ನಾನೊಬ್ಬ ಅದ್ಭುತ ಶಕ್ತಿಯಲ್ಲ: ಉಸೇನ್ ಬೋಲ್ಟ್

ಬೀಜಿಂಗ್, ಶನಿವಾರ, 23 ಆಗಸ್ಟ್ 2008 (17:37 IST)

Widgets Magazine

ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂರು ವಿಶ್ವದಾಖಲೆಯನ್ನು ನಿರ್ಮಿಸಿದ ಜಮೈಕಾದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್,ತಾನೊಂದು ಅದ್ಭುತ ಶಕ್ತಿಯಲ್ಲ, ಆದರೆ ನಾನೊಬ್ಬ ಸಾಧಾರಣಾ ಅಥ್ಲೀಟ್ ಎಂದು ಶನಿವಾರದಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

22 ರ ಹರೆಯದ ಜಮೈಕಾದ ತರುಣ ಉಸೇನ್ ಬೋಲ್ಟ್ ಅಕ್ಷರಶ ಈ ಬಾರಿಯ ಬೀಜಿಂಗ್ ಒಲಿಂಪಿಕ್ ಗೇಮ್ಸ್‌ನಲ್ಲಿ ರಿಯಲ್ ಹೀರೋವಾಗಿ ಕಂಗೊಳಿಸಿದ್ದರು.ಮತ್ತೊಬ್ಬ ವ್ಯಕ್ತಿ ಎಂಟು ಪದಕಗಳೊಂದಿಗೆ ಅಚ್ಚರಿಗೆ ನೂಕಿದ ಪೆಲ್ಪ್ಸ್.

ಉಸೇನ್ ಬೋಲ್ಟ್ 100 ಮೀ.-200 ಮೀ.ಹಾಗೂ 400 ಮಿ.ರಿಲೆಯಲ್ಲಿ ಸ್ವರ್ಣ ಪದಕವನ್ನು ಜಯಿಸಿದ್ದಲ್ಲದೆ,ವಿಶ್ವದಾಖಲೆಯನ್ನೇ ನಿರ್ಮಿಸಿದ್ದರು. ಆದರೆ ಓಟದಲ್ಲಿ ಗುರಿ ತಲುಪು ವಾಗ ಅವರು ಯಾವುದೇ ಒತ್ತಡಕ್ಕೆ ಒಳಗಾಗದೆ ಇದ್ದದ್ದು ಮಹತ್ವದ ಅಂಶವಾಗಿತ್ತು.

ತನ್ನ ಗೆಲುವಿನ ಬಳಿಕ ಹಲವಾರು ಮಂದಿ ತನ್ನನ್ನು ಪ್ರಶ್ನೆಗೊಳಪಡಿಸಿರುವುದಾಗಿ ಹೇಳಿದ ಬೋಲ್ಟ್, ನಿಮಗೆ ಇದು ಹೇಗೆ ಸಾಧ್ಯವಾ ಯಿತೆಂದು. ಮತ್ತೆ ಕೆಲವರು ನೀವು ಅದ್ಭುತವಾದನ್ನೇ ಸಾಧಿಸಿದ್ದೀರಿ ಎಂಬುದಾಗಿ ಹೇಳಿದ್ದರು. ಆದರೆ ನಾನು ನಿಜಕ್ಕೂ ಅದ್ಭುತ ಶಕ್ತಿಯಲ್ಲ,ಸಾಧಾರಣವಾದ ಅಥ್ಲೀಟ್‌ ಆಗಿರುವುದಾಗಿ ತಿಳಿಸಿರುವುದಾಗಿ ಹೇಳಿದ್ದಾರೆ.

ಬೋಲ್ಟ್ 100 ಮೀ. ಅನ್ನು 9.69 ಸೆಕೆಂಡ್ಸ್‌ಗಳಲ್ಲಿ,200ಮೀ. ಓಟದಲ್ಲಿ 19.30 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿದ್ದರೆ, 400 ಮೀ. ರಿಲೆಯಲ್ಲಿ 37.10 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ವಿಶ್ವ ದಾಖಲೆ ಬರೆಯುವ ಮೂಲಕ 15ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine