ಒಲಿಂಪಿಕ್ಸ್: ಕ್ವಾ.ಫೈನಲ್ ತಲುಪಿದ ನಾಲ್ವರಿಗೂ ಡಿಎಸ್‌ಪಿ ಹುದ್ದೆ

ಚಂಢೀಗಡ, ಶನಿವಾರ, 23 ಆಗಸ್ಟ್ 2008 (09:34 IST)

ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಹರಿಯಾಣದ ಬಾಕ್ಸ್‌ರ್‌ಗಳಾದ ವಿಜಯೆಂದರ್ ಕುಮಾರ್, ಜಿತೆಂದರ್ ಕುಮಾರ್ ಮತ್ತು ಅಖಿಲ್ ಕುಮಾರ್ ಮತ್ತು ಕುಸ್ತಿಪಟು ಯೋಗೇಶ್ವರ್ ದತ್ ಅವರುಗಳನ್ನು ಡೆಪ್ಯೂಟಿ ಸೂಪರಿಡೆಂಟ್ ಅಫ್ ಪೊಲೀಸ್ ಆಗಿ ನಿಯೋಜಿಸಲಾಗುವುದು ಎಂದು ಸರಕಾರ ಘೋಷಿಸಿದೆ.

ಅವರು ಒಲಿಂಪಿಕ್ಸ್‌ನಲ್ಲಿ ಮಾಡಿದ ಪ್ರಮುಖ ಸಾಧನೆಗಳನ್ನು ಗುರುತಿಸಿ ಪುರಸ್ಕರಿಸುವ ನಿಟ್ಟಿನಲ್ಲಿ ಮೂವರು ಬಾಕ್ಸ್‌ರ್‌ಗಳು ಮತ್ತು ಕುಸ್ತಿಪಟುವನ್ನು ಡಿಎಸ್‌ಪಿ ಆಗಿ ನಿಯೋಜಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಭೂಪಿಂದರ್ ಹೂಡ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬಾಕ್ಸಿಂಗ್ ಕೋಚ್ ಜಗದೀಶ್ ಸಿಂಗ್ ಅವರಿಗೆ ಸರಕಾರ 25ಲಕ್ಷ ನಗದು ಪುರಸ್ಕಾರ ಪ್ರಕಟಿಸಿದೆ. ಹರಿಯಾಣದ ಮೂವರು ಬಾಕ್ಸ್‌ರ್‌‌ಗಳಿಗೂ ಜಗದೀಶ್ ಸಿಂಗ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು.

ಬಾಕ್ಸ್‌ರ್‌ಗಳು ಮತ್ತು ಕುಸ್ತುಪಟುವನ್ನು ಡಿಎಸ್‌ಪಿ ಆಗಿ ನಿಯೋಜಿಸುವ ನಿರ್ಣಯದ ಹೊರತಾಗಿ, ಶುಕ್ರವಾರ ಸೆಮಿಫೈನಲ್‌ನಲ್ಲಿ ಸೋಲು ಕಂಡ ವಿಜಯೆಂದರ್‌ಗೆ ಹರಿಯಾಣ ಸರಕಾರ ಈಗಾಗಲೇ 50ಲಕ್ಷ ಪುರಸ್ಕಾರವನ್ನು ಘೋಷಿಸಿದೆ ಮತ್ತು ಜಿತೆಂದರ್ ಕುಮಾರ್, ಅಖಿಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಅವರಿಗೆ ತಲಾ 25ಲಕ್ಷ ಪುರಸ್ಕಾರವನ್ನು ಪ್ರಕಟಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine