ಶಾರುಖ್ ಸಿನಿಮಾ ನೋಡ್ತಿದ್ದೇನೆ ಕಾಪಾಡಿ ಎಂದು ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿದ ಭೂಪ

NewDelhi, ಮಂಗಳವಾರ, 8 ಆಗಸ್ಟ್ 2017 (08:37 IST)

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಾರ್ವಜನಿಕರು ಮಾಡುವ ಮನವಿಗೆ ತಕ್ಷಣ ಸ್ಪಂದಿಸುವವರು ಎಂದು ಅವರನ್ನು ಎಲ್ಲರೂ ಹೊಗಳುತ್ತಾರೆ.


 
ಆದರೆ ಅವರ ಇದೇ ಒಳ್ಳೆತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಅಂತಹದ್ದೇ ಒಂದು ಪ್ರಕರಣ ನಡೆದಿದೆ. ಪುಣೆಯ ಸಿನಿಮಾ ಥಿಯೇಟರ್ ಒಂದರಲ್ಲಿ ಶಾರುಖ್ ಖಾನ್ ಅಭಿನಯದ ಜಬ್ ಹ್ಯಾರಿ ಮೆಟ್ ಸೆಜಾಲೋ ಸಿನಿಮಾ ನೋಡುತ್ತಿದ್ದ ವಿಶಾಲ್ ಸೂರ್ಯವಂಶಿ ಎಂಬಾತ ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿದ್ದಾನೆ.
 
‘ಮೇಡಂ ಶಾರುಖ್ ಖಾನ್ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೆಜಾಲೋ’ ಸಿನಿಮಾವನ್ನು ಪುಣೆಯ ಕ್ಸಿಯೋನ್ ಸಿನೆಮಾ ಥಿಯೇಟರ್ ನಲ್ಲಿ ನೋಡುತ್ತಿದ್ದೇನೆ. ದಯವಿಟ್ಟು ತಕ್ಷಣ ನನ್ನನ್ನು ಕಾಪಾಡಿ’ ಎಂದು ಟ್ವೀಟ್ ಮಾಡಿದ್ದಾನೆ.
 
ಇದಕ್ಕೆ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಟ್ವೀಟ್ ಮಾತ್ರ ಭಾರೀ ಲೈಕ್ಸ್ ಪಡೆದಿದೆ. ಹಿಂದೊಮ್ಮೆ ವ್ಯಕ್ತಿಯೊಬ್ಬ ಸುಷ್ಮಾಗೆ ರೆಫ್ರಿಜರೇಟರ್ ರಿಪೇರಿ  ಮಾಡಿಸಿಕೊಡಿ ಎಂದು ಟ್ವೀಟ್ ಮಾಡಿದ್ದ. ಇದಕ್ಕೆ ಸಹೋದರ ಇದು ನನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ. ನನಗೆ ಮನುಷ್ಯರ ಹಲವು ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದು ಉತ್ತರಿಸಿದ್ದರು.
 
ಇದನ್ನೂ ಓದಿ.. ವಿವಾದಕ್ಕೆಡೆ ಮಾಡಿದ ಜಗ್ಗೇಶ್ ಟ್ವೀಟ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸುಷ್ಮಾ ಸ್ವರಾಜ್ ಜಬ್ ಹ್ಯಾರಿ ಮೆಟ್ ಸೆಜಾಲೋ ಟ್ವಿಟರ್ ಶಾರುಖ್ ಖಾನ್ ಮನರಂಜನೆ Twitter Entertainment Shahrukh Khan Sushma Swaraj Jab Harry Met Sejalo

ಸುದ್ದಿಗಳು

news

ಮಾಜಿ ಸಚಿವ ಆನಂದ್ ಆಸ್ನೋಟಿಕರ್‌ಗೆ ಜೆಡಿಎಸ್ ಗಾಳ

ಉಡುಪಿ: ಮಾಜಿ ಸಚಿವ ಆನಂದ್ ಆಸ್ನೋಟಿಕರ್‌ಗೆ ಜೆಡಿಎಸ್ ಗಾಳ ಹಾಕಲು ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ...

news

ಆಂಬ್ಯುಲೆನ್ಸ್ ತಡೆದ ಬಿಜೆಪಿ ಮುಖಂಡ: ರೋಗಿ ಸಾವು

ಬಿಜೆಪಿ ಮುಖಂಡನೊಬ್ಬ ಆಂಬ್ಯುಲೆನ್ಸ್ ತಡೆದ ಪರಿಣಾಮ ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದ ರೋಗಿ ...

news

ಇದು ವೈಯಕ್ತಿಕ ಯುದ್ಧವಲ್ಲ, ಗೆಲುವು ಖಚಿತ: ಅಹ್ಮದ್ ಪಟೇಲ್

ಅಹಮದಾಬಾದ್: ರಾಜ್ಯಸಭೆ ಚುನಾವಣೆ ವೈಯಕ್ತಿಕ ಯುದ್ಧವಲ್ಲ. ಚುನಾವಣೆಯಲ್ಲಿ ನನ್ನ ಗೆಲುವು ಖಚಿತವಾಗಿದೆ ಎಂದು ...

news

ಅಮೆರಿಕ ರಾಯಭಾರಿ ಕಚೇರಿಯ ಕೌನ್ಸುಲ್‌ರಾಗಿ ರಾಬರ್ಟ್ ಬುರ್ಗೆಸ್ ಅಧಿಕಾರ ಸ್ವೀಕಾರ

ಚೆನ್ನೈ: ಯುನೈಟೆಡ್ ಸ್ಟೇಟ್ಸ್ ಕಾನ್ಸುಲ್ ಜನರಲ್ ಆಗಿ ಆಗಸ್ಟ್ 7 (2017) ರಂದು ರಾಬರ್ಟ್ ಬುರ್ಗೆಸ್ ಅಧಿಕಾರ ...

Widgets Magazine