನಿಂದ ಕುತ್ತಿಗೆ ಸೀಳಿದ್ದ. ನಂತರ ದರೋಡೆ ನಡೆದಂತೆ ಸಾಕ್ಷ್ಯ ಸೃಷ್ಟಿಸಿ ದರೋಡೆಕೋರರು ತನ್ನ ಕುಟುಂಬದವರನ್ನು ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ. ಆದರೆ ಏನೂ ದರೋಡೆಯಾಗದೇ ಇರುವುದರಿಂದ ಸಂಶಯಗೊಂಡು ವಿಚಾರಣೆ ನಡೆಸಿದಾಗ ನಿಜ ಕಾರಣ ಬಯಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಾಳಿಪಟ ಹಾರಿಸುವುದನ್ನು ವಿರೋಧಿಸಿದ್ದಕ್ಕೆ ಪೋಷಕರನ್ನೇ ಕೊಂದ ಯುವಕ!

ನವದೆಹಲಿ: ಓದದೇ ಸದಾ ಗಾಳಿಪಟ ಹಾರಿಸುತ್ತಾ ಕಾಲ ಕಳೆಯುತ್ತೀಯಾ ಎಂದು ಬೈದಿದ್ದಕ್ಕೆ ಪೋಷಕರನ್ನೇ 19 ವರ್ಷದ ...

news

ಗರ್ಲ್ ಫ್ರೆಂಡ್ ನ ವೆಚ್ಚ ಭರಿಸಲು ಕಳ್ಳತನ ಮಾಡಿದ ಗೂಗಲ್ ಉದ್ಯೋಗಿ

ನವದೆಹಲಿ: ಸಾಫ್ಟ್ ವೇರ್ ದೈತ್ಯ ಗೂಗಲ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ...

news

ಒಡಿಶಾ, ಆಂಧ್ರಕ್ಕೆ ಅಪ್ಪಳಿಸಿದ ತಿತ್ಲಿ

ನವದೆಹಲಿ: ಒಡಿಶಾ, ಆಂಧ‍್ರಪ್ರದೇಶ ಕರಾವಳಿಗೆ ತಿತ್ಲಿ ಚಂಡಮಾರುತ ಅಪ್ಪಳಿಸಿದ್ದು, ಲಕ್ಷಾಂತರ ಜನರನ್ನು ...

news

ಕೇಂದ್ರದ ವಿರುದ್ಧ ಮಾತಾಡಿಯೇ ಇಲ್ಲ ಎಂದ ಸಚಿವ ನಿತಿನ್ ಗಡ್ಕರಿ

ನವದೆಹಲಿ: ತಮ್ಮದೇ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂತು ಎಂದು ವಿಡಿಯೋ ಸಮೇತ ಕಾಂಗ್ರೆಸ್ ...

Widgets Magazine