ಗುಡ್ಡಗಾಡು ಬೈಕ್ ರೇಸ್-ಸ್ಪಿಟ್ಜ್‌ಗೆ ಬಂಗಾರ

ಬೀಜಿಂಗ್ , ಶನಿವಾರ, 23 ಆಗಸ್ಟ್ 2008 (20:53 IST)

ಒಲಿಂಪಿಕ್ ಮಹಿಳಾ ಗುಡ್ಡಗಾಡು ಬೈಕ್ ರೇಸ್ ಸ್ಪರ್ಧೆಯಲ್ಲಿ ಜರ್ಮನಿಯ ಸಬಿನೆ ಸ್ಪಿಟ್ಜ್ ಚಿನ್ನದ ಪದಕ ಜಯಿಸಿದ್ದು,4 ವರ್ಷಗಳ ಹಿಂದೆ ಅವರು ಅಥೇನ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಸುಮಾರು 2.75 ಮೈಲು ಪಥದ 6 ಸುತ್ತುಗಳನ್ನು ಸ್ಪಿಟ್ಜ್ ಒಂದು ತಾಸು 45 ನಿಮಿಷ, 11 ಸೆಕೆಂಡುಗಳಲ್ಲಿ ಮುಗಿಸಿದರು. ಅವರು ಅಂತಿಮ ರೇಖೆಯಿಂದ 5 ಮೀಟರ್ ದೂರದಲ್ಲಿ ತಡೆದು, ತಮ್ಮ ಬೈಕನ್ನು ಹಾರಿಸುತ್ತಾ ಅಂತಿಮ ರೇಖೆಯನ್ನು ದಾಟಿದರು.

ಪೊಲ್ಯಾಂಡಿನ ಮಾಜಾ ವ್ಲೊಸ್ಜೆಜೊವ್ಸ್‌ಕ ಸ್ಪಿಟ್ಜ್‌ಗಿಂತ 41 ಸೆಕೆಂಡುಗಳಷ್ಟು ಹಿಂದೆ ಬಿದ್ದು, ಬೆಳ್ಳಿ ಪದಕಕ್ಕೆ ಪಾತ್ರರಾದರು. ರಷ್ಯಾದ ಇರಿನಾ ಕಲೆಂನ್ಟೀವಾ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಮೊದಲ ಸುತ್ತಿನ ಬಳಿಕ ಸ್ಪಿಟ್ಜ್ 21 ಸೆಕೆಂಡುಗಳಷ್ಟು ಮುನ್ನಡೆ ಪಡೆದಿದ್ದರು, ಎರಡನೇ ಸುತ್ತಿನ ನಂತರ 49 ಸೆಕೆಂಡುಗಳಷ್ಟು ಮುನ್ನಡೆ ಪಡೆದು ಎದುರಾಳಿಗಳಿಂದ ಯಾವುದೇ ಭೀತಿಯನ್ನು ಎದುರಿಸಲಿಲ್ಲ.

ಹಾಲಿ ಪದಕದಾರಿ ನಾರ್ವೆಯ ಗುನ್ನ್ ರಿಟ ದಾಹ್ಲೆ ಪ್ಲೆಸ್ಜಾ ಕೇವಲ ಮೂರು ಸುತ್ತನ್ನು ಪೂರ್ಣಗೊಳಿಸುವಷ್ಟರಲ್ಲಿ ತಾಂತ್ರಿಕ ಸಮಸ್ಯೆಗಳ ಕಾರಣ ಹೇಳಿ ಸ್ಪರ್ಧೆಯಿಂದ ಹೊರ ನಡೆದರು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine