ಒಲಿಂಪಿಕ್ ಗೇಮ್ಸ್‌ಗೆ 'ವರ್ಣರಂಜಿತ ತೆರೆ'

ಬೀಜಿಂಗ್, ಭಾನುವಾರ, 24 ಆಗಸ್ಟ್ 2008 (18:28 IST)

PTI
29ನೇ ಐತಿಹಾಸಿಕ ಒಲಿಂಪಿಕ್ ಭಾನುವಾರ ಸಂಜೆ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು.

16 ದಿನಗಳ ಕಾಲ ನಡೆದ ಮಹಾನ್ ಕ್ರೀಡಾಕೂಟಕ್ಕೆ ಚೀನಾ ಅಧ್ಯಕ್ಷ ಹೂ ಜಿಂಟಾವೋ ಅವರು ದೇಶದ ರಾಷ್ಟ್ರಗೀತೆಯೊಂದಿಗೆ ಧ್ವಜವನ್ನು ಮೇಲಕ್ಕೆ ಹಾರಿ ಬಿಡುವ ಮೂಲಕ ಮಕ್ತಾಯ ಸಮಾರಂಭಕ್ಕೆ ಚಾಲನೆ ನೀಡಿದರು.'ಫುವಾ'ಎಂಬ ಚೀನಾದ ಸಂಗೀತದ ಮೂಲಕ ಬೀಜಿಂಗ್ ಒಲಿಂಪಿಕ್ ಗೇಮ್ಸ್ ಸಮಾರಂಭಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.

ವಿರಾಮ ಎಂಬ ಸಂದೇಶದೊಂದಿಗೆ 'ಫುವಾ' ಸಂಗೀತದ ನಾದದೊಂದಿಗೆ ಒಲಿಂಪಿಕ್ ಗೇಮ್ಸ್ ಅನ್ನು ಅದ್ದೂರಿಯಾಗಿ ಸಂಯೋಜಿಸಿ ಜಾಗತಿಕ ಮಟ್ಟದಲ್ಲಿ ಚೀನಾ ಸೂಪರ್ ಪವರ್ ಅನ್ನು ಜಗಜ್ಜಾಹೀರುಗೊಳಿಸಿದೆ.

ಈ ಬಾರಿ ಕೆಂಪುಕೋಟೆ ಚೀನಾ ನೆಲದಲ್ಲಿ ನಡೆದ ಅದ್ದೂರಿ ಐತಿಹಾಸಿಕ ಒಲಿಂಪಿಕ್ ಕ್ರೀಡಾಕೂಟ ನೂತನ ಇತಿಹಾಸವೊಂದನ್ನು ಸೃಷ್ಟಿಸಿದೆ.

ಇಡೀ ದೇಶವೇ ನಿಬ್ಬೆರಗಾಗುವ ರೀತಿಯ ಸುಡುಮದ್ದುಗಳ ಪ್ರದರ್ಶನ,ಇಡೀ ಬರ್ಡ್ಸ್ ನೆಸ್ಟ್ ‌ಕ್ರೀಡಾಂಗಣವೇ ಮಾಯಾಲೋಕವನ್ನೇ ಸೃಷ್ಟಿಸುವ ಮೂಲಕ ನ ಭೂತೋ ನ ಭವಿಷ್ಯತಿ ಎಂಬಂತೆ ಕಾರ್ಯಕ್ರಮಗಳ ಮೂಲಕ ಕ್ರೀಡಾಭಿಮಾನಿಗಳನ್ನು ಮೂಕವಿಸ್ಮಿತರನ್ನಾಗಿಸಿತು.

ಮೈನವಿರೇಳಿಸುವಂತಹ ಆಕರ್ಷಕ ಸಾಂಪ್ರದಾಯಿಕ ಕಲೆಗಳ ನರ್ತನ,ಬಾನಂಗಳದಲ್ಲಿ ಮೂಡಿದ ಬಣ್ಣಬಣ್ಣದ ಚಿತ್ತಾರ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು.

ಪ್ಲ್ಯಾಗ್ ಹಸ್ತಾಂತರ: ಮುಕ್ತಾಯ ಸಮಾರಂಭದಲ್ಲಿ ಅಧ್ಯಕ್ಷ ಜಿ ಹುಂಟಾವೋ ಅವರು 2012ರಲ್ಲಿ ಲಂಡನ್‌ನಲ್ಲಿ ಒಲಿಂಪಿಕ್ ನಡೆಯಲಿದ್ದು,ಒಲಿಂಪಿಕ್ ಪ್ಲ್ಯಾಗ್ ಅನ್ನು ಲಂಡನ್ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ಪದಕ ಪಟ್ಟಿಯಲ್ಲಿ ಅಮೆರಿಕ ಪ್ರಥಮ:16 ದಿನಗಳ ಕಾಲ ನಡೆದ ಒಲಿಂಪಿಕ್ ಪದಕ ಗಳಿಕೆಯಲ್ಲಿ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ 110 ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine