ಒಲಿಂಪಿಕ್ ಮುಕ್ತಾಯ ಸಮಾರಂಭಕ್ಕೆ ಕ್ಷಣಗಣನೆ

ಬೀಜಿಂಗ್, ಭಾನುವಾರ, 24 ಆಗಸ್ಟ್ 2008 (15:41 IST)

PTI
ಬೀಜಿಂಗ್‌ನ 2008ರ 29 ನೇ ಒಲಿಂಪಿಕ್ ಗೇಮ್ಸ್‌ನ ವರ್ಣರಂಜಿತ ಭಾನುವಾರ ಸಂಜೆ ಭಾರತೀಯ ಕಾಲಮಾನ ಸಂಜೆ 5.30ಕ್ಕೆ ಆರಂಭಗೊಳ್ಳಲಿದ್ದು, 7.30ಕ್ಕೆ ಮುಕ್ತಾಯಗೊಳ್ಳಲಿದೆ.

ಇಂದು ಬೆಳಿಗ್ಗೆ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ ಚೀನಾ 51 ಸ್ವರ್ಣ ಪದಕವನ್ನು ತನ್ನ ಬಗಲಿಗೇರಿಸಿಕೊಳ್ಳುವ ಮೂಲಕ ಒಟ್ಟು 100 ಪದಕಗಳನ್ನು ಪಡೆದಿದೆ. ಅದರಂತೆ ಅಮೆರಿಕ 36 ಚಿನ್ನ, 38 ಬೆಳ್ಳಿ, 36ಕಂಚಿನೊಂದಿಗೆ ಒಟ್ಟು 110 ಪದಕ ಗಳಿಸಿ ಮೊದಲ ಸ್ಥಾನ ಅಲಂಕರಿಸಿದೆ. ರಷ್ಯಾ 24 ಬಂಗಾರ, 21ರಜತ, 28ಕಂಚಿನೊಂದಿಗೆ 73 ಪದಕ ಗಳಿಸಿದೆ.

ಇಂದು ಸಂಜೆ ಅದ್ದೂರಿಯಾಗಿ ಒಲಿಂಪಿಕ್ ಗೇಮ್ಸ್ ಸಮಾರಂಭ ಮುಕ್ತಾಯಗೊಳ್ಳಲಿದ್ದು, ಸಮಾರಂಭದಲ್ಲಿ 2012ರಲ್ಲಿ ಲಂಡನ್‌ನಲ್ಲಿ ಮುಂದಿನ 30ನೇ ಒಲಿಂಪಿಕ್ ಗೇಮ್ಸ್ ನಡೆಯಲಿದ್ದು, ಲಂಡನ್‌ಗೆ ಒಲಿಂಪಿಕ್ ಪ್ಲ್ಯಾಗ್ ಅನ್ನು ಹಸ್ತಾಂತರಿಸಲಿದೆ.

ಆಗೋಸ್ಟ್ 8ರಂದು ಬೀಜಿಂಗ್‌ನ ಬರ್ಡ್ ನೆಸ್ಟ್ ಕ್ರೀಡಾಂಗಣದಲ್ಲಿ 90 ಸಾವಿರ ವೀಕ್ಷಕರ ನಡುವೆ ಸುಮಾರು ಎರಡುವರೆ ತಾಸುಗಳ ಕಾಲ ಬಾನಂಗಳಲ್ಲಿ ಸುಡುಮದ್ದುಗಳ ಆಕರ್ಷಕ ಚಿತ್ತಾರದೊಂದಿಗೆ ಒಲಿಂಪಿಕ್ ಗೇಮ್ಸ್ ಉದ್ಘಾಟನೆಗೆ ಚಾಲನೆ ನೀಡಲಾಗಿತ್ತು.

ಭಾನುವಾರ ಸಂಜೆ ನಡೆಯಲಿರುವ ಮುಕ್ತಾಯ ಸಮಾರಂಭ ಮೂರು ಗಂಟೆಗಳ ಕಾಲ ನಡೆಯಲಿದ್ದು,ಇದರಲ್ಲಿ ರಾಜಧಾನಿಯ 18 ಪ್ರದೇಶಗಳಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಅಂತ್ಯಮ ಇವೆಂಟ್: ಭಾನುವಾರ ನಡೆದ ಅಂತಿಮ ಸ್ಪರ್ಧೆಯಲ್ಲಿ ಕೀನ್ಯಾದ ಸ್ಯಾಮ್ಯುವೆಲ್ ವಾನ್‌ಜಿರೂ ಒಲಿಂಪಿಕ್ ಗೇಮ್ಸ್‌ನ ಪುರುಷರ ಮ್ಯಾರಾಥಾನ್‌ನಲ್ಲಿ ಕೊನೆಯ ದಿನ ಚಿನ್ನದ ಪದಕ ಪಡೆದರು.

ಒಲಿಂಪಿಕ್ ಗೇಮ್ಸ್‌ನ 15ನೇ ದಿನದ ಸ್ಪರ್ಧೆಕಣದಲ್ಲಿ ಚೀನಾ 51 ಚಿನ್ನದ ಪದಕ ಪಡೆದರೆ,ಅಮೆರಿಕ 36ಬಂಗಾರ,ರಷ್ಯಾ 24 ಹಾಗೂ ಗ್ರೇಟ್ ಬ್ರಿಟನ್ 19ಸ್ವರ್ಣ ಪದಕಗಳನ್ನು ಪಡೆದಿವೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine